AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Love Dhokha: ರಾಜಧಾನಿಯಲ್ಲಿ ಲವ್ ಜಿಹಾದ್ ಗಾಳಿ, ಕ್ರಿಶ್ಚಿಯನ್ ಎಂದು ಹಿಂದೂ ಯುವತಿಯನ್ನು ಎರಡು ವರ್ಷದಿಂದ ಬಲೆಗೆ ಬಿಳಿಸಿಕೊಂಡಿದ್ದ ಮುಸ್ಲಿಂ ಯುವಕ

ಒಂದು ದಿನ ಯುವಕನ ಪರ್ಸ್ ನಲ್ಲಿದ್ದ ಆಧಾರ್ ಕಾರ್ಡ್ ಆಕಸ್ಮಿಕವಾಗಿ ಯುವತಿಯ ಕಣ್ಣಿಗೆ ಬಿದ್ದಿದೆ. ಯುವತಿ ಆತನನ್ನ ಪ್ರಶ್ನೆ ಮಾಡುತ್ತಿದ್ದಂತೆ, ತಾನು ಮುಸ್ಲಿಂ ಎಂದು ಹೇಳಿದರೆ ಯುವತಿ ಸ್ನೇಹ ಬೆಳೆಸುವುದಿಲ್ಲ. ಅದಕ್ಕಾಗಿ ಕ್ರಿಶ್ಚಿಯನ್ ಎಂದು ಸುಳ್ಳು ಹೇಳಿರೋದಾಗಿ ಬಾಯ್ಬಿಟ್ಟಿದ್ದಾನೆ.

Love Dhokha: ರಾಜಧಾನಿಯಲ್ಲಿ ಲವ್ ಜಿಹಾದ್ ಗಾಳಿ, ಕ್ರಿಶ್ಚಿಯನ್ ಎಂದು ಹಿಂದೂ ಯುವತಿಯನ್ನು ಎರಡು ವರ್ಷದಿಂದ ಬಲೆಗೆ ಬಿಳಿಸಿಕೊಂಡಿದ್ದ ಮುಸ್ಲಿಂ ಯುವಕ
ರಾಜಧಾನಿಯಲ್ಲಿ ಲವ್ ಜಿಹಾದ್ ಗಾಳಿ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Edited By: |

Updated on: Jun 12, 2023 | 7:51 AM

Share

ಇತ್ತೀಚೆಗೆ ದೆಹಲಿ, ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ನಡೆದ ಲವ್ ಜಿಹಾದ್ (Love jihad) ಪ್ರಕರಣಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆಗಳು ಮಾಸುವ ಮುನ್ನವೇ ರಾಜ್ಯ ರಾಜಧಾನಿಯಲ್ಲಿ ಲವ್ ಜಿಹಾದ್ ಗಾಳಿ ಬೀಸಿದೆ. ಅನ್ಯ ಕೋಮಿನ ಯುವಕ ತನ್ನ ಧರ್ಮವನ್ನೇ ಮುಚ್ಚಿಟ್ಟು ಸುಳ್ಳು ಹೇಳಿ ಯುವತಿಯನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ… ಅಷ್ಟಕ್ಕೂ ಯುವತಿ ಈ ವಂಚಕನಿಂದ ಪಾರಾಗಿದ್ದು ಹೇಗೆ ಅಂತೀರಾ ನೋಡಿ ಈ ಕಂಪ್ಲೀಟ್ ರಿಪೋರ್ಟ್​​​ನಲ್ಲಿ… ಹೌದು ತಾನು ಕ್ರಿಶ್ಚಿಯನ್ ಎಂದು ಹೇಳಿಕೊಂಡು ಹಿಂದೂ ಯುವತಿಯನ್ನು ಬಲೆಗೆ ಬಿಳಿಸಿದ್ದ ಕಿರಾತಕ ಮುಸ್ಲಿಂ ಎಂಬ ವಿಚಾರ ತಿಳಿಯುತ್ತಿದ್ದಂತೆ ಲವ್ ಜಿಹಾದ್ ಶಂಕಿಸಿ ಯುವತಿ ಎಚ್ಚೆತ್ತುಕೊಂಡು ಬಚಾವ್ ಆಗಿದ್ದಾಳೆ. ಆದರೆ ನಯವಂಚಕ ನೀಡುತ್ತಿದ್ದ ಕಿರುಕುಳ ತಾಳಲಾರದೆ ರಕ್ಷಣೆ ಮತ್ತು ನ್ಯಾಯಕ್ಕಾಗಿ ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೊಲೀಸ್ ಠಾಣೆಯ (Hebbagodi police station) ಮೆಟ್ಟಿಲೇರಿದ್ದಾಳೆ. ಮಹಾರಾಷ್ಟ್ರ (Maharashtra) ಮೂಲದ ಹಿಂದೂ ಯುವತಿ ವಂಚನೆಗೊಳಗಾಗಿದ್ದು, ಅಸ್ಸಾಂ (Assam) ಮೂಲದ ಅಲ್ ಮೆಹಪ್ಯೂಸ್ ಬರಪೂಯಾ ಕಿರಾತಕ ಯುವತಿಯನ್ನ ವಂಚಿಸಿದ್ದಾ‌ನೆ.

