ರೇಣುಕಾಚಾರ್ಯ, ಈಶ್ವರಪ್ಪ ಮಧ್ಯೆ ಮಾತಿನ ಸಮರ; ಹುಲಿವೇಷ ಎಂದವರು ಆತ್ಮಾವಲೋಕನ ಮಾಡಿಕೊಳ್ಳಲಿ: ರೇಣುಕಾಚಾರ್ಯ ತಿರುಗೇಟು
MP Renukacharya: ರಾಜ್ಯ ಬಿಜೆಪಿ ನಾಯಕರ ನಡುವಿನ ಮುನಿಸು ಹೆಚ್ಚಾಗುತ್ತಲೇ ಇದೆ. ಸಿಎಂ ರಾಜೀನಾಮೆ ವಿಚಾರವನ್ನೇ ಬೀದಿಗೆ ಎಳೆದು ತಂದು ರಂಪಾಟ ಮಾಡುತ್ತಿದ್ದಾರೆ. ಈ ನಡುವೆ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ವಾಗ್ ಯುದ್ದವೇ ನಡೆದಿದೆ.
ಬೆಂಗಳೂರು: ಮಾತಿನಲ್ಲೇ ಏಟು.. ಮಾತಿನಲ್ಲೇ ಎದಿರೇಟು.. ಕೆಣಕಿದವರಿಗೆ ಹಳೇ ವಿಚಾರಗಳನ್ನ ಕೆದಕಿ ಗುನ್ನಾ. ನಿಜಕ್ಕೂ ರಾಜ್ಯ ಬಿಜೆಪಿ ನಾಯಕರ ನಡುವಿನ ಮುನಿಸು ಹೆಚ್ಚಾಗುತ್ತಲೇ ಇದೆ. ಸಿಎಂ ರಾಜೀನಾಮೆ ವಿಚಾರವನ್ನೇ ಬೀದಿಗೆ ಎಳೆದು ತಂದು ರಂಪಾಟ ಮಾಡುತ್ತಿದ್ದಾರೆ. ಈ ನಡುವೆ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ವಾಗ್ ಯುದ್ದವೇ ನಡೆದಿದೆ.
ರೇಣುಕಾಚಾರ್ಯ, ಈಶ್ವರಪ್ಪ ಮಧ್ಯೆ ಹುಲಿವೇಷ ಸಮರ ಸಿಎಂ ಬಿಎಸ್ ಯಡಿಯೂರಪ್ಪನವರ ಬದಲಾವಣೆ ಅನ್ನೋ ವಿಷ್ಯ ದೊಡ್ಡ ಬಾಂಬ್ನಂತೆ ಸ್ಫೋಟವಾಗಿದ್ದೇ ತಡ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯೇ ಎದ್ದಂತೆ ಆಗಿತ್ತು. ಅದ್ರಲ್ಲೂ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲವಾಗಿತ್ತು. ಇದ್ರ ಬೆನ್ನಲ್ಲೇ ಸ್ವತಃ ಸಿಎಂ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ಹೇಳಿದ್ರೆ ರಾಜೀನಾಮೆ ಕೊಡ್ತೀನಿ ಅಂತ ಖಡಕ್ ಆಗಿ ಹೇಳಿಬಿಟ್ಟಿದ್ರು. ಇದ್ರಿಂದ ಮತ್ತಷ್ಟು ಆತಂಕಗೊಂಡ ಕಮಲ ನಾಯಕರು ಅಲರ್ಟ್ ಆಗಿದ್ರು. ಈ ನಡುವೆ ಮೊನ್ನೆ ರಾಯಚೂರಿನಲ್ಲಿ ಈಶ್ವರಪ್ಪ ಸಿಎಂ ರಾಜೀನಾಮೆ ಬಗ್ಗೆ ಯಾರು ಮಾತನಾಡುವ ಹಾಗಿಲ್ಲ ಅಂದ್ರು. ಆದ್ರೆ, ಇದೇ ವೇಳೆ ರೇಣುಕಾಚಾರ್ಯ ಹುಲಿವೇಷದ ಆಟ ಬಿಜೆಪಿಯಲ್ಲಿ ನಡೆಯಲ್ಲ ಅಂತ ವ್ಯಂಗ್ಯ ಮಾಡಿದ್ರು. ಈಗ ರೇಣುಕಾಚಾರ್ಯ ಕೂಡ ಈಶ್ವರಪ್ಪ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ.
ನಾನು ಯಾವುದೇ ವೇಷದಾರಿಯಲ್ಲಾ.
ನನಗೆ ಹಿರಿಯರ ಬಗ್ಗೆ ಗೌರವವಿದೆ, ನನಗೆ ಬಣ್ಣ ಹಚ್ಚೋದು, ವೇಷ ಹಾಕೋದು ಗೊತ್ತಿಲ್ಲಾ.
