AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rain: ಗೋಕರ್ಣ ಮಹಾಬಲೇಶ್ವರನ ಸನ್ನಿಧಿಗೆ ನುಗ್ಗಿದ ನೀರು; ಪೂಜಾ ವಿಧಿವಿಧಾನಕ್ಕೆ ಕೆಲಕಾಲ ವಿಳಂಬ

Gokarna: ಪ್ರತಿ ವರ್ಷ ಮಳೆಗಾಲದ ಪೂರ್ವದಲ್ಲಿ ದೇವಾಲಯದ ತೀರ್ಥ, ಅಭಿಷೇಕದ ನೀರು ಹೋಗುವ ಸೋಮಸೂತ್ರ ನಾಲೆಯನ್ನು ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ ಈ ವರ್ಷ ಸ್ವಚ್ಛಗೊಳಿಸಿಲ್ಲ. ಜತೆಗೆ ಗ್ರಾಮ ಪಂಚಾಯತ್ ವತಿಯಿಂದ ಈ ನೀರು ಸೇರುವ ಸಂಗಮ ನಾಲೆಯಲ್ಲಿ ಮರಳಿನ ಚೀಲವನ್ನು ಅಡ್ಡಲಾಗಿ ಹಾಕಲಾಗಿದೆ. ಇದರಿಂದ ಹರಿದು ಹೋದ ನೀರು ವಾಪಸ್ ಬರುತ್ತಿದೆ ಎನ್ನಲಾಗಿದೆ.

Karnataka Rain: ಗೋಕರ್ಣ ಮಹಾಬಲೇಶ್ವರನ ಸನ್ನಿಧಿಗೆ ನುಗ್ಗಿದ ನೀರು; ಪೂಜಾ ವಿಧಿವಿಧಾನಕ್ಕೆ ಕೆಲಕಾಲ ವಿಳಂಬ
ದೇವಸ್ಥಾನಕ್ಕೆ ನುಗ್ಗಿದ ನೀರು
TV9 Web
| Edited By: |

Updated on: Jul 15, 2021 | 8:44 PM

Share

ಕಾರವಾರ: ವಿಶ್ವವಿಖ್ಯಾತ ಗೋಕರ್ಣದ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ನೀರು ತುಂಬಿ ನಿತ್ಯ ಪೂಜಾ ವಿಧಿವಿಧಾನಕ್ಕೆ ಕೆಲಕಾಲ ವಿಳಂಬವಾದ ಘಟನೆ ಗುರುವಾರ ಮುಂಜಾನೆ ನಡೆದಿದೆ. ತಕ್ಷಣ ದೇವಾಲಯದ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಅವರ ಉಪಸ್ಥಿತಿಯಲ್ಲಿ ಸಿಬ್ಬಂದಿಗಳೇ ಸೇರಿ ನೀರು ಹರಿದುಹೋಗುವಂತೆ ವ್ಯವಸ್ಥೆ ಮಾಡಿದ್ದಾರೆ.

ಪ್ರತಿ ವರ್ಷ ಮಳೆಗಾಲದ ಪೂರ್ವದಲ್ಲಿ ದೇವಾಲಯದ ತೀರ್ಥ, ಅಭಿಷೇಕದ ನೀರು ಹೋಗುವ ಸೋಮಸೂತ್ರ ನಾಲೆಯನ್ನು ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ ಈ ವರ್ಷ ಸ್ವಚ್ಛಗೊಳಿಸಿಲ್ಲ. ಜತೆಗೆ ಗ್ರಾಮ ಪಂಚಾಯತ್ ವತಿಯಿಂದ ಈ ನೀರು ಸೇರುವ ಸಂಗಮ ನಾಲೆಯಲ್ಲಿ ಮರಳಿನ ಚೀಲವನ್ನು ಅಡ್ಡಲಾಗಿ ಹಾಕಲಾಗಿದೆ. ಇದರಿಂದ ಹರಿದು ಹೋದ ನೀರು ವಾಪಸ್ ಬರುತ್ತಿದೆ ಎನ್ನಲಾಗಿದೆ.

ಕಾಲುವೆ ಕುಸಿದಿದೆ ಮಂದಿರದಿಂದ ಸಂಗಮ ನಾಲೆಗೆ ಸೇರಲು 300 ಮೀಟರ್ ಅಧಿಕ ಉದ್ದದ ಕಾಲುವೆ ಇದ್ದು, ಈ ಕಾಲುವೆ ಖಾಸಗಿ ಜಮೀನಿನಲ್ಲಿ ಹಾದುಹೋಗಿದೆ. ಏಳು ಅಡಿ ಆಳವಾದ ಈ ಕಾಲುವೆಗೆ ಎರಡು ಕಡೆ ಕಟ್ಟೆ ( ಪಿಚ್ಚಿಂಗ್) ಕಟ್ಟಲಾಗಿತ್ತು. ಆದರೆ ಬಹು ಪುರಾತನ ಕಾಲುವೆ ಕಟ್ಟಿದ ಕಟ್ಟೆ ಹಲವೆಡೆ ಕುಸಿದು ಬಿದ್ದಿದ್ದು, ಚಿಕ್ಕ ಜಾಗದಲ್ಲಿ ನೀರು ಹೋಗುತ್ತಿದೆ . ಇದನ್ನು ತೆರವುಗೊಳಿಸಿ, ಹೊಸದಾಗಿ ಕಾಲುವೆಯ ಅಂಚನ್ನು ಕಟ್ಟಿಕೊಡಬೇಕಾಗಿರುವುದು ತುರ್ತು ಅವಶ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: 

ಲಾಕ್​ಡೌನ್​ ಸಮಯದ ಸದುಪಯೋಗ; 32 ಅಡಿ ಬಾವಿ ತೋಡಿ ಗ್ರಾಮಸ್ಥರಿಗೆ ನೆರವಾದ ಉತ್ತರ ಕನ್ನಡದ ವ್ಯಕ್ತಿ

ಗೋಕರ್ಣ ಕ್ಷೇತ್ರಕ್ಕೆ ಸಚಿವ ಕೆ ಎಸ್ ಈಶ್ವರಪ್ಪ ಭೇಟಿ; ಕೋಟಿತೀರ್ಥ ಪುಷ್ಕರಣಿ ಅಭಿವೃದ್ಧಿ ಯೋಜನೆಗೆ ಚಾಲನೆ

(Karnataka Rain water reach Gokarna Mahabaleshwar Temple some problem for worship)

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?