ಆಲಮಟ್ಟಿ ಜಲಾಶಯ
ಮುಖ್ಯಾಂಶಗಳು
-
ಜಲಶಯಗಳಲ್ಲಿ ನೀರಿನ ಸಂಗ್ರಹ ಹಾಗೂ ಒಳಹರಿವಿನ ದೈನಂದಿನ ವಿವರ ಲಭ್ಯ.
- ಕೆಆರ್ಎಸ್, ತುಂಗಭದ್ರ ಹಾಗೂ ಕಬಿನಿ ಜಲಾಶಯಗಳ ನೀರಿನ ಮಟ್ಟ ಪ್ರಕಟ.
- ಆಲಮಟ್ಟಿ ಜಲಾಶಯದ ಇಂದಿನ ಮಟ್ಟ ಮತ್ತು ಹೊರಹರಿವಿನ ಮಾಹಿತಿ ವಿವರ.
ಬೆಂಗಳೂರು, ಅಕ್ಟೋಬರ್ 24: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ತಗ್ಗಿದ್ದರೂ, ಪ್ರಮುಖ ಜಲಾಶಯಗಳಿಗೆ ಒಳಹರಿವು ಮುಂದುವರೆದಿದೆ. ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ (ಕೆಆರ್ಎಸ್), ತುಂಗಭದ್ರ, ಕಬಿನಿ ಹಾಗೂ ವಿಜಯಪುರದ ಆಲಮಟ್ಟಿ ಜಲಾಶಯಗಳ ನೀರಿನ ಮಟ್ಟ ಮತ್ತು ಒಳ-ಹೊರಹರಿವಿನ ದೈನಂದಿನ ಅಂಕಿಅಂಶಗಳು ಲಭ್ಯವಾಗಿವೆ. ಈ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಮತ್ತು ಲೈವ್ ಸ್ಟೋರೇಜ್ ವಿವರಗಳು ಈ ಕೆಳಗಿನಂತಿವೆ.
ಕೆ.ಆರ್.ಎಸ್. ಜಲಾಶಯ
- ಗರಿಷ್ಠ ಮಟ್ಟ: 124.80 ಅಡಿ
- ಇಂದಿನ ನೀರಿನ ಮಟ್ಟ: 102.18 ಅಡಿ
- ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
- ಇಂದಿನ ನೀರು ಸಂಗ್ರಹ: 24.567 ಟಿಎಂಸಿ
- ಲೈವ್ ಸ್ಟೋರೇಜ್: 16.188 ಟಿಎಂಸಿ
- ಒಳಹರಿವು: 3,696 ಕ್ಯೂಸೆಕ್
- ಹೊರಹರಿವು: 1,426 ಕ್ಯೂಸೆಕ್ (ನಾಲೆಗಳು ಮತ್ತು ಕುಡಿಯುವ ನೀರು ಸೇರಿದಂತೆ)
ತುಂಗಭದ್ರಾ ಜಲಾಶಯ
- ಗರಿಷ್ಠ ಮಟ್ಟ (F.R.L): 1633.00 ಅಡಿ
- ಇಂದಿನ ನೀರಿನ ಮಟ್ಟ: 1614.971 ಅಡಿ
- ಒಟ್ಟು ಸಂಗ್ರಹ ಸಾಮರ್ಥ್ಯ: 105.788 ಟಿಎಂಸಿ
- ಪ್ರಸ್ತುತ ನೀರು ಸಂಗ್ರಹ: 48.342 ಟಿಎಂಸಿ
- ಒಳಹರಿವು: ಒಳಹರಿವು ಇಲ್ಲ (Nil)
- ಹೊರಹರಿವು: 11,300 ಕ್ಯೂಸೆಕ್ (ನಾಲಾ ಭಾಗಕ್ಕೆ 10,141 ಕ್ಯೂಸೆಕ್ ಹಾಗೂ ನದಿಗೆ 1,159 ಕ್ಯೂಸೆಕ್)
ಕಬಿನಿ ಜಲಾಶಯ
- ಗರಿಷ್ಠ ಮಟ್ಟ: 84 ಅಡಿ
- ಇಂದಿನ ನೀರಿನ ಮಟ್ಟ: 69.89 ಅಡಿ
- ಒಟ್ಟು ಗರಿಷ್ಠ ಸಾಮರ್ಥ್ಯ: 19.52 ಟಿಎಂಸಿ
- ಇಂದಿನ ನೀರು ಸಂಗ್ರಹ: 11.62 ಟಿಎಂಸಿ
- ಪ್ರಸ್ತುತ ಲೈವ್ ಸ್ಟೋರೇಜ್: 1.81 ಟಿಎಂಸಿ
- ಒಳಹರಿವು: 3,868 ಕ್ಯೂಸೆಕ್
- ಒಟ್ಟು ಹೊರಹರಿವು: 500 ಕ್ಯೂಸೆಕ್ (ಕಬಿನಿ ನದಿಗೆ ಮಾತ್ರ, ನಾಲೆಗಳಿಗೆ ನೀರು ಬಿಡುಗಡೆ ಇಲ್ಲ)
- ಮಳೆ: ಜಲಾಶಯದ ವ್ಯಾಪ್ತಿಯಲ್ಲಿ 50 ಮಿ.ಮೀ ಮಳೆ ದಾಖಲಾಗಿದೆ.
ಆಲಮಟ್ಟಿ ಜಲಾಶಯ
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ನೀರಿನ ಮಟ್ಟ: 516.27 ಮೀಟರ್
- ಒಳಹರಿವು: ಒಳಹರಿವು ಇಲ್ಲ (Nil)
- ಹೊರಹರಿವು: 9,039 ಕ್ಯೂಸೆಕ್
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