ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಲಿದೆ. ಉತ್ತರ ಒಳನಾಡಿನಲ್ಲಿ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಮಾನ್ಸೂನ್ ದುರ್ಬಲವಾಗಿದ್ದು ವಾಯುಭಾರ ಕುಸಿತ ಉಂಟಾಗಿದೆ. ಹೀಗಾಗಿ ರಾಜ್ಯದಲ್ಲಿ ಜೂನ್ 11ರವರೆಗೆ ಮೋಡಕವಿದ ವಾತಾವರಣ ಇರಲಿದೆ ಎಂದು ಅವರು ತಿಳಿಸಿದ್ದಾರೆ.
ಜೂನ್ 12ರಿಂದ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಇಂದಿನಿಂದ ಜೂನ್ 13ರವರೆಗೆ ಮಳೆ ಸಾಧ್ಯತೆ ಇದೆ. ಜೂನ್ 12, 13ರಂದು ಉತ್ತರ ಒಳನಾಡಿನ ಹಲವೆಡೆ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್. ಪಾಟೀಲ್ ಹೇಳಿಕೆ ನೀಡಿದ್ದಾರೆ.
ಮುಂದಿನ ನಾಲ್ಕು ದಿನಗಳವರೆಗೆ ಮುಂಬೈನಲ್ಲಿ ಭಾರೀ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಐಎಂಡಿ ಬುಧವಾರ ಮುಂಬೈಗೆ ರೆಡ್ ಅಲರ್ಟ್ ಮತ್ತು ಮುಂದಿನ ನಾಲ್ಕು ದಿನಗಳವರೆಗೆ ಹಳದಿ ಅಲರ್ಟ್ ಘೋಷಿಸಿದೆ. ಕೊಂಕಣ ಕಿನರಪಟ್ಟಿಯ (ಕರಾವಳಿ ಪಟ್ಟಿ) ಕೆಲವು ಜಿಲ್ಲೆಗಳಲ್ಲಿ ಸಹ ಮುಂಬರುವ ದಿನಗಳಲ್ಲಿ ಭಾರಿ ಮಳೆಯಾಗಬಹುದು ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹೇಳಿತ್ತು.
ಕೊಂಕಣ ಕಿನರಪಟ್ಟಿಯ (ಕರಾವಳಿ ಪಟ್ಟಿ) ಕೆಲವು ಜಿಲ್ಲೆಗಳಿಗೆ ಹಳದಿ ಮತ್ತು ಕೆಂಪು ಎಚ್ಚರಿಕೆ ನೀಡಲಾಗಿದೆ. ಮುಂಬೈಗೆ ಇಂದು ರೆಡ್ ಅಲರ್ಟ್ ನೀಡಲಾಗಿದೆ ಮತ್ತು ಮುಂದಿನ 4 ದಿನಗಳವರೆಗೆ ಹಳದಿ ಎಚ್ಚರಿಕೆ ನೀಡಲಾಗಿದೆ. ಮುಂಬೈ ಸೇರಿದಂತೆ ಕೊಂಕಣ ಕಿನರಪಟ್ಟಿ ಮುಂದಿನ 4 ದಿನಗಳವರೆಗೆ ಭಾರಿ ಮಳೆಯಾಗಬಹುದು ಎಂದು ಐಎಂಡಿ ಮುಂಬೈನ ವಿಜ್ಞಾನಿ ಶುಭಂಗಿ ಭೂಟೆ ಬುಧವಾರ ಹೇಳಿದ್ದರು.
ರೆಡ್ ಅಲರ್ಟ್ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯನ್ನು ಸೂಚಿಸುತ್ತದೆ. ಎಚ್ಚರಿಕೆ ಘೋಷಿಸಿದರೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ‘ಹಳದಿ’ ಅಲರ್ಟ್ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳು ‘ಅಪ್ ಡೇಟ್ ‘ ಮಾಡಬೇಕು ಎಂದು ಸೂಚಿಸುತ್ತದೆ. ಇದಲ್ಲದೆ, ಮುಂದಿನ ಐದು ದಿನಗಳಲ್ಲಿ ಗೋವಾದಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಟ್ವೀಟ್ ಮಾಡಿತ್ತು.
ಇದನ್ನೂ ಓದಿ: Monsoon 2021: ಮುಂಬೈ ಪ್ರವೇಶಿಸಿದ ನೈಋತ್ಯ ಮುಂಗಾರು; ಮಹಾನಗರಿಯಲ್ಲಿ ಭರ್ಜರಿ ಮಳೆ, ರೈಲ್ವೆ ಸಂಚಾರ ಸ್ಥಗಿತ
Mumbai Rains: ಮುಂಬೈನಲ್ಲಿ ಮುಂಬರುವ ನಾಲ್ಕು ದಿನ ಭರ್ಜರಿ ಮಳೆ ಸಾಧ್ಯತೆ, ರೆಡ್ ಅಲರ್ಟ್ ಘೋಷಣೆ
Published On - 8:36 pm, Wed, 9 June 21