ಆರೋಗ್ಯ ಸಚಿವರ ಕ್ಷೇತ್ರದಲ್ಲಿ ಕೆರೆ ಕೋಡಿ ಒಡೆದಿದ್ದಕ್ಕೆ ಕುರಿ-ಕೋಳಿ ಬಲಿ ಕೊಟ್ಟ ಗ್ರಾಮಸ್ಥರು; ಸಾಮಾಜಿಕ ಅಂತರ, ಮಾಸ್ಕ್ ಮಂಗಮಾಯ

ಆರೋಗ್ಯ ಸಚಿವರ ಕ್ಷೇತ್ರದಲ್ಲಿ ಕೆರೆ ಕೋಡಿ ಒಡೆದಿದ್ದಕ್ಕೆ ಕುರಿ-ಕೋಳಿ ಬಲಿ ಕೊಟ್ಟ ಗ್ರಾಮಸ್ಥರು; ಸಾಮಾಜಿಕ ಅಂತರ, ಮಾಸ್ಕ್ ಮಂಗಮಾಯ
ಆರೋಗ್ಯ ಸಚಿವರ ಕ್ಷೇತ್ರದಲ್ಲಿ ಕೆರೆ ಕೋಡಿ ಹೊಡೆದಿದಕ್ಕೆ ಕುರಿ-ಕೋಳಿ ಬಲಿ ಕೊಟ್ಟ ಗ್ರಾಮಸ್ಥರು; ಸಾಮಾಜಿಕ ಅಂತರ, ಮಾಸ್ಕ್ ಮಂಗಮಾಯ

ಕೆರೆ ಕಟ್ಟೆ ಮೇಲೆ ಮೂರ್ನಾಲ್ಕು ಗ್ರಾಮಗಳ ಸಾವಿರಾರು ಜನ ಸೇರಿ ಬಣ್ಣ ಬಣ್ಣ ಸೀರೆ ಹುಟ್ಟು ತಲೆ ಮೇಲೆ ತಂಬಿಟ್ಟಿನ ದೀಪ ಹೊತ್ತು ವೈಯಾರದಿಂದ ಹೆಜ್ಜೆ ಹಾಕಿ ಸಂಭ್ರಮ ಸಡಗರದಿಂದ ಕೆರೆಗೆ ಪ್ರಾಣಿ ಬಲಿ ಕೊಟ್ಟಿದ್ದಾರೆ.

TV9kannada Web Team

| Edited By: Apurva Kumar Balegere

Dec 30, 2021 | 8:20 AM

ಚಿಕ್ಕಬಳ್ಳಾಪುರ: ಆ ಗ್ರಾಮಗಳಿಗೆ ಆಧಾರವಾಗಿದ್ದ ಆ ಒಂದು ಕೆರೆ ಮೂವತ್ತು ವರ್ಷಗಳ ಬಳಿಕ ತುಂಬಿದೆ. ಕೆರೆ ಕೋಡಿ ಹೊಡೆದ ನಂತರ ಮೂರ್ನಾಲ್ಕು ಗ್ರಾಮಗಳ ಜನ ಒಂದು ಕಡೆ ಸೇರಿ ಕೆರೆಗೆ ಕುರಿ ಕೋಳಿ ಬಲಿ ಕೊಟ್ಟಿದ್ದಾರೆ. ಈ ಗ್ರಾಮದಲ್ಲಿ ಇದೊಂದು ವಾಡಿಕೆಯಾಗಿದ್ದು ವಾಡಿಕೆಯಂತೆ ಈ ಬಾರಿಯೂ ಕೆರೆಗೆ ಬಲಿ ಕೊಟ್ಟು ಗಂಗಮ್ಮನಿಗೆ ಶಾಂತಿ ಮಾಡುವ ಬರದಲ್ಲಿ, ಹೆಮ್ಮಾರಿ ಕೊರೊನಾಗೆ ಆಹ್ವಾನ ನೀಡಿದ್ದಾರೆ.

