Karnataka Dam Water Level: ಮಲೆನಾಡು ಭಾಗದಲ್ಲಿ ವಿಪರೀತ ಮಳೆ, ಜಲಾಶಯಗಳಿಗೆ ಭರಪೂರ ನೀರು; ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಂತಿದೆ
Karnataka Reservoir Water Level: ಈಗಲೇ ಹೀಗಾದರೆ ಜುಲೈ, ಆಗಸ್ಟ್ ತಿಂಗಳ ಮಳೆಯ ಹೊಡೆತವನ್ನು ತಡೆದುಕೊಳ್ಳುವುದು ಹೇಗೆ ಎಂಬ ಚಿಂತೆ ಕೃಷಿಕರಲ್ಲಿ ಆರಂಭವಾಗಿದೆ. ಜೋರು ಮಳೆಯಿಂದಾಗಿ ಜಲಾಶಯಗಳಿಗೂ ಭರಪೂರ ನೀರು ಹರಿದು ಬರಲಾರಂಭಿಸಿದೆ. ಪ್ರಸ್ತುತ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಎಂಬ ವಿವರ ಇಲ್ಲಿ ಲಭ್ಯವಿದೆ.
ಕರ್ನಾಟಕಕ್ಕೆ ಮುಂಗಾರು ಪ್ರವೇಶವಾಗಿದ್ದು ಕೆಲ ಭಾಗಗಳಲ್ಲಿ ನೈರುತ್ಯ ಮಾರುತಗಳು ಭಾರೀ ಮಳೆ ಸುರಿಸುತ್ತಿವೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ತೀವ್ರಗೊಂಡಿದ್ದು, ಮುಂಗಾರು ಆರಂಭದಲ್ಲೇ ಆರ್ಭಟ ಜೋರಾಗಿದೆ. ಕಳೆದ ವರ್ಷ ಶುರುವಿನಲ್ಲಿ ಬಿಡುವು ಕೊಟ್ಟಿದ್ದ ಮಳೆರಾಯ ಈ ಬಾರಿ ಬಿಟ್ಟೂಬಿಡೆದೇ ಸುರಿಯುತ್ತಿರುವುದು ರೈತರಲ್ಲಿ ಸಣ್ಣಮಟ್ಟಿಗಿನ ಆತಂಕವನ್ನೂ ಸೃಷ್ಟಿಸಿದೆ. ಈಗಲೇ ಹೀಗಾದರೆ ಜುಲೈ, ಆಗಸ್ಟ್ ತಿಂಗಳ ಮಳೆಯ ಹೊಡೆತವನ್ನು ತಡೆದುಕೊಳ್ಳುವುದು ಹೇಗೆ ಎಂಬ ಚಿಂತೆ ಕೃಷಿಕರಲ್ಲಿ ಆರಂಭವಾಗಿದೆ. ಜೋರು ಮಳೆಯಿಂದಾಗಿ ಜಲಾಶಯಗಳಿಗೂ ಭರಪೂರ ನೀರು ಹರಿದು ಬರಲಾರಂಭಿಸಿದೆ. ಪ್ರಸ್ತುತ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಎಂಬ ವಿವರ ಇಲ್ಲಿ ಲಭ್ಯವಿದೆ.
