Karnataka Unlock: 3ನೇ ಹಂತದ ಅನ್​ಲಾಕ್; ಸೋಮವಾರದಿಂದಲೇ ಮಾಲ್ ಓಪನ್ ಸಾಧ್ಯತೆ, ಷರತ್ತುಗಳು ಅನ್ವಯ

| Updated By: preethi shettigar

Updated on: Jul 03, 2021 | 11:48 AM

ಅನ್​ಲಾಕ್ 3.O ನಲ್ಲಿ ನೈಟ್ ಕರ್ಫ್ಯೂ ಜಾರಿಗೆ ಬಂದಲ್ಲಿ ಮಾಲ್​ಗಳ ತೆರವು ಸಮಯದಲ್ಲಿ ಕೆಲವೊಂದು ಬದಲಾವಣೆಯಾಗಲಿದೆ. ಅದರಂತೆ ಬೆಳಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆವರೆಗೂ ಮಾಲ್​ಗಳು ಓಪನ್ ಮಾಡಲು ಯೋಜನೆ ರೂಪಿಸಲಾಗಿದೆ.

Karnataka Unlock: 3ನೇ ಹಂತದ ಅನ್​ಲಾಕ್; ಸೋಮವಾರದಿಂದಲೇ ಮಾಲ್ ಓಪನ್ ಸಾಧ್ಯತೆ, ಷರತ್ತುಗಳು ಅನ್ವಯ
ಮಾಲ್
Follow us on

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆ ಪ್ರಾರಂಭಿಸಿದೆ. ತಜ್ಞರ ಸಲಹೆಗೆ ಅನುಸಾರವಾಗಿ ಈಗಾಗಲೇ ಅನ್​ಲಾಕ್​ 2.0 ಆರಂಭವಾಗಿದ್ದು, ಇದೀಗ ಜುಲೈ 5 ರಿಂದ ಅನ್​ಲಾಕ್​ 3.O ಜಾರಿಯಾಗಲಿದೆ. ಇದರಲ್ಲಿ ರಾಜ್ಯ ಸರ್ಕಾರ ಮಾಲ್​ಗೆ ರಿಲೀಫ್​ ನೀಡಲು ನಿರ್ಧರಿಸಿದೆ. ಇನ್ನು ಥಿಯೇಟರ್, ಪಬ್, ಕ್ಲಬ್, ಬಾರ್, ಸ್ವಿಮ್ಮಿಂಗ್ ಪೂಲ್​ಗಳಿಗೂ ರಿಲೀಫ್ ನೀಡುವ ಸಾಧ್ಯತೆ ಇದೆ.

ಅನ್​ಲಾಕ್ 3.O ನಲ್ಲಿ ನೈಟ್ ಕರ್ಫ್ಯೂ ಜಾರಿಗೆ ಬಂದಲ್ಲಿ ಮಾಲ್​ಗಳ ತೆರವು ಸಮಯದಲ್ಲಿ ಕೆಲವೊಂದು ಬದಲಾವಣೆಯಾಗಲಿದೆ. ಅದರಂತೆ ಬೆಳಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆವರೆಗೂ ಮಾಲ್​ಗಳು ಓಪನ್ ಮಾಡಲು ಯೋಜನೆ ರೂಪಿಸಲಾಗಿದೆ. ಸಾಮಾನ್ಯವಾಗಿ 10 ಗಂಟೆಗೆ ಓಪನ್ ಆಗುತ್ತಿದ್ದ ಮಾಲ್​ಗಳು. ನೈಟ್ ಕರ್ಫ್ಯೂ ಜಾರಿಗೆ ಬಂದರೆ, ಬೆಳಗ್ಗೆ ಬೇಗನೆ ಓಪನ್ ಮಾಡಲು ಯೋಜನೆ ರೂಪಿಸಲಾಗಿದೆ.

ಕೊರೊನಾ ಪಾಸಿಟಿವ್ ರೇಟ್ ಕಡಿಮೆ ಇದ್ದಲ್ಲಿ ಅನ್​ಲಾಕ್​ 3.O ಜಾರಿಗೆ ತರಲು ತಜ್ಞರು ಸಲಹೆ ನೀಡಿದ್ದಾರೆ. ಅದರಂತೆ ರಾಜ್ಯದ ಪಾಸಿಟಿವ್ ರೇಟ್ ಗಮನದಲ್ಲಿರಿಸಿಕೊಂಡು ಮಾಲ್​ ಓಪನ್​ಗೆ ಮುಂದಾಗಿದೆ. ಇನ್ನು ಕಳೆದ ಎರಡೂವರೆ ತಿಂಗಳಿಂದ ಬಂದ್ ಆಗಿದ್ದ ಥಿಯೇಟರ್, ಪಬ್, ಬಾರ್, ಕ್ಲಬ್, ಸ್ವಿಮ್ಮಿಂಗ್ ಪೂಲ್​ಗಳಿಗೆ ಅನುಮತಿ ಕೊಡುವ ಸಾಧ್ಯತೆಯಿದೆ.

