ಗೋಕರ್ಣ ಕ್ಷೇತ್ರಕ್ಕೆ ಸಚಿವ ಕೆ ಎಸ್ ಈಶ್ವರಪ್ಪ ಭೇಟಿ; ಕೋಟಿತೀರ್ಥ ಪುಷ್ಕರಣಿ ಅಭಿವೃದ್ಧಿ ಯೋಜನೆಗೆ ಚಾಲನೆ

ಈ ಪುಷ್ಕರಣಿ ಅಭಿವೃದ್ಧಿ ಯೋಜನೆಯು, 2021-2022ರ ಜಲಾಮೃತ ಯೋಜನೆಯಡಿ ನಡೆಯುತ್ತಿರುವ ಕಾರ್ಯಕ್ರಮವಾಗಿದೆ. ಸಚಿವರಿಗೆ ಕುಮಟಾ ಶಾಸಕ ದಿನಕರ ಶೆಟ್ಟಿ, ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ, ಸಿಇಒ ಪ್ರಿಯಾಂಕಾ ಸಾಥ್ ನೀಡಿದ್ದಾರೆ.

ಗೋಕರ್ಣ ಕ್ಷೇತ್ರಕ್ಕೆ ಸಚಿವ ಕೆ ಎಸ್ ಈಶ್ವರಪ್ಪ ಭೇಟಿ; ಕೋಟಿತೀರ್ಥ ಪುಷ್ಕರಣಿ ಅಭಿವೃದ್ಧಿ ಯೋಜನೆಗೆ ಚಾಲನೆ
ಕೆ.ಎಸ್. ಈಶ್ವರಪ್ಪ
TV9kannada Web Team

| Edited By: ganapathi bhat

Jun 15, 2021 | 11:51 PM

ಕಾರವಾರ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿ, ಕೋಟಿತೀರ್ಥ ಪುಷ್ಕರಣಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಕ್ಷೇತ್ರಕ್ಕೆ ಈಶ್ವರಪ್ಪ ಭೇಟಿ ನೀಡಿದ್ದಾರೆ. ಕ್ಷೇತ್ರದ ಮಹಾಬಲೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ನಂದಿಮಂಟಪದ ಬಳಿಯಿಂದ ನಾಗಾಭರಣ ಪೂಜೆ ಸಲ್ಲಿಸಿದ್ದಾರೆ.

ಬಳಿಕ ಕೋಟಿತೀರ್ಥ ಪುಷ್ಕರಣಿ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ್ದಾರೆ. 131.70 ಲಕ್ಷ ರೂಪಾಯಿ ವೆಚ್ಚದಲ್ಲಿ ಕೋಟಿತೀರ್ಥ ಪುಷ್ಕರಣಿ ಅಭಿವೃದ್ಧಿ ಕಾರ್ಯ ನಡೆಯಲಿದೆ. ಈ ಅಭಿವೃದ್ಧಿ ಕಾರ್ಯಕ್ಕೆ ಈಶ್ವರಪ್ಪ ಚಾಲನೆ ನೀಡಿದ್ದಾರೆ.

ಈ ಪುಷ್ಕರಣಿ ಅಭಿವೃದ್ಧಿ ಯೋಜನೆಯು, 2021-2022ರ ಜಲಾಮೃತ ಯೋಜನೆಯಡಿ ನಡೆಯುತ್ತಿರುವ ಕಾರ್ಯಕ್ರಮವಾಗಿದೆ. ಸಚಿವರಿಗೆ ಕುಮಟಾ ಶಾಸಕ ದಿನಕರ ಶೆಟ್ಟಿ, ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ, ಸಿಇಒ ಪ್ರಿಯಾಂಕಾ ಸಾಥ್ ನೀಡಿದ್ದಾರೆ.

ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಕೋಟಿತೀರ್ಥ ಕಲ್ಯಾಣಿಗೆ ಈಶ್ವರಪ್ಪ ಬಾಗಿನ ಅರ್ಪಿಸಿದ್ದಾರೆ. ಮುಂದಿನ ಜನವರಿಯಿಂದ ಕೋಟಿತೀರ್ಥ ಅಭಿವೃದ್ಧಿ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಪುಷ್ಕರಣಿ ಅಭಿವೃದ್ಧಿಯೊಂದಿಗೆ ಜನವರಿಯವರೆಗೆ ಒಟ್ಟು 11 ಚಟುವಟಿಕೆಗಳು ನಡೆಯಲಿದೆ. ಈ ಮೊದಲು, ಕೋಟಿತೀರ್ಥ ಅಭಿವೃದ್ಧಿಗೆ ಪಣತೊಟ್ಟಿದ್ದ ಸಚಿವ‌ ಈಶರಪ್ಪ, ನೀಡಿದ ಮಾತಿನಂತೆ ಇಂದು ಯೋಜನೆಗೆ ಚಾಲನೆ ನೀಡಿದ್ದಾರೆ.

ಇದನ್ನೂ ಓದಿ: ರೇಣುಕಾಚಾರ್ಯ, ಈಶ್ವರಪ್ಪ ಮಧ್ಯೆ ಮಾತಿನ ಸಮರ; ಹುಲಿವೇಷ ಎಂದವರು ಆತ್ಮಾವಲೋಕನ ಮಾಡಿಕೊಳ್ಳಲಿ: ರೇಣುಕಾಚಾರ್ಯ ತಿರುಗೇಟು

ಕೊವಿಡ್ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಿ; ಪೊಲೀಸರಿಗೆ ಕೆ.ಎಸ್​ ಈಶ್ವರಪ್ಪ ಸೂಚನೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada