ಲಾಕ್​ಡೌನ್​ ಸಮಯದ ಸದುಪಯೋಗ; 32 ಅಡಿ ಬಾವಿ ತೋಡಿ ಗ್ರಾಮಸ್ಥರಿಗೆ ನೆರವಾದ ಉತ್ತರ ಕನ್ನಡದ ವ್ಯಕ್ತಿ

ಕಳೆದ ಲಾಕ್​ಡೌನ್ ಅವಧಿಯಲ್ಲಿ ಕೆಲಸ ಇಲ್ಲದೇ ಮನೆಯಲ್ಲಿ ಕುಳಿತಿದ್ದರಿಂದ ಸುಮಾರು 28 ಅಡಿ ಆಳದ ಬಾವಿ ತೋಡಿದ್ದೆ. ಆದರೆ ನೀರು ಬಂದಿರಲಿಲ್ಲ. ಈ ಬಾರಿಯ ಲಾಕ್​ಡೌನ್ ಅವಧಿಯನ್ನು ಸದುಪಯೋಗ ಪಡಿಸಿಕೊಂಡು ಮತ್ತೆ ಇದೇ ಬಾವಿಯಲ್ಲಿ ನಾಲ್ಕು ಅಡಿ ತೋಡಿದ್ದರಿಂದ ಭರಪೂರ ನೀರು ಬಂದಿದೆ. ಇದರಿಂದ ಖುಷಿಯಾಗಿದೆ ಎಂದು ಬಾವಿ ತೋಡಿದ ವ್ಯಕ್ತಿ ಮಹಾದೇವ ಮಂಕಾಳ ನಾಯ್ಕ ತಿಳಿಸಿದ್ದಾರೆ.

ಲಾಕ್​ಡೌನ್​ ಸಮಯದ ಸದುಪಯೋಗ; 32 ಅಡಿ ಬಾವಿ ತೋಡಿ ಗ್ರಾಮಸ್ಥರಿಗೆ ನೆರವಾದ ಉತ್ತರ ಕನ್ನಡದ ವ್ಯಕ್ತಿ
32 ಅಡಿ ಬಾವಿ ತೋಡಿ ಗ್ರಾಮಸ್ಥರಿಗೆ ನೆರವಾದ ಉತ್ತರ ಕನ್ನಡದ ಮಹಾದೇವ ಮಂಕಾಳು
Follow us
TV9 Web
| Updated By: preethi shettigar

Updated on: Jun 07, 2021 | 11:57 AM

ಉತ್ತರ ಕನ್ನಡ: ಯಾವುದೇ ಕೆಲಸವನ್ನು ಮಾಡುವ ಮೊದಲು ಮನಸ್ಸಿರಬೇಕು ಹಾಗೆಯೇ ಎಂತಹದ್ದೇ ಕೆಲಸವನ್ನಾದರು ಸಾಧಿಸಲು ಆತ್ಮಸ್ಥೈರ್ಯ ಇದ್ದರೆ ಸಾಕು ಎನ್ನುವ ಮಾತಿದೆ. ಈ ಮಾತಿಗೆ ಅಂಕೋಲಾದ ವ್ಯಕ್ತಿಯೊಬ್ಬರು ಉದಾಹರಣೆಯಾಗಿ ನಿಂತಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಕಾಲಹರಣ ಮಾಡದೇ ಬಾವಿ ತೋಡುವ ಕೆಲಸಕ್ಕೆ ಕೈಹಾಕಿ ಇದೀಗ ಯಶಸ್ವಿಯಾಗಿದ್ದಾರೆ. ಏಕಾಂಗಿಯಾಗಿ ಬಾವಿ ತೆಗೆದು ಗ್ರಾಮಕ್ಕೆ ನೀರು ಒದಗಿಸುವ ಮೂಲಕ ಇತ ಆಧುನಿಕ ಭಗೀರಥನಾಗಿದ್ದು, ಸಾರ್ವಜನಿಕರು ವ್ಯಕ್ತಿಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮಂಜುಗುಣಿ ಗ್ರಾಮದ ನಿವಾಸಿಯಾದ ಮಹಾದೇವ ಮಂಕಾಳು ನಾಯ್ಕ ಅವರು ಕಲ್ಲಿನ ನೆಲದಲ್ಲಿ ಬಾವಿ ತೋಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಪ್ರತಿ ವರ್ಷ ಬೇಸಿಗೆ ಬಂತು ಎಂದರೆ ಈ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಒಂದೇ ಒಂದು ಬಾವಿಯಿಂದ 60ಕ್ಕೂ ಹೆಚ್ಚು ಮನೆಯವರು ನೀರು ತರಬೇಕು. ಮಳೆ ಪ್ರಾರಂಭವಾಗುವ ಮುನ್ನ ಕೆಲ ತಿಂಗಳು ಈ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ.