ಕೆರೆ ಕಟ್ಟೆ ಮೇಲೆ ಮೂರ್ನಾಲ್ಕು ಗ್ರಾಮಗಳ ಸಾವಿರಾರು ಜನ ಸೇರಿ ಬಣ್ಣ ಬಣ್ಣ ಸೀರೆ ಹುಟ್ಟು ತಲೆ ಮೇಲೆ ತಂಬಿಟ್ಟಿನ ದೀಪ ಹೊತ್ತು ವೈಯಾರದಿಂದ ಹೆಜ್ಜೆ ಹಾಕಿ ಸಂಭ್ರಮ ಸಡಗರದಿಂದ ಕೆರೆಗೆ ಪ್ರಾಣಿ ಬಲಿ ಕೊಟ್ಟಿದ್ದಾರೆ. ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸ್ವಕ್ಷೇತ್ರದ ದೊಡ್ಡಮರಳಿ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದೆ. ಕಳೆದ ಮೂವತ್ತು ವರ್ಷಗಳ ನಂತರ ದೊಡ್ಡಮರಳಿ ಕೆರೆಗೆ ನೀರು ಹರಿದು ಬಂದಿದ್ದು ಕೆರೆ ಕೋಡಿ ಹರಿಯುತ್ತಿದೆ. ಇದ್ರಿಂದ ಸಂತಸಗೊಂಡ ಸುತ್ತಮುತ್ತಲಿನ ನಾಲ್ಕು ಊರುಗಳ ಗ್ರಾಮಸ್ಥರು ಕೆರೆಗೆ ಕುರಿಗಳು ಹಾಗೂ ಕೋಳಿಗಳ ಬಲಿ ನೀಡಿ ಸಂಭ್ರಮಾಚರಣೆ ಮಾಡಿದ್ರು.

cbl prani bali 2

ದೊಡ್ಡಮರಳಿ ಕೆರೆಗೆ ನೀರು ಹರಿದು ಬಂದಿದ್ದು ಕೆರೆ ಕೋಡಿ ಹರಿಯುತ್ತಿದೆ

ಇನ್ನೂ ಸಂಪ್ರದಾಯದ ಪ್ರಕಾರ ಕೆರೆ ಕೋಡಿ ಒಡೆದು ಹೋದ ಮೇಲೆ ದೊಡ್ಡಮರಳಿ, ಚಿಕ್ಕಮರಳಿ, ಡಿ ಹೊಸೂರು, ಹೊಸಹಳ್ಳಿ ಒಟ್ಟು ನಾಲ್ಕು ಗ್ರಾಮಗಳ ಜನ ಒಟ್ಟಾಗಿ ಸೇರಿದ್ರಿಂದ ನೂಕುನುಗ್ಗಲು ಏರ್ಪಟ್ಟಿತ್ತು , ಇಕ್ಕಟ್ಟಿನ ಕೆರೆ ಕಟ್ಟೆ ಮೇಲೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ರು, ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕಿನ ಆತಂಕ ಇದ್ರೂ ಯಾರೊಬ್ಬರು ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ.

ಇನ್ನೂ ಸರ್ಕಾರ ಮದುವೆ ಸಭೆ ಸಮಾರಂಭಗಳಿಗೆ ಮುನ್ನೂರು ಜನರಿಗೆ ಸೀಮಿತ ಮಾಡಿದೆ. ಅದೇ ರೀತಿ ಜಾತ್ರೆಗಳಿಗೂ ಕೆಲವು ನಿಬಂಧ ವಿಧಿಸಿದೆ. ಆದ್ರೆ ಜನರು ಯಾವ ಆದೇಶ ನಿಯಮಗಳಿಗೆ ಕೇರ್ ಮಾಡದೆ. ಮನಸ್ಸೊ ಇಚ್ಚೆ ಕೊರೊನಾ ಆಹ್ವಾನ ಮಾಡ್ತಿದ್ದಾರೆ.

ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ

ಬಲಿಗೆ ಸಿದ್ಧವಾದ ಕುರಿ

ಬಲಿಗೆ ಸಿದ್ಧವಾದ ಕೋಳಿ

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ತಾನು ಸೆಲಿಬ್ರಿಟಿ ಎಂಬ ಅಂಶವನ್ನು ಮರೆತರು ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್!

Follow us on

Related Stories

Most Read Stories

Click on your DTH Provider to Add TV9 Kannada