ಲಿಂಗನಮಕ್ಕಿ ಜಲಾಶಯ | Linganamakki Dam
ಗರಿಷ್ಠ ಮಟ್ಟ: 554.4 ಅಡಿ ಒಟ್ಟು ಸಾಮರ್ಥ್ಯ: 151.75 ಟಿಎಂಸಿ
ಇಂದಿನ ನೀರಿನ ಮಟ್ಟ: 53.38 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 27.3 ಟಿಎಂಸಿ
ಇಂದಿನ ಒಳಹರಿವು: 31,676 ಕ್ಯೂಸೆಕ್ಸ್ ಇಂದಿನ ಹೊರಹರಿವು: 958 ಕ್ಯೂಸೆಕ್ಸ್
ವಾರಾಹಿ ಜಲಾಶಯ | Varahi Dam
ಗರಿಷ್ಠ ಮಟ್ಟ: 594.36 ಅಡಿ ಒಟ್ಟು ಸಾಮರ್ಥ್ಯ: 31.10 ಟಿಎಂಸಿ
ಇಂದಿನ ನೀರಿನ ಮಟ್ಟ: 2.50 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 3.46 ಟಿಎಂಸಿ
ಇಂದಿನ ಒಳಹರಿವು: 3,897 ಕ್ಯೂಸೆಕ್ಸ್ ಇಂದಿನ ಹೊರಹರಿವು: —ಕ್ಯೂಸೆಕ್ಸ್
ತುಂಗಾಭದ್ರಾ ಜಲಾಶಯ | Tungabhadra Dam
ಗರಿಷ್ಠ ನೀರಿನ ಮಟ್ಟ: 1,633 ಅಡಿ ಒಟ್ಟು ಸಾಮರ್ಥ್ಯ: 100.86 ಟಿಎಂಸಿ
ಇಂದಿನ ನೀರಿನ ಮಟ್ಟ: 10.06 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 6.14 ಟಿಎಂಸಿ
ಇಂದಿನ ಒಳಹರಿವು: 568 ಕ್ಯೂಸೆಕ್ಸ್ ಇಂದಿನ ಹೊರಹರಿವು: 301 ಕ್ಯೂಸೆಕ್ಸ್
ಕೆಆರ್ಎಸ್ ಜಲಾಶಯ | KRS Dam
ಗರಿಷ್ಠ ನೀರಿನ ಮಟ್ಟ: 124.80 ಅಡಿ ಒಟ್ಟು ಸಾಮರ್ಥ್ಯ: 49.45 ಟಿಎಂಸಿ
ಇಂದಿನ ನೀರಿನ ಮಟ್ಟ: 12.98 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 17.72 ಟಿಎಂಸಿ
ಇಂದಿನ ಒಳಹರಿವು: 6,934 ಕ್ಯೂಸೆಕ್ಸ್ ಇಂದಿನ ಹೊರಹರಿವು: 365 ಕ್ಯೂಸೆಕ್ಸ್
ಕಬಿನಿ ಜಲಾಶಯ | Kabini Dam
ಗರಿಷ್ಠ ನೀರಿನ ಮಟ್ಟ: 84 ಅಡಿ ಒಟ್ಟು ಸಾಮರ್ಥ್ಯ: 19.52 ಟಿಎಂಸಿ
ಇಂದಿನ ನೀರಿನ ಮಟ್ಟ: 12.58 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 8.19 ಟಿಎಂಸಿ
ಇಂದಿನ ಒಳಹರಿವು: 136,405 ಕ್ಯೂಸೆಕ್ಸ್ ಇಂದಿನ ಹೊರಹರಿವು: 700 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ | Almatti Dam
ಗರಿಷ್ಠ ಮಟ್ಟ: 1,704 ಅಡಿ ಒಟ್ಟು ಸಾಮರ್ಥ್ಯ: 123.08 ಟಿಎಂಸಿ
ಇಂದಿನ ನೀರಿನ ಮಟ್ಟ: 25.07 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 35.06 ಟಿಎಂಸಿ
ಇಂದಿನ ಒಳಹರಿವು: 13,784 ಕ್ಯೂಸೆಕ್ಸ್ ಇಂದಿನ ಹೊರಹರಿವು: 451 ಕ್ಯೂಸೆಕ್ಸ್
ಭದ್ರಾ ಜಲಾಶಯ | Bhadra Dam
ಒಟ್ಟು ಸಾಮರ್ಥ್ಯ: 71.54 ಟಿಎಂಸಿ