ಬಾರ್​ಗಳಿಗೂ ಕೊಂಚ ರಿಲೀಫ್ ಸಿಗುವ ಸಾಧ್ಯತೆ
ಹೋಟೆಲ್​ಗಳಿಗೆ ಸಿಕ್ಕ ವಿನಾಯಿತಿಯಂತೆ,ಬಾರ್​ಗೂ ವಿನಾಯಿತಿ ಸಿಗುವ ಸಾಧ್ಯತೆ ಇದೆ. ಶೇ.50% ರಷ್ಟು ಗ್ರಾಹಕರಿಗೆ ಬಾರ್​ನಲ್ಲಿ ಕೂತು ಕುಡಿಯಲು ಅವಕಾಶ ನೀಡುವ ಸಾಧ್ಯತೆ ಇದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಬಾರ್​ನಲ್ಲಿ ಟೇಬಲ್ ಸರ್ವಿಸ್ ಆರಂಭಿಸಲು ಚಿಂತನೆ ನಡೆಸಲಾಗಿದೆ.

ಕ್ಲಬ್, ಕ್ಲಬ್ ಹೌಸ್​ಗಳಿಗೂ ಅವಕಾಶ ನೀಡುವ ಸಾಧ್ಯತೆ. ಆದರೆ ಪಾರ್ಟಿ, ಹೆಚ್ಚು ಜನ ಸೇರುವ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಅನ್​ಲಾಕ್ 3.O ನಲ್ಲಿ ದೇವಸ್ಥಾನಗಳು ರಿಲೀಫ್ ಸಿಗುವ ಸಾಧ್ಯತೆ ಇದ್ದು, ವಿಶೇಷ ಆಚರಣೆ, ಪ್ರಸಾದ ವಿತರಣೆ, ಗುಂಪು ಸೇರುವುದು ಸೇರಿದಂತೆ ಇನ್ನಿತರ ನಿರ್ಬಂಧ ಹೇರುವ ಮೂಲಕ
ದೇವಸ್ಥಾನಗಳನ್ನ ಓಪನ್ ಮಾಡಲು ಅವಕಾಶ ನೀಡುವ ಸಾಧ್ಯತೆ ಇದೆ.

ಆದರೆ ಅನ್​ಲಾಕ್‌ 3.O ನಲ್ಲಿ ಥಿಯೇಟರ್​ಗಳಿಗೆ ರಿಲೀಫ್ ಸಿಗುವುದು ಅನುಮಾನವಾಗಿದೆ. ಸಧ್ಯಕ್ಕೆ ಥಿಯೇಟರ್​ಗಳನ್ನು ಓಪನ್ ಮಾಡದಿರಲು ಕೆಲ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಹೀಗಾಗಿ ಜುಲೈ 15 ವರೆಗೂ ಥಿಯೇಟರ್​ಗಳು ಓಪನ್ ಆಗುವುದು ಬಹುತೇಕ ಅನುಮಾನವಾಗಿದೆ.

ಜುಲೈ 5ರ ನಂತರ ನೈಟ್ ಕರ್ಫ್ಯೂ ಮುಂದುವರಿಯಬಹುದು. ಸದ್ಯ ನೈಟ್ ಕರ್ಫ್ಯೂ ಸಂಜೆ 6 ಗಂಟೆಯಿಂದ ಜಾರಿಯಲ್ಲಿದೆ. ಆದರೆ ಜುಲೈ 5ರಿಂದ ಸಂಜೆ 7 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಯಾಗುವ ಸಾಧ್ಯತೆಯಿದೆ. ವಿಕೇಂಡ್ ಕರ್ಫ್ಯೂ ಯಥಾಸ್ಥಿತಿ ಮುಂದುವರಿಯುತ್ತದೆ.

ಇದನ್ನೂ ಓದಿ:

ಅನ್‌ಲಾಕ್ 2.Oನಲ್ಲಿ ಕೊರೊನಾ ರೂಲ್ಸ್ ಕಂಪ್ಲೀಟ್‌ ಬ್ರೇಕ್‌.. ಕೊರೊನಾ ಮರೆತು ನಿರ್ಲಕ್ಷ್ಯದಲ್ಲಿರುವ ಜನ

ಕೇರಳದಿಂದ ಕರ್ನಾಟಕ ಪ್ರವೇಶಿಸುವವರಿಗೆ 72 ಗಂಟೆಗಳ ಒಳಗಿನ ನೆಗೆಟಿವ್ ರಿಪೋರ್ಟ್ ಕಡ್ಡಾಯ; ದಕ್ಷಿಣ ಕನ್ನಡ ಅನ್​ಲಾಕ್ ಕೆಟಗೆರಿ 1ರ ಪಟ್ಟಿಗೆ ಸೇರ್ಪಡೆ

 

Published On - 9:31 am, Fri, 2 July 21