AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rains: ಕೊಪ್ಪಳ, ವಿಜಯಪುರಕ್ಕೆ ಆರೆಂಜ್ ಅಲರ್ಟ್​, ಬೆಂಗಳೂರಿಗೆ ಯೆಲ್ಲೋ ಅಲರ್ಟ್​, ಕರ್ನಾಟಕದಾದ್ಯಂತ ಭಾರಿ ಮಳೆ

ಕರ್ನಾಟಕದಲ್ಲಿ ಮತ್ತೆ ಭಾರಿ ಮಳೆಯಾಗಲಿದೆ. ಕರ್ನಾಟಕದ ಉತ್ತರ ಒಳನಾಡಿನಲ್ಲಿ ಇಂದಿನಿಂದ ಮಳೆ ಜೋರಾಗಲಿದ್ದು, ಕಲಬುರಗಿ, ಕೊಪ್ಪಳ, ವಿಜಯಪುರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.ಬೆಳಗಾವಿ, ಬೀದರ್, ಗದಗ, ರಾಯಚೂರು, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ವಿಜಯನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ದಕ್ಷಿಣ ಒಳನಾಡು, ಉಡುಪಿ, ಉತ್ತರ ಕನ್ನಡ, ಹಾವೇರಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ದಾವಣಗೆರೆ,ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

Karnataka Rains: ಕೊಪ್ಪಳ, ವಿಜಯಪುರಕ್ಕೆ ಆರೆಂಜ್ ಅಲರ್ಟ್​, ಬೆಂಗಳೂರಿಗೆ ಯೆಲ್ಲೋ ಅಲರ್ಟ್​, ಕರ್ನಾಟಕದಾದ್ಯಂತ ಭಾರಿ ಮಳೆ
ಮಳೆ Image Credit source: PTI
ನಯನಾ ರಾಜೀವ್
|

Updated on: Sep 12, 2025 | 7:28 AM

Share

ಬೆಂಗಳೂರು, ಸೆಪ್ಟೆಂಬರ್ 12: ಮತ್ತೆ ಕರ್ನಾಟಕದಾದ್ಯಂತ ಮಳೆ(Rain) ಚುರುಕಾಗಿದೆ. ಗುರುವಾರದಿಂದ ಹಲವೆಡೆ ಮಳೆಯಾಗಿದೆ. ಕರ್ನಾಟಕದ ಉತ್ತರ ಒಳನಾಡಿನಲ್ಲಿ ಇಂದಿನಿಂದ ಮಳೆ ಜೋರಾಗಲಿದ್ದು, ಕಲಬುರಗಿ, ಕೊಪ್ಪಳ, ವಿಜಯಪುರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ಘೋಷಿಸಲಾಗಿದೆ.ಬೆಳಗಾವಿ, ಬೀದರ್, ಗದಗ, ರಾಯಚೂರು, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ವಿಜಯನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ಘೋಷಿಸಲಾಗಿದೆ. ದಕ್ಷಿಣ ಒಳನಾಡು, ಉಡುಪಿ, ಉತ್ತರ ಕನ್ನಡ, ಹಾವೇರಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ದಾವಣಗೆರೆ,ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಕಮಲಾಪುರ, ಎಂಎಂಹಿಲ್ಸ್​, ಕಲಬುರಗಿ, ಚಿಂತಾಮಣಿ, ಟಿಜಿ ಹಳ್ಳಿ, ಕೋಲಾರ, ಗಂಗಾವತಿ, ಆಳಂದ, ಸೇಡಂ, ಹುಣಸಗಿ, ಅಫ್ಜಲ್ಪುರ, ವಿಜಯಪುರ, ತಾವರಗೇರಾ, ಸಿಂಧನೂರು, ರಾಯಚೂರು, ಮುನಿರಾಬಾದ್, ಮಾನ್ವಿ, ಲಿಂಗಸುಗೂರು, ಕುರ್ಡಿ, ಕೆಂಭಾವಿ, ಇಂಡಿ, ಹೊಸಕೋಟೆ, ಹೆಸರಘಟ್ಟ, ದೇವರಹಿಪ್ಪರಗಿ, ಶೋರಾಪುರ, ನಾಗಮಂಗಲ, ಮಾಗಡಿ, ಕೃಷ್ಣರಾಜಸಾಗರ, ಕರಟಗಿ, ಕನಕಪುರ, ಕಕ್ಕೇರಿ, ಕೆಆರ್ನಗರ, ಇಳಕಲ್, ಚಿಂಚೋಳಿ, ಚಿಕ್ಕಬಳ್ಳಾಪುರ, ಭಾಲ್ಕಿ, ಬಸವನಬಾಗೇವಾಡಿ, ಕನಕಪುರ, ಗಂಗಾಪುರ, ಗಬ್ಬೂರಿನಲ್ಲಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ. ಎಚ್​​ಎಎಲ್ನಲ್ಲಿ 30.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 29.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 31.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 28.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಮತ್ತಷ್ಟು ಓದಿ: Karnataka Rains: ಬೆಂಗಳೂರು ಸೇರಿ ಕರ್ನಾಟಕದ 13 ಜಿಲ್ಲೆಗಳಲ್ಲಿ 2 ದಿನಗಳ ಬಳಿಕ ಮತ್ತೆ ಶುರುವಾಗುತ್ತೆ ಮಳೆ

ಹೊನ್ನಾವರದಲ್ಲಿ 30.7ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 25.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಮಂಗಳೂರು ಏರ್​​ಪೋರ್ಟ್​​ನಲ್ಲಿ 30.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.8 ಡಿಗ್ರಿ ಸಲ್ಸಿಯಸ್ ಕನಿಷ್ಠ ಉಷ್ಣಾಂಶ, ಶಕ್ತಿನಗರದಲ್ಲಿ 31.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಬೆಳಗಾವಿ ಏರ್​​ಪೋರ್ಟ್​​ನಲ್ಲಿ 30.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೀದರ್ನಲ್ಲಿ 28.4ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ವಿಜಯಪುರದಲ್ಲಿ 31.0ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಧಾರವಾಡದಲ್ಲಿ 31.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಗದಗದಲ್ಲಿ 32.8ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಲಬುರಗಿಯಲ್ಲಿ 32.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹಾವೇರಿಯಲ್ಲಿ 30.8ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೊಪ್ಪಳದಲ್ಲಿ 32.6ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ರಾಯಚೂರಿನಲ್ಲಿ 33.0ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?