ರಾಜ್ಯದಲ್ಲಿ ಇಂದು 2,032 ಜನರಿಗೆ ಕೊರೊನಾ ಸೋಂಕು ದೃಢ; 5 ಸಾವು

ರಾಜ್ಯದಲ್ಲಿ ಇಂದು (ಆಗಸ್ಟ್12) 2,032 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಇಂದು 5 ಜನರ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಇಂದು 2,032 ಜನರಿಗೆ ಕೊರೊನಾ ಸೋಂಕು ದೃಢ; 5 ಸಾವು
ಪ್ರಾತಿನಿಧಿಕ ಚಿತ್ರ
Updated By: ವಿವೇಕ ಬಿರಾದಾರ

Updated on: Aug 12, 2022 | 7:39 PM

ಬೆಂಗಳೂರು: ರಾಜ್ಯದಲ್ಲಿ ಇಂದು (ಆಗಸ್ಟ್12) 2,032 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಇಂದು 5 ಜನರ ಸಾವನ್ನಪ್ಪಿದ್ದಾರೆ. ಬಳ್ಳಾರಿ (Bellary) ಜಿಲ್ಲೆಯಲ್ಲಿ ಇಬ್ಬರು, ಧಾರವಾಡ (Dharwad) , ಕೊಪ್ಪಳ (Koppal) ಜಿಲ್ಲೆ ಹಾಗೂ ಉತ್ತರ ಕನ್ನಡ (Uttar Kannada) ಜಿಲ್ಲೆಯಲ್ಲಿ ತಲಾ ಒಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 10,395 ಇದ್ದು, ರಾಜ್ಯದಲ್ಲಿ ಕೊವಿಡ್​ ಪಾಸಿಟಿವಿಟಿ ರೇಟ್​ ಶೇಕಡಾ 6.63 ಇದೆ. ಬೆಂಗಳೂರಿನಲ್ಲಿಂದು 1,202 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.

ಭಾರತದಲ್ಲಿ 18,561 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ: ಭಾರತದಲ್ಲಿ ಶುಕ್ರವಾರ (ಆಗಸ್ಟ್​ 12) ಒಟ್ಟು 18,561 ಹೊಸ ಕೊವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ. ಒಂದು ದಿನದಲ್ಲಿ ಚೇತರಿಸಿಕೊಂಡವರ ಸಂಖ್ಯೆ 16,561. ದೇಶದಲ್ಲಿ ಪ್ರಸ್ತುತ 1,23,535 ಸಕ್ರಿಯ ಪ್ರಕರಣಗಳಿವೆ. ಈವರೆಗೆ 4,35,73,094 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ದೇಶದ ದೈನಂದಿನ ಪಾಸಿಟಿವಿಟಿ ಸರಾಸರಿಯು ಶೇ 5.44 ಇದ್ದರೆ ವಾರದ ಪಾಸಿಟಿವಿಟಿ ಸರಾಸರಿಯು ಶೇ 4.88 ಇದೆ. ದೇಶದಲ್ಲಿ ಈವರೆಗೆ 207.47 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ.

Published On - 7:37 pm, Fri, 12 August 22