ಇಂದಿನ ನೀರಿನ ಮಟ್ಟ: 29.71 ಟಿಎಂಸಿ ಕಳೆದ ವರ್ಷ ನೀರಿನ ಮಟ್ಟ: 23.36 ಟಿಎಂಸಿ
ಇಂದಿನ ಒಳಹರಿವು: 12,557 ಕ್ಯೂಸೆಕ್ಸ್ ಇಂದಿನ ಹೊರಹರಿವು: 68 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ | Ghataprabha Dam
ಗರಿಷ್ಠ ಮಟ್ಟ: 662.94 ಅಡಿ ಒಟ್ಟು ಸಾಮರ್ಥ್ಯ: 51.00 ಟಿಎಂಸಿ
ಇಂದಿನ ನೀರಿನ ಮಟ್ಟ: 7.16 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 9.32 ಟಿಎಂಸಿ
ಇಂದಿನ ಒಳಹರಿವು: 17,114 ಕ್ಯೂಸೆಕ್ಸ್ ಇಂದಿನ ಹೊರಹರಿವು: 87 ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ | Malaprabha Dam
ಗರಿಷ್ಠ ಮಟ್ಟ: 633.83 ಅಡಿ ಒಟ್ಟು ಸಾಮರ್ಥ್ಯ: 37.73 ಟಿಎಂಸಿ
ಇಂದಿನ ನೀರಿನ ಮಟ್ಟ: 9.85 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 12.02 ಟಿಎಂಸಿ
ಇಂದಿನ ಒಳಹರಿವು: 877 ಕ್ಯೂಸೆಕ್ಸ್ ಇಂದಿನ ಹೊರಹರಿವು: 194 ಕ್ಯೂಸೆಕ್ಸ್
ಹೇಮಾವತಿ ಜಲಾಶಯ | Hemavathi Dam
ಗರಿಷ್ಠ ಮಟ್ಟ: 2,922 ಅಡಿ ಒಟ್ಟು ಸಾಮರ್ಥ್ಯ: 37.10 ಟಿಎಂಸಿ
ಇಂದಿನ ನೀರಿನ ಮಟ್ಟ: 11.03 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 9.86 ಟಿಎಂಸಿ
ಇಂದಿನ ಒಳಹರಿವು: 10,454 ಕ್ಯೂಸೆಕ್ಸ್ ಇಂದಿನ ಹೊರಹರಿವು: 200 ಕ್ಯೂಸೆಕ್ಸ್
ಹಾರಂಗಿ ಜಲಾಶಯ | Harangi Dam
ಗರಿಷ್ಠ ಮಟ್ಟ: 2859 ಅಡಿ ಒಟ್ಟು ಸಾಮರ್ಥ್ಯ: 8.50 ಟಿಎಂಸಿ
ಇಂದಿನ ನೀರಿನ ಮಟ್ಟ: 2,833.41 ಅಡಿ ಕಳೆದ ವರ್ಷದ ನೀರಿನ ಮಟ್ಟ: 3.52 ಟಿಎಂಸಿ
ಇಂದಿನ ಒಳಹರಿವು: 1,186 ಕ್ಯೂಸೆಕ್ಸ್ ಇಂದಿನ ಹೊರಹರಿವು: 80 ಕ್ಯೂಸೆಕ್ಸ್
ಸೂಪಾ ಜಲಾಶಯ | Supa Dam
ಒಟ್ಟು ಸಾಮರ್ಥ್ಯ: 145.33 ಟಿಎಂಸಿ
ಇಂದಿನ ನೀರಿನ ಮಟ್ಟ: 53.20 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 38.9 ಟಿಎಂಸಿ
ಇಂದಿನ ಒಳಹರಿವು: 18,232 ಕ್ಯೂಸೆಕ್ಸ್ ಇಂದಿನ ಹೊರಹರಿವು: 503 ಕ್ಯೂಸೆಕ್ಸ್
ನಾರಾಯಣಪುರ ಜಲಾಶಯ | Narayanapura Dam
ಒಟ್ಟು ಸಾಮರ್ಥ್ಯ: 33.31 ಟಿಎಂಸಿ
ಇಂದಿನ ನೀರಿನ ಮಟ್ಟ: 19.53 ಟಿಎಂಸಿ ಕಳೆದ ವರ್ಷದ ನೀರಿನ ಮಟ್ಟ: 19.82 ಟಿಎಂಸಿ
ಇಂದಿನ ಒಳಹರಿವು: 267 ಕ್ಯೂಸೆಕ್ಸ್ ಇಂದಿನ ಹೊರಹರಿವು: 267 ಕ್ಯೂಸೆಕ್ಸ್
Published On - 10:56 am, Fri, 18 June 21