ಆತ್ಮಹತ್ಯೆ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 5ನೇ ಸ್ಥಾನ

| Updated By: ವಿವೇಕ ಬಿರಾದಾರ

Updated on: Nov 04, 2022 | 10:17 PM

ವರ್ಷದಿಂದ ವರ್ಷಕ್ಕೆ ರಾಜ್ಯದಲ್ಲಿ ಯುವಕರೇ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ನಿಮಾನ್ಸ್ ವೈದ್ಯರ ಅಧ್ಯಯನದಲ್ಲಿ ಬಹಿರಂಗ ಗೊಂಡಿದೆ

ಆತ್ಮಹತ್ಯೆ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 5ನೇ ಸ್ಥಾನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ನಿಮಾನ್ಸ್ ವೈದ್ಯರ ಅಧ್ಯಯನ ವರದಿಯಲ್ಲಿ ಸ್ಫೋಟಕ ವಿಚಾರ ಬಯಲಾಗಿದೆ. ರಾಜ್ಯದಲ್ಲಿ ಆಗುತ್ತಿರವ ಆತ್ಮಹತ್ಯೆಗಳ ಬಗ್ಗೆ ನಿಮ್ಹಾನ್ಸ್ ಸ್ಪೆಷಲ್ ಸ್ಟಡಿ ಮಾಡಿದ್ದು, ವರ್ಷದಿಂದ ವರ್ಷಕ್ಕೆ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಅಷ್ಟಕ್ಕೂ ಅತ್ಮಹತ್ಯ ಕೇಸ್ ಏರಿಕೆ ಏಕೆ ? ನಿಮಾನ್ಸ್ ವೈದ್ಯರ ಅಧ್ಯಯನದಲ್ಲಿ ಬಯಲಾದದ್ದು ಏನು? ಇದೆಲ್ಲದರ ಮಾಹಿತಿ ಇಲ್ಲಿದೆ.

ನಿಮಾನ್ಸ್ ವೈದ್ಯರ ಅಧ್ಯಯನದಲ್ಲಿ ಸ್ಫೋಟಕ ವಿಚಾರ ಬಯಲು !

ರಾಜ್ಯದಲ್ಲಿ ಪ್ರತಿದಿನ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆಘಾತಕಾರಿ ಸಂಗತಿ. ಇದೆ ಸಣ್ಣ ಸಣ್ಣ ಕಾರಣಗಳಿಗೂ ಜನ ಸಾವನ್ನಪ್ಪುತ್ತಾ ಇದ್ದಾರೆ‌. ಈ ಬಗ್ಗೆ ನಿಮಾನ್ಸ್ ವೈದ್ಯರು ಅಧ್ಯಯನವೊಂದನ್ನು ಮಾಡಿದ್ದಾರೆ. ಆತ್ಮಹತ್ಯೆ ಏಕೆ ಆಗುತ್ತಿವೆ ? ಏನು ಕಾರಣ ಅಂತಾ ನಿಮಾನ್ಸ್ ವೈದ್ಯರ ತಂಡ ಅಧ್ಯಯನ ಮಾಡಿದಾಗ ಸ್ಫೋಟಕ ವಿಚಾರ ಬಯಲಾಗಿದೆ. ವರ್ಷದಿಂದ ವರ್ಷಕ್ಕೆ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿವೆಯಂತೆ. ಅದರಲ್ಲೂ ಯುವಕರೇ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಾ ಇರೋದು ವೈದ್ಯರ ಅಧ್ಯಯನದಲ್ಲಿ ತಿಳಿದು ಬಂದಿದೆ.

ಆತ್ಮಹತ್ಯೆಗೆ ಕಾರಣ ಮಾನಸಿಕ ಒತ್ತಡ, ಅರ್ಥಿಕ ಒತ್ತಡ, ಅಕಾಡೆಮಿಕ್ ಇಯರ್ ಒತ್ತಡ ಜೊತೆಗೆ ಮಾನಸಿಕ ತೊಳಲಾಟದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಇದ್ದು ಇನ್ನು ಅತ್ಮಹತ್ಯೆಗೆ ಹೆಚ್ಚು ಯುವಕರೆ ಬಲಿಯಾಗ್ತೀದ್ದು ಹೆಣ್ಣು ಮಕ್ಕಳು ಸಣ್ಣ ಸಣ್ಣ ಕಾರಣಗಳಿಗೆ ಅತ್ಮಹತ್ಯಗೆ ತುತ್ತಾಗುತ್ತಿದ್ದಾರೆ ಎಂದು ನಿಮ್ಹಾನ್ಸ್ ನಿರ್ದೇಶಕಿ ಡಾ‌. ಪ್ರತಿಮಾ ಮೂರ್ತಿ ಹೇಳಿದ್ದಾರೆ.

