ಕಂದಾಯ ಇಲಾಖೆಯಲ್ಲಿ ಉದ್ಯೋಗಾವಕಾಶ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಕಂದಾಯ ಇಲಾಖೆಯು (IMA ವಂಚನೆ ಪ್ರಕರಣಗಳ ಕಾರ್ಯಾಲಯ) ಒಪ್ಪಂದ ಆಧಾರಿತ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. PRO/ಕಾರ್ಯಾಚರಣೆ ವ್ಯವಸ್ಥಾಪಕರು (MBA) ಮತ್ತು ಖಾಸಗಿ ಕಾರ್ಯದರ್ಶಿ (B.Com/LLB) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಬೇಕು. ಅರ್ಜಿ ಸಲ್ಲಿಸಲು ಅಂತಿಮ ಅಕ್ಟೋಬರ್​ 31. ಉತ್ತಮ ಅವಕಾಶ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ.

ಕಂದಾಯ ಇಲಾಖೆಯಲ್ಲಿ ಉದ್ಯೋಗಾವಕಾಶ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಂದಾಯ ಇಲಾಖೆಯಲ್ಲಿ ನೇಮಕಾತಿ
Image Credit source: Getty Images

Updated on: Oct 25, 2026 | 2:47 PM

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಾರ್ಯಾಲಯ (ಐ.ಎಂ.ಎ ಹಾಗೂ ಇತರೆ ಕಂಪನಿ ವಂಚನೆ ಪ್ರಕರಣಗಳು) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು (Resume) ಆಹ್ವಾನಿಸಿದೆ. ಈ ನೇಮಕಾತಿಯು ಸಂಪೂರ್ಣವಾಗಿ ಒಪ್ಪಂದ ಆಧಾರಿತವಾಗಿದ್ದು (Contract Basis), ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ತಮ್ಮ ಬಯೋಡೇಟಾವನ್ನು ಸಲ್ಲಿಸಬಹುದಾಗಿದೆ.

ಪಿ.ಆರ್.ಒ / ಆಪರೇಷನ್ಸ್ ಮ್ಯಾನೇಜರ್ (PRO / Operations Manager):

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಬಿ.ಎ (MBA) ಪದವಿ ಪಡೆದಿರಬೇಕು. ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ಸರ್ಕಾರಿ ಯೋಜನೆಗಳಲ್ಲಿ ಪಿ.ಆರ್.ಒ ಅಥವಾ ಮ್ಯಾನೇಜ್‌ಮೆಂಟ್ ಆಪರೇಷನ್ಸ್ ವಿಭಾಗದಲ್ಲಿ ಕನಿಷ್ಠ 5 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. ಈ ಹುದ್ದೆಗೆ ಒಟ್ಟು 1 ಖಾಲಿ ಸ್ಥಾನವಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅವರ ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಮಾಸಿಕ ರೂ. 80,000/- ದಿಂದ ರೂ. 1,10,000/- ವರೆಗೆ ವೇತನ ನೀಡಲಾಗುತ್ತದೆ.

ಖಾಸಗಿ ಕಾರ್ಯದರ್ಶಿ – ಕಿರಿಯ ಶ್ರೇಣಿ (Private Secretary – Junior):

