Karnataka Rains: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸಾಧ್ಯತೆ, ಇನ್ನೆಲ್ಲೆಲ್ಲಿ ಮಳೆ ಸಂಭವ, ಇಲ್ಲಿದೆ ಮಾಹಿತಿ

|

Updated on: Jun 12, 2023 | 7:24 AM

ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Karnataka Rains: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸಾಧ್ಯತೆ, ಇನ್ನೆಲ್ಲೆಲ್ಲಿ ಮಳೆ ಸಂಭವ, ಇಲ್ಲಿದೆ ಮಾಹಿತಿ
ಮಳೆ
Follow us on

ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ,ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

ಗಬ್ಬೂರು, ಗೋಕರ್ಣ, ಅಂಕೋಲಾ, ಕುಂದಾಪುರ, ಕೋಟ, ಮಂಕಿ, ಭಾಲ್ಕಿ, ಮಂಗಳೂರು, ಸಿದ್ದಾಪುರ, ಕ್ಯಾಸಲ್ ರಾಕ್, ಕದ್ರಾ, ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಬೆಳ್ತಂಗಡಿ, ಯಲ್ಲಾಪುರ, ಕುಮಟಾ, ಶಿರಾಲಿ, ಉಪ್ಪಿನಂಗಡಿ, ಭಾಗಮಂಡಲ, ಶಿರಹಟ್ಟಿ, ಗಂಗಾವತಿ, ಚಿಂಚೋಳಿ, ಕುಕನೂರು, ಕಾರವಾರ, ಶಿಗ್ಗಾಂವ್, ಮುಂಡರಗಿ, ಧಾರವಾಡ, ಬರಗೂರು, ಕೊಟ್ಟಿಗೆಹಾರ, ಹುಂಚದಕಟ್ಟೆ, ವಿರಾಜಪೇಟೆಯಲ್ಲಿ ಮಳೆಯಾಗಿದೆ.

ಕಲಬುರಗಿಯಲ್ಲಿ 39.1 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿ.ಮೀ ಇಂದ 55 ಕಿ.ಮೀ ವೇಗದಲ್ಲಿ ಬೀಸಲಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದ್ದು, ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ.
ಎಚ್​ಎಎಲ್​ನಲ್ಲಿ 31.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 31.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 32.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.5 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಮತ್ತಷ್ಟು ಓದಿ: Karnataka Rains: ಇಂದಿನಿಂದ ಜೂನ್ 15ರವರೆಗೂ ಕರ್ನಾಟಕದ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಬಿರುಗಾಳಿ, ಗಡುಗು ಸಹಿತ ಭಾರಿ ಮಳೆ

ಸೈಕ್ಲೋನ್‌ ಗಾಳಿಯ ತೀವ್ರತೆ ತುಸು ಕಂಡು ಬರಲಿದೆ. ಕೆಲವೊಮ್ಮೆ ಗಾಳಿಯ ವೇಳೆಗೆ ಗಾಳಿಯ ವೇಗ 55 ಕಿಲೋ ಮೀಟರ್‌ ನಷ್ಟಕ್ಕೆ ಬದಲಾಗುವ ಸಾಧ್ಯತೆ ಯೂ ಇದೆ. ಆದ್ದರಿಂದ ರಾಜ್ಯದ ಕರಾವಳಿಯ ಮೀನುಗಾರರು ಮೀನುಗಾರಿಕೆಗೆ ಇಳಿಯದಂತೆ ಐಎಂಡಿ ಸೂಚನೆ ನೀಡಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿತ್ರದುರ್ಗ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಚದುರಿದಂತೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಈ ಪ್ರದೇಶದ ಉಳಿದ ಜಿಲ್ಲೆಗಳಲ್ಲಿ ಅತಿ ಹಗುರದಿಂದ ಕೆಲವೊಮ್ಮೆ ಲಘು ಮಳೆಯಾಗಲಿದೆ.

ಬಿಪರ್‌ಜಾಯ್ ಚಂಡಮಾರುತವು ತೀವ್ರತೆ ಪಡೆದುಕೊಂಡಿದೆ. ಆದರೆ ಕರ್ನಾಟಕದಲ್ಲಿ ಅದರ ಪ್ರಭಾವ ಅಷ್ಟಾಗಿ ಇರುವುದಿಲ್ಲ, ಬದಲಾಗಿ ಗುಜರಾತ್‌, ಪಾಕಿಸ್ತಾನ ಕರಾವಳಿ ಭಾಗದತ್ತ ಸಾಗಿದೆ. ಗಾಳಿ ತೀವ್ರತೆ ಹೆಚ್ಚಿಸಿಕೊಂಡಿರುವ ಸೈಕ್ಲೋನ್ ಆ ಭಾಗದಲ್ಲಿ ಅಧಿಕ ಹಾನಿ ಉಂಟು ಮಾಡುವ ನಿರೀಕ್ಷೆ ಇದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಜೂನ್ 15ರವರೆಗೆ ಈ ಚಂಡಮಾರುತದ ಅಬ್ಬರ ಕಂಡು ಬರಲಿದೆ.

 

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