ಕೊವಿಡ್ ಬಂದು ಹೋದ ನಂತರ ಆತ್ಮಹತ್ಯೆ ಸಂಖ್ಯೆ ಇನ್ನೂ ಹೆಚ್ಚಾಗಿರೋದು ಅಧ್ಯಯನದಲ್ಲಿ ಬಯಲಾಗಿದೆ. 2020-21 ರ ಸಾಲಿನಲ್ಲಿ ಬರೋಬ್ಬರಿ 10,000 ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ದೇಶದಲ್ಲೆ ಆತ್ಮಹತ್ಯೆ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿ ಇದೆಯಂತೆ. ವರ್ಷದಿಂದ ವರ್ಷಕ್ಕೆ ಆತ್ಮಹತ್ಯೆ ಕೇಸ್ ಎಷ್ಟು ಹೆಚ್ಚಾಗಿದೆ ಅಂತಾ ನೋಡೋದಾದರೇ

ಭಾರತದಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿರುವ ವಿವರ

  1. 2017 – 129887 ಆತ್ಮಹತ್ಯೆ ಕೇಸ್
  2. 2018 – 134516 ಆತ್ಮಹತ್ಯೆ ಕೇಸ್
  3. 2019 – 1,39,123 ಆತ್ಮಹತ್ಯೆ ಕೇಸ್
  4. 2020 – 1,53,052ಆತ್ಮಹತ್ಯೆ ಕೇಸ್
  5. 2021 – 1,64,033ಆತ್ಮಹತ್ಯೆ ಕೇಸ್

ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿರೋ 5 ರಾಜ್ಯಗಳ ಪಟ್ಟಿ

  1. ಮಹಾರಾಷ್ಟ್ರ – ಶೇ 13.5
  2. ತಮಿಳು ನಾಡು – ಶೇ 11.5
  3. ಮಧ್ಯ ಪ್ರದೇಶ – ಶೇ 9.1
  4. ಪಶ್ಚಿಮ ಬಂಗಾಳ – ಶೇ 8.2
  5. ಕರ್ನಾಟಕ – ಶೇ 8.0ಯಷ್ಟು ಪ್ರಕರಣಗಳು ದಾಖಲಾಗಿವೆ

ಆತ್ಮಹತ್ಯೆಗೆ ಒಳಗಾಗುತ್ತಿರುವ ಯುವಜನತೆಯನ್ನು ಕಾಪಾಡುವಲ್ಲಿ ಪೋಷಕರು ಪಾತ್ರ ಹೆಚ್ಚು. ಮಕ್ಕಳ ಚಟುವಟಿಕೆ, ಕಾಲೇಜ್ ವಿದ್ಯಾರ್ಥಿಗಳ ಚಟುವಟಿಕೆ, ಮಾನಸಿಕ ಸ್ಥಿಮಿತತೆ ಅರಿತು ಮಕ್ಕಳನ್ನು ಜಾಗೃತ ಮಾಡುವುದು ಆತ್ಮಹತ್ಯೆ ತಡೆಗಟ್ಟುವಲ್ಲಿ ಪೋಷಕರು ಮತ್ತು ಸಾರ್ವಜನಿಕರ ಪಾತ್ರ ತುಂಬಾ ಮುಖ್ಯ ಅಂತಾ ತಜ್ಞರು ಸಲಹೆ ನೀಡಿದ್ದಾರೆ. ಆತ್ಮಹತ್ಯೆ ಪ್ರಕರಣಗಳು ರಾಜ್ಯದಲ್ಲಿ ಏರಿಕೆ ಹಿನ್ನಲೆ ನಿಮಾನ್ಸ್ ಆತ್ಮಹತ್ಯೆ ಪ್ರಕರಣ ತಡೆಯಲು ಹೊಸ ಪ್ರಯತ್ನಕ್ಕೆ ಮುಂದಾಗಿದ್ದು ಆತ್ಮಹತ್ಯೆ ತಡೆಯುವ ಉದ್ದೇಶದಿಂದ ಇಂದಿನಿಂದ ಮೂರು ದಿನಗಳ ಕಾಲ ಮೆಂಟಲ್ ಸಂತೆ ಅನ್ನೋ ಕಾರ್ಯಕ್ರಮಕ್ಕೆ ನಿಮಾನ್ಸ್​​ನಲ್ಲಿ ಇಂದಿನಿಂದ ಚಾಲನೆ ನೀಡಿದೆ. ಮೆಂಟಲ್ ಸಂತೆ ಎಂಬ ವಿಭಿನ್ನ ಕಾರ್ಯಕ್ರಮದ ಮೂಲಕ ಆತ್ಮಹತ್ಯೆ ತಡೆಯಲು ಸಮಾಜದಲ್ಲಿ ಮಾಡಬೇಕಾದ ತಂತ್ರಗಳು ಹಾಗೂ ಕಾರ್ಯಗಳ ಪರಿಚಯಿಸುವ ವಿಶೇಷವಾದ ಪಯತ್ನವನ್ನು ನಿಮಾನ್ಸ್ ಮಾಡಿದೆ.

ಒಟ್ಟಾರೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಇರೋದು ಕೆಟ್ಟ ಬೆಳವಣಿಗೆ. ಅದರಲ್ಲೂ ಯುವಜನತೆಗೆ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕ ಪಡುವ ವಿಚಾರ.ಈ ನಿಟ್ಟಿನಲ್ಲಿ ಆತ್ಮಹತ್ಯೆ ಪ್ರಕರಣಗಳ ತಡೆಗೆ ಸರ್ಕಾರ ಮತ್ತು ಪೋಷಕರು ಜಾಗೃತಗೊಳಿಸಿ ಮುನ್ನೆಚ್ಚರಿಕೆ ವಹಿಸೋದು ತುಂಬಾ ಮುಖ್ಯವಾಗಿದೆ ಅನ್ನೋದು ತಜ್ಞರ ಸಲಹೆ.

ವರದಿ- ವಿನಯಕುಮಾರ್ ಕಾಶಪ್ಪನವರ್, ಟಿವಿ9, ಬೆಂಗಳೂರು

Published On - 10:17 pm, Fri, 4 November 22