ರೈಮಂಡ್ ಮತ್ತು ಬ್ಲಾಕ್ ಬೇರಿಸ್ ಗಾರ್ಮೆಂಟ್ಸ್ ರಿಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಆ ಯುವಕ-ಯುವತಿ ನಗರದಲ್ಲಿ ವಾಸವಾಗಿದ್ದಾರೆ. ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರಿಂದ ಪ್ರಾರಂಭದಲ್ಲಿ ತಾನು ಕ್ರಿಶ್ಚಿಯನ್ ಧರ್ಮದ (Christian) ಮೆಲ್ಬಿನ್ ಎಂದು ಹೆಸರು ಹೇಳಿಕೊಂಡು ಯುವತಿಯನ್ನು ಬಲೆಗೆ ಬೀಳಿಸಿಕೊಂಡಿದ್ದಾನೆ. ನಯವಂಚಕನ ಮಾತು ನಂಬಿದ ಯುವತಿ ಎರಡು ವರ್ಷದಿಂದ ಪರಸ್ಪರ ಪ್ರೀತಿ, ಒಡನಾಟದಲ್ಲಿದ್ದಾಳೆ.

ಹೀಗಿರುವಾಗ ಒಂದು ದಿನ ಯುವಕನ ಪರ್ಸ್ ನಲ್ಲಿದ್ದ ಆಧಾರ್ ಕಾರ್ಡ್ ಆಕಸ್ಮಿಕವಾಗಿ ಯುವತಿಯ ಕಣ್ಣಿಗೆ ಬಿದ್ದಿದೆ. ಯುವತಿ ಆತನನ್ನ ಪ್ರಶ್ನೆ ಮಾಡುತ್ತಿದ್ದಂತೆ, ತಾನು ಮುಸ್ಲಿಂ ಎಂದು ಹೇಳಿದರೆ ಯುವತಿ ಸ್ನೇಹ ಬೆಳೆಸುವುದಿಲ್ಲ. ಅದಕ್ಕಾಗಿ ಕ್ರಿಶ್ಚಿಯನ್ ಎಂದು ಸುಳ್ಳು ಹೇಳಿರೋದಾಗಿ ಬಾಯ್ಬಿಟ್ಟಿದ್ದಾನೆ.

ಅದಾಗುತ್ತಿದ್ದಂತೆ, ಇದುವರೆಗಿನ ತನ್ನ ಪ್ರೇಮಿ ಅನ್ಯ ಕೋಮಿನ ಯುವಕ ಎಂದು ತಿಳಿದ ಬಳಿಕ ಕೂಡಲೇ ಎಚ್ಚೆತ್ತ ಯುವತಿ, ಬ್ರೇಕಪ್ ಮಾಡಿಕೊಂಡಿದ್ದಾಳೆ. ಇದರಿಂದ ಆಕ್ರೋಶಗೊಂಡ ನಯವಂಚಕ ಯುವತಿಗೆ ಕಿರುಕುಳ ನೀಡಲು ಶುರು ಮಾಡಿಕೊಂಡಿದ್ದಾನೆ. ರಾತ್ರಿ ವೇಳೆ ಮನೆ ಬಳಿ ಬಂದು ಗಲಾಟೆ ಮಾಡಿ ಯುವತಿ ಮತ್ತು ಕುಟುಂಬದವರನ್ನ ಮುಗಿಸುವ ಬೆದರಿಕೆ ಹಾಕಿದ್ದಾನೆ‌ ಎನ್ನುವ ಆರೋಪಗಳು ಕೇಳಿಬಂದಿವೆ. ನೊಂದ ಯುವತಿ ಹೆಬ್ಬಗೋಡಿ ಠಾಣೆಯಲ್ಲಿ ಅಲ್ ಮೆಹಪ್ಯೂಸ್ ಬರಪೂಯಾನ ವಿರುದ್ಧ ದೂರು ದಾಖಲಿಸಿದ್ದಾಳೆ.

