ಬೆಂಗಳೂರು: ಹೆಚ್ಚಿನ ಗ್ರಾಹಕರನ್ನು ತಲುಪಲು ಮತ್ತು ಸ್ಥಳೀಯ ಕರಕುಶಲ ಕಾರ್ಮಿಕರನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (ಕೆಎಸ್‌ಎಚ್‌ಡಿಸಿ) ತನ್ನ ಉತ್ಪನ್ನಗಳನ್ನು ಪ್ರಮುಖ ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ಮಾರಾಟ ಮಾಡಲಿದೆ. ಹೊಸದಾಗಿ ನೇಮಕಗೊಂಡ ಕೆಎಸ್‌ಎಚ್‌ಡಿಸಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಈ ಘೋಷಣೆ ಮಾಡಿದ್ದಾರೆ.
ಕೆಎಸ್‌ಎಚ್‌ಡಿಸಿ ಕರ್ನಾಟಕ ಸರ್ಕಾರದ ಸಂಸ್ಥೆಯಾಗಿದ್ದು, ಇದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ನಡೆಸುತ್ತಿದೆ. ಕಾವೇರಿ ಎಂಪೋರಿಯಂನ 100 ಉತ್ಪನ್ನಗಳು ಶೀಘ್ರವೇ ಆನ್‌ಲೈನ್ ಖರೀದಿಗೆ ಲಭ್ಯವಾಗಲಿದೆ ಎಂದು ರೂಪಾ ಟ್ವಿಟರ್ ಮೂಲಕ ತಿಳಿಸಿದ್ದಾರೆ.
#CauveryEmporium products are now in flipkart. We have listed 30 items. We will list 70 more. This is the first e-market we have ventured into. Soon we will be on other e-platforms too. pic.twitter.com/ls9Wyhtjkm
— D Roopa IPS (@D_Roopa_IPS) January 7, 2021
ಕಾವೇರಿ ಎಂಪೋರಿಯಂನ ಉತ್ಪನ್ನಗಳು Flipkartನಲ್ಲಿ ಲಭ್ಯವಿದೆ. ನಾವು 30 ವಸ್ತುಗಳನ್ನು ಪಟ್ಟಿ ಮಾಡಿದ್ದೇವೆ. 70 ವಸ್ತುಗಳನ್ನು ಇನ್ನೂ ಪಟ್ಟಿ ಮಾಡಬೇಕಿದೆ. ನಾವು ಪ್ರಯತ್ನಿಸಿದ ಮೊದಲ ಇ-ಮಾರುಕಟ್ಟೆ ಇದಾಗಿದೆ. ಶೀಘ್ರದಲ್ಲೇ ನಾವು ಇತರ ಇ-ಪ್ಲಾಟ್‌ಫಾರ್ಮ್‌ಗಳಲ್ಲಿ ಸೇವೆ ನೀಡುತ್ತೇವೆ ಎಂದಿದ್ದಾರೆ.
Today at our Mangaluru #CauveryEmporium , I had given invite to artisans who would want to be registered newly with us. Surprisingly, women artisans outnumbered men 5:2 . Glad they came and it resulted in fruitful discussion. pic.twitter.com/iUifb3DnFu
— D Roopa IPS (@D_Roopa_IPS) January 8, 2021
ಈ ಆಲೋಚನೆಯು ದೀರ್ಘಕಾಲದಿಂದ ಇತ್ತು ಆದರೆ ಈಗ ಅದು ಕಾರ್ಯರೂಪಕ್ಕೆ ಬಂದಿದೆ ಎಂದು ರೂಪಾ ತಿಳಿಸಿದ್ದಾರೆ.
ಐಜಿಪಿ ರೂಪಾ ಮುಂದೆ ಹೊಸ ಸವಾಲು: ಕರಕುಶಲ ನಿಗಮದ ಲೂಟಿಕೋರನ ಹಿಡಿಯುವುದು..ಯಾರು ಅವರು?
Published On - 10:09 pm, Fri, 8 January 21