Corona Vaccine |ಮೊದಲ ಡೋಸ್ ಆಯ್ತು.. ಈಗ ಸೆಕೆಂಡ್‌ ಡೋಸ್‌ ಸರದಿ

|

Updated on: Feb 15, 2021 | 6:56 AM

ಜನವರಿ 16, 2021.. ಅಂದು ಇಡೀ ದೇಶದ ಜನ ಅತ್ಯಂತ ಖುಷಿಯಿಂದ್ಲೇ ಕೊರೊನಾ ವ್ಯಾಕ್ಸಿನ್‌ ಅನ್ನು ವೆಲ್‌ ಕಮ್ ಮಾಡಿದ್ರು. ಮೊದ ಮೊದಲು ಹೆಲ್ತ್ ವಾರಿಯರ್ಸ್‌ಗೆ ಲಸಿಕೆ ಕೊಟ್ಟ ಸರ್ಕಾರ ಈಗ ಸೆಕೆಂಡ್‌ ಡೋಸ್‌ ನೀಡೋದಕ್ಕೆ ಸಿದ್ಧತೆ ನಡೆಸಿದೆ. ಆದ್ರೆ ಮೊದಲ ಡೋಸ್‌ ಪಡೆಯೋಕೆ ಹಿಂದೇಟು ಹಾಕಿದ್ದವರು ಈಗ ಏನ್‌ ಮಾಡ್ತಾರೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.

Corona Vaccine |ಮೊದಲ ಡೋಸ್ ಆಯ್ತು.. ಈಗ ಸೆಕೆಂಡ್‌ ಡೋಸ್‌ ಸರದಿ
ಕೊರೊನಾ ಲಸಿಕೆ
Follow us on

ಬೆಂಗಳೂರು: ಭಾರತದಲ್ಲಿ ಕೊರೊನಾ ವೈರಸ್‌ ಲಸಿಕೆ ವಿತರಣೆ ಅಭಿಯಾನವನ್ನ ಕ್ಷಿಪ್ರಗತಿಯಲ್ಲಿ ನಡೆಸಲಾಗ್ತಿದೆ. ರಾಜ್ಯ ಸರ್ಕಾರ ಕೂಡ ಲಸಿಕೆ ನೀಡೋದ್ರಲ್ಲಿ ಯಾವುದೇ ವಿಳಂಬ ಮಾಡ್ತಿಲ್ಲ. ಈಗಾಗಲೇ ಮೊದಲ ಹಂತದಲ್ಲಿ ಹೆಲ್ತ್ ವಾರಿಯರ್ಸ್‌ಗೆ ಲಸಿಕೆ ನೀಡಲಾಗಿದ್ದು, 2ನೇ ಹಂತದಲ್ಲಿ ಫ್ರಂಟ್‌ ಲೈನ್‌ ವಾರಿಯರ್ಸ್‌ಗೆ ಲಸಿಕೆ ನೀಡಲಾಗುತ್ತೆ. ಇದ್ರ ಜತೆಗೆ ಜನವರಿ 16ರಂದು ಮೊದಲ ಬಾರಿಗೆ ಲಸಿಕೆ ಹಾಕಿಸಿಕೊಂಡ ಹೆಲ್ತ್ ವಾರಿಯರ್ಸ್‌ಗೆ ಇವತ್ತು ಅಥವಾ ಮಂಗಳವಾರದಿಂದ ಸೆಕೆಂಡ್‌ ಡೋಸ್‌ ಲಸಿಕೆ ವಿತರಣೆ ಅಭಿಯಾನ ಶುರುವಾಗಲಿದೆ. ಬಟ್‌ ಈ ಸೆಕೆಂಡ್‌ ಡೋಸ್‌ಗೆ ಹೆಲ್ತ್ ವಾರಿಯರ್ಸ್‌ ಬಿಲ್‌ಕುಲ್‌ ಒಪ್ಪುತ್ತಿಲ್ಲ. ಯಾವ ಕಾರಣಕ್ಕೂ ನಿಮ್ ಡೋಸ್ ಬ್ಯಾಡ್ರಪ್ಪೋ ಅಂತಿದ್ದಾರಂತೆ.

