ನವದೆಹಲಿ: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇನ್ನೆರಡು ದಿನ ಚಳಿ ಹೆಚ್ಚಾಗಲಿದೆ. ಮಲೆನಾಡು, ಕರಾವಳಿ, ಕೊಡಗು, ಬೆಂಗಳೂರು, ಮೈಸೂರು, ಉತ್ತರ ಕರ್ನಾಟಕದಲ್ಲಿ ಜನವರಿ 1ರ ಬಳಿಕ ಕರ್ನಾಟಕದಲ್ಲಿ ಶೀತ ಗಾಳಿ ಕಡಿಮೆಯಾಗುವ ಸಾಧ್ಯತೆಯಿದೆ. ಡಿಸೆಂಬರ್ ಮೊದಲ ವಾರದವರೆಗೂ ಸುರಿದ ಅಕಾಲಿಕ ಮಳೆಯ ನಂತರ, ಹಲವು ರಾಜ್ಯಗಳಲ್ಲಿ ಶೀತ ಗಾಳಿ ಹೆಚ್ಚಾಗಿದೆ. ಹರಿಯಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ಶೀತಗಾಳಿಯ ಜೊತೆಗೆ ಹಗುರ ಮಳೆಯೂ ಸುರಿಯುವ ಸಾಧ್ಯತೆಯಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಶೀತ ಗಾಳಿಯು ಮತ್ತೊಮ್ಮೆ ವಾಯುವ್ಯ ಬಯಲು ಪ್ರದೇಶಗಳಲ್ಲಿ, ವಿಶೇಷವಾಗಿ ಪಂಜಾಬ್, ಹರಿಯಾಣ ಮತ್ತು ಚಂಡೀಗಢದ ಕೆಲವು ಭಾಗಗಳಲ್ಲಿ ಇಂದಿನಿಂದ (ಶುಕ್ರವಾರ) ಜನವರಿ 2ರ ಭಾನುವಾರದವರೆಗೆ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಮುಂದಿನ ಎರಡು ದಿನಗಳಲ್ಲಿ ವಾಯುವ್ಯ ಭಾರತದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನದಲ್ಲಿ 2-4 ಡಿಗ್ರಿ ಸೆಲ್ಸಿಯಸ್‌ನ ಇಳಿಕೆಯಿಂದಾಗಿ ಈ ಶೀತ ಪರಿಸ್ಥಿತಿಗಳು ಉಂಟಾಗುತ್ತವೆ.
ಜನವರಿ 2ರವರೆಗೆ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ರಾಜಸ್ಥಾನದಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಡಿಸೆಂಬರ್‌ನಲ್ಲಿ ಉತ್ತರ ಮತ್ತು ವಾಯುವ್ಯ ಭಾರತದ ಕೆಲವು ಭಾಗಗಳಲ್ಲಿ ಚಳಿಗಾಲ ಇರಲಿದೆ. ರಾಜಸ್ಥಾನದ ಕೆಲವು ಸ್ಥಳಗಳಲ್ಲಿ ಮತ್ತು ಹರಿಯಾಣ, ಚಂಡೀಗಢ ಮತ್ತು ದೆಹಲಿಯಲ್ಲಿ ಚಳಿ ಹೆಚ್ಚಾಗಲಿದೆ. ಮಹಾರಾಷ್ಟ್ರದ ಜಿಲ್ಲೆಗಳಾದ್ಯಂತ ನಿನ್ನೆ ಸಂಜೆ ಆಲಿಕಲ್ಲು ಮಳೆ, ಗುಡುಗು ಸಹಿತ ಮಿಂಚಿನ ಮಳೆಯಾಗಿದೆ. ಡಿಸೆಂಬರ್ 31 ರಿಂದ ಜನವರಿ 2 ರವರೆಗೆ ಪಂಜಾಬ್, ಹರಿಯಾಣ ಮತ್ತು ಚಂಡೀಗಢದಲ್ಲಿ ಶೀತ ಅಲೆ ಉಂಟಾಗಲಿದೆ.
ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಇಂದು (ಡಿಸೆಂಬರ್ 30) ಮತ್ತು ಡಿಸೆಂಬರ್ 31 ರಂದು ದಟ್ಟವಾದ ಮಂಜು ಬೀಳುವ ಸಾಧ್ಯತೆಯಿದೆ. ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಇಂದು ಆರೆಂಜ್ ಅಲರ್ಟ್ ನೀಡಲಾಗಿದೆ. ಡಿಸೆಂಬರ್ 31ರ ಹೊತ್ತಿಗೆ ಮಳೆಯು ಸಂಪೂರ್ಣವಾಗಿ ನಿಲ್ಲುತ್ತದೆ. ಪಶ್ಚಿಮ ಬಂಗಾಳದ ಡಾರ್ಜಲಿಂಗ್, ಕಾಲಿಂಪಾಂಗ್, ಪುರುಲಿಯಾ, ಬಂಕುರಾ, ಪಶ್ಚಿಮ-ಮಿಡ್ನಾಪುರ ಮತ್ತು ಜಾರ್‌ಗ್ರಾಮ್ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.
ಹವಾಮಾನ ಸಂಸ್ಥೆ ಪ್ರಕಾರ, ದೆಹಲಿ, ಪಂಜಾಬ್, ರಾಜಸ್ಥಾನ, ಚಂಡೀಗಢ, ಹರಿಯಾಣ, ಪೂರ್ವ ಮಧ್ಯಪ್ರದೇಶ, ವಿದರ್ಭ ಮತ್ತು ಛತ್ತೀಸ್‌ಗಢದಲ್ಲಿ ಮಳೆ ಎಚ್ಚರಿಕೆ ನೀಡಲಾಗಿದೆ. ಈ ರಾಜ್ಯಗಳಲ್ಲಿ ಡಿಸೆಂಬರ್ 31ರಿಂದ ಜನವರಿ 2ರವರೆಗೆ ಶೀತ ಗಾಳಿಯ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಆದರೆ, ರಾಜಸ್ಥಾನದಲ್ಲಿ ಜನವರಿ 1 ಮತ್ತು 2ರಂದು ತೀವ್ರ ಚಳಿ ಉಂಟಾಗಲಿದೆ. IMD ಪ್ರಕಾರ, ಇಂದು ಬಿಹಾರದಲ್ಲಿ ಶೀತ ವಾತಾವರಣ ಇರಲಿದೆ.
ಇದನ್ನೂ ಓದಿ: Karnataka Dams Water Level: ಚುಮು ಚುಮು ಚಳಿಗೆ ರಾಜ್ಯ ತತ್ತರ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
Karnataka Weather Today: ಹೊಸ ವರ್ಷದವರೆಗೂ ರಾಜ್ಯಾದ್ಯಂತ ಚಳಿ; ಉತ್ತರ ಭಾರತದಲ್ಲಿ ಮಳೆಯ ಅಬ್ಬರ