ನನ್ನ ಬಗ್ಗೆ ಹುಲಿವೇಷ ಎಂದು ಹೇಳಿದವರು ಆತ್ಮವಾಲೋಕನ ಮಾಡಿಕೊಳ್ಳಲಿ.@BSYBJP ರಾಜ್ಯಾದ್ಯಕ್ಷರನ್ನಾಗಿ ಮಾಡಿದಾಗ ನೀವು ಯಾವ ವೇಷ ಹಾಕಿಕೊಂಡಿದ್ರಿ.
ರಾಜ್ಯಪಾಲರಿಗೆ ಪತ್ರ ಬರೆದು ಆಮೇಲೆ ತಿರುಗಿ ಉಲ್ಟಾ ಹೊಡೆದ್ರಿ.(1/2)
— M P Renukacharya (@MPRBJP) June 9, 2021
‘ಹುಲಿವೇಷ ಎಂದವರು ಆತ್ಮಾವಲೋಕನ ಮಾಡಿಕೊಳ್ಳಲಿ’ ಈಶ್ವರಪ್ಪ ಬಿಜೆಪಿ ಶಿಸ್ತಿನ ಪಕ್ಷ ಅಂತ ರೇಣುಕಾಚಾರ್ಯ ಅವರ ಹುಲಿವೇಷದ ಬಗ್ಗೆ ಮಾತನಾಡಿದ್ರೋ ರೇಣುಕಾಚಾರ್ಯ ಫುಲ್ ಕೆಂಡಮಂಡಲರಾಗಿದ್ದಾರೆ. ನಿನ್ನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿ ಈಶ್ವರಪ್ಪ ವಿರುದ್ಧ ಗುಡುಗಿದ್ದಾರೆ. ಹಳೇ ವಿಚಾರಗಳನ್ನ ಕೆದಕಿ ಕೆದಕಿ ಗುಮ್ಮಿದ್ದಾರೆ. ನಾನು ಯಾವುದೇ ವೇಷದಾರಿಯಲ್ಲಾ. ನನಗೆ ಹಿರಿಯರ ಬಗ್ಗೆ ಗೌರವವಿದೆ. ನನಗೆ ಬಣ್ಣ ಹಚ್ಚೋದು, ವೇಷ ಹಾಕೋದು ಗೊತ್ತಿಲ್ಲಾ. ನನ್ನ ಬಗ್ಗೆ ಹುಲಿವೇಷ ಎಂದು ಹೇಳಿದವರು ಆತ್ಮವಾಲೋಕನ ಮಾಡಿಕೊಳ್ಳಲಿ. ಬಿಎಸ್ ಯಡಿಯೂರಪ್ಪ ರಾಜ್ಯಾದ್ಯಕ್ಷರನ್ನಾಗಿ ಮಾಡಿದಾಗ ನೀವು ಯಾವ ವೇಷ ಹಾಕಿಕೊಂಡಿದ್ರಿ. ರಾಜ್ಯಪಾಲರಿಗೆ ಪತ್ರ ಬರೆದು ಆ ಮೇಲೆ ತಿರುಗಿ ಉಲ್ಟಾ ಹೊಡೆದ್ರಿ ಎಂದು ಎಂದು ಪ್ರಶ್ನೆ ಮಾಡಿದ್ದಾರೆ.
‘ನನ್ನ ಬಗ್ಗೆ ಹಗುರವಾಗಿ ಮಾತನಾಡುವುದನ್ನ ಬಿಡಬೇಕು’ ಈಶ್ವರಪ್ಪ ಅವರಿಗೆ ಟಾಂಗ್ ಕೊಟ್ಟ ರೇಣುಕಾಚಾರ್ಯ ಇಲ್ಲಿಗೆ ಸುಮ್ಮನಾಗಲಿಲ್ಲ. ಶಾಸಕ ಅರವಿಂದ್ ಬೆಲ್ಲದ್ ಅವರಿಗೂ ತಮ್ಮದೆ ಆದ ಸ್ಟೈಲ್ನಲ್ಲಿ ಉತ್ತರ ಕೊಟ್ಟಿದ್ದಾರೆ. ನನ್ನ ಬಳಿ ಹಳೇ ಪತ್ರ ಅಲ್ಲ ಇರೋದು. ಪತ್ರ ಬೇಕಾ ಹೇಳಿ ಕಳಿಸಿ ಕೊಡುವೆ. ಆದ್ರೆ, ರಾಜ್ಯಾಧ್ಯಕ್ಷರು ಪತ್ರ ಕೊಡುವುದು ಬೇಡ ಅಂದಿದ್ದಾರೆ ಅಂತ ತಿರುಗೇಟು ಕೊಟ್ಟಿದ್ದಾರೆ. ಒಟ್ನಲ್ಲಿ, ಬಿಜೆಪಿ ನಾಯಕರ ನಡುವಿನ ಸಮರ ತಾರಕಕ್ಕೇರುತ್ತಿದೆ. ಸಿಎಂ ರಾಜೀನಾಮೆ ವಿಚಾರವನ್ನೇ ಮುಂದೆ ಇಟ್ಕೊಂಡು ಒಬ್ಬರ ಕಾಲು ಒಬ್ಬರು ಎಳೀತಿದ್ದಾರೆ.
Published On - 9:05 am, Thu, 10 June 21