ಖಾಸಗಿ ಕಾರ್ಯದರ್ಶಿ ಹುದ್ದೆಗೆ ಅರ್ಜಿ ಸಲ್ಲಿಸಲು ಬಿ.ಕಾಮ್ (B.Com) ಅಥವಾ ಎಲ್.ಎಲ್.ಬಿ (LLB) ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ, ಇಂಗ್ಲಿಷ್ ಹಾಗೂ ಕನ್ನಡ ಬೆರಳಚ್ಚು (40 WPM ವೇಗ) ಮತ್ತು ಆಫೀಸ್ ಆಟೋಮೇಷನ್ ಡಿಪ್ಲೊಮಾ ಹೊಂದಿರಬೇಕು. ಎಲ್.ಎಲ್.ಬಿ ಪದವೀಧರರಿಗೆ ಹಾಗೂ ಸ್ಟೆನೋಗ್ರಾಫರ್ ಅನುಭವ ಇರುವ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳ ವಯಸ್ಸು 24 ರಿಂದ 30 ವರ್ಷದೊಳಗಿರಬೇಕು ಹಾಗೂ ಸರ್ಕಾರಿ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ (PSU) ಸ್ಟೆನೋ ಅಥವಾ ಪಿ.ಎ ಆಗಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು. ಈ ಹುದ್ದೆಗೆ ರೂ. 35,000/- ದಿಂದ ರೂ. 45,000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: 68ರ ವಯಸ್ಸಿನಲ್ಲೂ ಕಲಿಕೆಯ ಉತ್ಸಾಹ; ನಿವೃತ್ತ ಅಧಿಕಾರಿ ಈಗ ಸೈಕಾಲಜಿ ಸ್ಟೂಡೆಂಟ್!

ಅರ್ಜಿ ಸಲ್ಲಿಕೆ ಮತ್ತು ಪ್ರಮುಖ ದಿನಾಂಕಗಳು:

ಆಸಕ್ತ ಅಭ್ಯರ್ಥಿಗಳು ತಮ್ಮ ವಿವರವಾದ ರೆಸ್ಯೂಮ್ (Resume) ಅನ್ನು 31.10.2026 ರ ಒಳಗಾಗಿ ಸಲ್ಲಿಸಬೇಕು. ಅರ್ಜಿಗಳನ್ನು ಬೆಂಗಳೂರಿನ ವಿಶ್ವೇಶ್ವರಯ್ಯ ಗೋಪುರದ 3ನೇ ಮಹಡಿಯಲ್ಲಿರುವ ‘ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಾರ್ಯಾಲಯ (ಐ.ಎಂ.ಎ ಹಾಗೂ ಇತರೆ ಕಂಪನಿ ವಂಚನೆ ಪ್ರಕರಣಗಳು)’ ಈ ವಿಳಾಸಕ್ಕೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗಾಗಿ ಇಮೇಲ್ (splocaima21@gmail.com) ಅಥವಾ ದೂರವಾಣಿ ಸಂಖ್ಯೆ 080-29565353 ಮೂಲಕ ಸಂಪರ್ಕಿಸಬಹುದು.

ನೇಮಕಾತಿ ನಿಯಮಗಳು ಮತ್ತು ಶರತ್ತುಗಳು:

ಈ ನೇಮಕಾತಿಯು ಕಂದಾಯ ಇಲಾಖೆಯ ವಂಚನೆ ಪ್ರಕರಣಗಳ ಕಚೇರಿಯ ತಾತ್ಕಾಲಿಕ ಅಗತ್ಯತೆಗಾಗಿ ಸೃಷ್ಟಿಸಲಾದ ಒಪ್ಪಂದ ಆಧಾರಿತ ಹುದ್ದೆಯಾಗಿದೆ. ಅಭ್ಯರ್ಥಿಯ ಉತ್ತಮ ಕಾರ್ಯಕ್ಷಮತೆಯ ಆಧಾರದ ಮೇಲೆ ಪ್ರತಿ ವರ್ಷ ಒಪ್ಪಂದವನ್ನು ನವೀಕರಿಸಲಾಗುತ್ತದೆ ಮತ್ತು ವೇತನ ಶ್ರೇಣಿಯಲ್ಲಿ ನಿಯಮಿತ ಏರಿಕೆ ಇರುತ್ತದೆ. ಇದು ಸಂಪೂರ್ಣ ಒಪ್ಪಂದ ಆಧಾರಿತವಾಗಿದ್ದು, ಯಾವುದೇ ಕಾರಣಕ್ಕೂ ಶಾಶ್ವತ ಸರ್ಕಾರಿ ಸೇವೆಯಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:40 pm, Sun, 25 October 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us