ಅಂತರ್ಜಲ ಬತ್ತಿ ಹೋಗುವುದರಿಂದ ವಾರಕ್ಕೊಮ್ಮೆ ಗ್ರಾಮ ಪಂಚಾಯತಿ ನೀಡುವ ನೀರೇ ಗತಿ. ಹೀಗಾಗಿ ಮಹಾದೇವ ತಮ್ಮ ಮನೆಯ ಹಿತ್ತಲಲ್ಲಿ ಒಂದು ಬಾವಿ ತೆಗೆಯುವ ಆಲೋಚನೆ ಮಾಡಿ ಕೆಲಸ ಪ್ರಾರಂಭಿಸಿದ್ದರು. ಕಳೆದ ಲಾಕ್​ಡೌನ್ ಅವಧಿಯಲ್ಲಿ ಕೆಲಸ ಇಲ್ಲದೇ ಮನೆಯಲ್ಲಿ ಕುಳಿತಿದ್ದರಿಂದ ಸುಮಾರು 28 ಅಡಿ ಆಳದ ಬಾವಿ ತೋಡಿದ್ದೆ. ಆದರೆ ನೀರು ಬಂದಿರಲಿಲ್ಲ. ಈ ಬಾರಿಯ ಲಾಕ್​ಡೌನ್ ಅವಧಿಯನ್ನು ಸದುಪಯೋಗ ಪಡಿಸಿಕೊಂಡು ಮತ್ತೆ ಇದೇ ಬಾವಿಯಲ್ಲಿ ನಾಲ್ಕು ಅಡಿ ತೋಡಿದ್ದರಿಂದ ಭರಪೂರ ನೀರು ಬಂದಿದೆ. ಇದರಿಂದ ಖುಷಿಯಾಗಿದೆ ಎಂದು ಬಾವಿ ತೋಡಿದ ವ್ಯಕ್ತಿ ಮಹಾದೇವ ಮಂಕಾಳ ನಾಯ್ಕ ತಿಳಿಸಿದ್ದಾರೆ.

ಗ್ರಾಮದಲ್ಲಿ ಕೆಲವರ ಮನೆಯಲ್ಲಿ ಬಾವಿ ಇದೆ. ಆದರೆ ಸಮರ್ಪಕವಾಗಿ ನೀರು ಸಿಗುವುದಿಲ್ಲ. ಊರ ಪಕ್ಕದಲ್ಲೇ ಸಮುದ್ರ ಇರುವುದರಿಂದ  ಬೇಸಿಗೆಯಲ್ಲಿ ಬಾವಿಯ ನೀರು ಉಪ್ಪಾಗಿ ಪರಿವರ್ತನೆಯಾಗುತ್ತದೆ. ಹೀಗಾಗಿ ಊರ ಮಂದಿಯೆಲ್ಲಾ ಖಾಲಿ ಕೊಡ ಹಿಡಿದು ನೀರಿಗಾಗಿ ಪರದಾಡುವ ಸಮಸ್ಯೆ ಸಾಮಾನ್ಯವಾಗಿದೆ. ಇದನ್ನು ಕಂಡ ಮಹಾದೇವ ಅವರಿಗೆ ಸಮರ್ಪಕವಾದ ಬಾವಿ ಬೇಕು ಎಂದು ಅನಿಸಿತು. ಆದರೆ ಕೂಲಿ ಕೆಲಸ ಮಾಡುವ ಮಹಾದೇವ ಅವರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸ್ವಂತ ಬಾವಿ ತೆಗೆಸಲು ಸಾಧ್ಯವಿರಲಿಲ್ಲ. ಹೀಗಾಗಿ ಲಾಕ್​ಡೌನ್ ಅವಧಿಯಲ್ಲಿ ಕೂಲಿ ಕೆಲಸವಿಲ್ಲದೇ ಮನೆಯಲ್ಲೇ ಕೂರುವ ಬದಲು ನೀರನ್ನು ಕಾಣಲೇಬೇಕೆಂದು ಸತತ ಪ್ರಯತ್ನ ಮಾಡಿದ್ದಾರೆ.

ಸತತ ಪರಿಶ್ರಮದಿಂದ ಬಂಡೆಗಲ್ಲನ್ನು ಕಡಿದು ಬಾವಿ ತೋಡಿದ್ದು, ಇದೀಗ ಬರಪೂರ ನೀರು ಚಿಮ್ಮುತ್ತಿದೆ. ಸದ್ಯ ತಾವು ತೆಗೆದಿರುವ ಬಾವಿಯ ನೀರನ್ನು ಮನೆಗೆ ಬಳಸಿಕೊಳ್ಳುತ್ತಿರುವ ಮಹಾದೇವ ನಾಯ್ಕ, ಗ್ರಾಮಸ್ಥರಿಗೂ ನೀರು ನೀಡುವ ಮೂಲಕ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ. ಇನ್ನು ಗ್ರಾಮಕ್ಕೆ ಇದ್ದ ನೀರಿನ ಬವಣೆ ಕಂಡು ಮಾದೇವ ಬಾವಿ ತೆಗೆದಿರುವುದಕ್ಕೆ ಗ್ರಾಮಸ್ಥರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಅಕ್ಕಪಕ್ಕದವರ ನೀರಿನ ಬವಣೆ ತೀರಿಸಲು ಈ ಮಹಿಳೆ ಮಾಡಿದ್ದು ಸಾಹಸಗಾಥೆ! ಎರಡು ಬಾವಿ ತೋಡಿ ಸಾಹಸ ಮೆರೆದ 56 ವರ್ಷದ ಮಹಿಳೆ

60 ಅಡಿ ಆಳದ ಎರಡು ಬಾವಿ ನಿರ್ಮಾಣ; ಇಡಿ ಊರಿಗೆ ನೀರನ್ನು ಉಣಿಸಿದ ಕಾರವಾರದ ಮಹಿಳೆ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