ಬೆಂಗಳೂರಿನಲ್ಲಿ 1ಲಕ್ಷಕ್ಕೂ ಅಧಿಕ ಹೆಲ್ತ್ ವಾರಿಯರ್ಸ್‌ಗೆ ಲಸಿಕೆ ನೀಡಲಾಗಿದೆ. ಅದ್ರಲ್ಲಿ ಜನವರಿ 16ರಂದು 300ಕ್ಕೂ ಅಧಿಕ ಮಂದಿ ಲಸಿಕೆ ಪಡೆದಿದ್ರು. ಈಗ ಅವರಿಗೆಲ್ಲಾ ಸೆಕೆಂಡ್‌ ಡೋಸ್‌ ನೀಡಲು ಸಿದ್ಧತೆ ಶುರುವಾಗಿದೆ. 2 ಬಾರಿ ಕೊರೊನಾ ಲಸಿಕೆ ಪಡೆಯಬೇಕು ಅಂತ ಸರ್ಕಾರ ಹೇಳಿತ್ತು. ಈಗ ಅದರಂತೆ ಸೆಕೆಂಡ್‌ ಡೋಸ್‌ ನೀಡೋಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಳ್ತಿದೆ. ಆದ್ರೆ ಈಗಾಗಲೇ ಮೊದಲ ಡೋಸ್‌ ಪಡೆದ ವಾರಿಯರ್ಸ್‌ ಸೆಕೆಂಡ್‌ ಡೋಸ್‌ ಪಡೆಯೋಕೆ ಒಪ್ಪುತ್ತಿಲ್ಲ. ಕಾರಣ ಮೊದಲ ಬಾರಿಗೆ ಲಸಿಕೆ ಪಡೆದಾಗ ಸುಸ್ತಾಗುವುದು, ವಾಂತಿ, ಜ್ವರ ಸೇರಿದಂತೆ ಇನ್ನಿತರ ಸೈಡ್ ಎಫೆಕ್ಟ್‌ ಆಗಿತ್ತಂತೆ. ಹೀಗಾಗಿ ಸೆಕೆಂಡ್‌ ಡೋಸ್‌ ಸಹವಾಸವೇ ಬೇಡಪ್ಪ ಅಂತಿದ್ದಾರೆ. ಆದ್ರೆ ಅಧಿಕಾರಿಗಳಿಗೆ ನೇರವಾಗಿ ಹೇಳಲಾಗದ ವಾರಿಯರ್ಸ್‌ ಮೊಬೈಲ್‌ ಸ್ವಿಚ್ಡ್ ಆಫ್ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಇದ್ರಿಂದಾಗಿ ಬಿಬಿಎಂಪಿಗೂ ಲಸಿಕೆ ನೀಡೋದು ದೊಡ್ಡ ಸವಾಲಾಗಿದೆ. ಲಸಿಕೆ ಪಡೆಯಲು ಭಾಗಶಃ ಜನ ಹಿಂದೇಟು ಹಾಕ್ತಿದ್ದಾರೆ. ಆದ್ರೆ ಬಿಬಿಎಂಪಿ ಮಾತ್ರ ಯಾರ್ ಬಂದ್ರೆಷ್ಟು ಬಿಟ್ಟರೆಷ್ಟು ಅಂತ ಸಕಲ ಸಿದ್ಧತೆಯಂತೂ ಮಾಡಿಕೊಳ್ತಿದೆ.

ಒಮ್ಮೆ ಲಸಿಕೆ ಪಡೆದವ್ರು ಸೆಕೆಂಡ್‌ ಡೋಸ್ ಪಡೆಯೋದು ಕಡ್ಡಾಯವಲ್ಲ ಅಂತ ಹೇಳಲಾಗ್ತಿದೆ. ಹೀಗಿರುವಾಗ ಲಸಿಕೆ ನೀಡುವಾಗ ಸೆಕೆಂಡ್ ಡೋಸ್ ಪಡೆದುಕೊಳ್ಳದಿದ್ರೆ ಏನ್ ಆಗುತ್ತೆ ಅನ್ನೋದನ್ನ ಮೊದಲೇ ಬಿಬಿಎಂಪಿ ಅರಿವು ಮೂಡಿಸಬೇಕಿತ್ತು. ಬಟ್ ಈ ಕೆಲ್ಸ ಬಿಬಿಎಂಪಿ ಮಾಡಿಲ್ಲ. ಆದ್ರೆ ಸೆಕೆಂಡ್‌ ಡೋಸ್‌ ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ಕಾದುನೋಡ್ಬೇಕಿದೆ.

ಇದನ್ನೂ ಓದಿ:ಕ್ಲಿನಿಕಲ್​ ಟ್ರಯಲ್​ನಲ್ಲಿ.. ಮೊದಲ ಡೋಸ್​ ಪಡೆದಿದ್ದ ಸಚಿವ ಅನಿಲ್​ಗೆ ವಕ್ಕರಿಸಿತು ಕೊರೊನಾ ಸೋಂಕು 

Published On - 6:52 am, Mon, 15 February 21