ಇನ್ನು ತನ್ನ ಧರ್ಮವನ್ನು ಮುಚ್ಚಿಟ್ಟು ಸುಳ್ಳು ಹೇಳಿ ಯುವತಿಗೆ ಪ್ರೀತಿಯ ಹೆಸರಿನಲ್ಲಿ ವಂಚಿಸಿದ್ದಲ್ಲದೆ, ಯುವತಿಯ ಬಳಿ ಲಕ್ಷಾಂತರ ರೂಪಾಯಿ ಹಣವನ್ನು ಸಹ ಈ ಕಿರಾತಕ ಪಡೆದುಕೊಂಡಿದ್ದ. ಇದೇ ರೀತಿ ಈ ಹಿಂದೆಯೂ ಸಹ ಸಾಕಷ್ಟು ಯುವತಿಯರಿಗೆ ಸುಳ್ಳು ಹೇಳಿ ವಂಚನೆ ಮಾಡಿದ್ದಾನೆ ಎನ್ನುವ ಆರೋಪಗಳು ಸಹ ಈಗ ಕೇಳಿಬಂದಿವೆ. ಅಷ್ಟೇ ಅಲ್ಲದೆ ಆಕೆ ಕೆಲಸ ಮಾಡುತ್ತಿದ್ದ ಬ್ಲಾಕ್ ಬೇರಿಸ್ ಕಂಪನಿ ಮಾಲೀಕರ ಬಳಿ ಇಲ್ಲಸಲ್ಲದ ಆರೋಪ ಮಾಡಿ ಕೆಲಸ ಮಾಡುತ್ತಿದ್ದ ಯುವತಿಗೆ ಗೇಟ್ ಪಾಸ್ ಕೊಡಿಸಲಾಗಿದೆ ಎನ್ನುವ ಆರೋಪವನ್ನ ನೊಂದ ಯುವತಿ ಮಾಡುತ್ತಿದ್ದಾಳೆ.

ಮಾತ್ರವಲ್ಲದೆ ನಯವಂಚಕ ಅಲ್ ಮೆಹಪ್ಯೂಸ್ ಬರಪೂಯಾ ಯುವತಿ ಜೊತೆ ಕೆಲಸ ಮಾಡುವ ತಮ್ಮ ಕೋಮಿನವರಾದ ಕೆಲವರ ಜೊತೆ ಷಡ್ಯಂತ್ರ ರೂಪಿಸಿ ಯುವತಿಯ ಪ್ರೊಫೆಷನಲ್ ಲೈಫ್​ ಹಾಳು ಮಾಡಿದ್ದಾನೆಂದು ನೊಂದ ಯುವತಿ ಆರೋಪಿಸಿದ್ದಾಳೆ. ಇಷ್ಟೆಲ್ಲಾ ವಂಚನೆಗೊಳಗಾದ ಯುವತಿ ನ್ಯಾಯಕ್ಕಾಗಿ ವಂಚಕ ಅಲ್ ಮೆಹಪ್ಯೂಸ್ ಬರಪೂಯಾ ವಿರುದ್ಧ ಹೆಬ್ಬಗೋಡಿ ಠಾಣೆಯಲ್ಲಿ ಮತ್ತು ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಆಡಳಿತ ಮಂಡಳಿಯ ಕಿರುಕುಳದ ವಿರುದ್ಧ ಆಡುಗೋಡಿ ಠಾಣೆಯಲ್ಲಿ ನೊಂದ ಯುವತಿ ದೂರು ನೀಡಿದ್ದಾಳೆ.

ಒಟ್ಟಿನಲ್ಲಿ ಪ್ರೀತಿ ಕುರುಡು ಅಂತಾರೆ. ಆದ್ರೆ ಇಂತಹ ಕಿರಾತಕರ ಪ್ರೀತಿಯ ಬಲೆಗೆ ಬಿದ್ದು, ಅದೆಷ್ಟೋ ಯುವತಿಯರು ದುರಂತ ಅಂತ್ಯ ಕಂಡಿದ್ದಾರೆ. ಈ ಪ್ರೀತಿಯಲ್ಲಿ ಯುವಕ ತನ್ನ ಧರ್ಮವನ್ನ ಮುಚ್ಚಿಟ್ಟು ಯುವತಿಗೆ ವಂಚಿಸಿದ್ದಲ್ಲದೆ ಕಿರುಕುಳ ನೀಡುತ್ತಿರುವ ಆರೋಪವೂ ಕೇಳಿಬಂದಿದ್ದು, ಈ ಬಗ್ಗೆ ಕೂಲಂಕಷವಾಗಿ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