ಕಾಳಿದಾಸ ಸಮ್ಮಾನ್ ಪ್ರಶಸ್ತಿಗೆ ಕರ್ನಾಟಕದ ಗಂಜೀಫಾ ರಘುಪತಿ ಭಟ್ಟ ಆಯ್ಕೆ​​

ಮಧ್ಯಪ್ರದೇಶ ಸರ್ಕಾರದಿಂದ ಕೊಡಮಾಡುವ ರಾಷ್ಟ್ರೀಯ ಕಾಳಿದಾಸ ಸಮ್ಮಾನ್ ಪ್ರಶಸ್ತಿಗೆ ಗಂಜೀಫಾ ರಘುಪತಿ ಭಟ್ಟ ಆಯ್ಕೆಯಾಗಿದ್ದಾರೆ. ಇದೇ ವರ್ಷ ಡಿಸೆಂಬರ್​ 12 ರಂದು ಉಜ್ಜಯಿನಿಯಲ್ಲಿ ನಡೆಯುವ ಸಮಾರಂಭದಲ್ಲಿ ರಘುಪತಿ ಭಟ್ಟರಿಗೆ ಕಾಳಿದಾಸ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಏನಿದು ಗಂಜೀಫಾ ಕಲೆ? ಕರ್ನಾಟಕದ ಎಷ್ಟು ಜನರಿಗೆ ಕಾಳಿದಾಸ ಸಮ್ಮಾನ್ ಪ್ರಶಸ್ತಿ ಲಭಿಸಿದೆ? ಇಲ್ಲಿದೆ ಮಾಹಿತಿ.

ಕಾಳಿದಾಸ ಸಮ್ಮಾನ್ ಪ್ರಶಸ್ತಿಗೆ ಕರ್ನಾಟಕದ ಗಂಜೀಫಾ ರಘುಪತಿ ಭಟ್ಟ ಆಯ್ಕೆ​​
ಗಂಜೀಫಾ ರಘುಪತಿ ಭಟ್ಟ
Follow us
|

Updated on: Oct 19, 2024 | 3:05 PM

ಬೆಂಗಳೂರು, ಅಕ್ಟೋಬರ್​ 19: ರಾಷ್ಟ್ರೀಯ ಕಾಳಿದಾಸ ಸಮ್ಮಾನ್ ಪ್ರಶಸ್ತಿಗೆ (Kalidas Samman Award) ಗಂಜೀಫಾ ರಘುಪತಿ ಭಟ್ಟ (Ganjifa Raghupati Bhat) ಆಯ್ಕೆಯಾಗಿದ್ದಾರೆ. ಜೀವಿತಾವಧಿಯ ಶ್ರೇಷ್ಠತೆ ಆಧಾರದ ಮೇಲೆ ಮಧ್ಯಪ್ರದೇಶ ಸರ್ಕಾರ (Madhya Pradesh Government) ಕಾಳಿದಾಸ ಸಮ್ಮಾನ್​ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ.

2023ನೇ ಸಾಲಿನ ರಾಷ್ಟ್ರೀಯ ಕಾಳಿದಾಸ ಸಮ್ಮಾನ್ ಪ್ರಶಸ್ತಿಗೆ ಮಧ್ಯಪ್ರದೇಶ ಸರ್ಕಾರ ಸರ್ವಾನುಮತದಿಂದ ಗಂಜೀಫಾ ರಘುಪತಿ ಭಟ್ಟ ಅವರನ್ನು ಆಯ್ಕೆ ಮಾಡಿದೆ. ಈ ಗೌರವದ ಅಡಿಯಲ್ಲಿ 5 ಲಕ್ಷ ನಗದು ಶಾಲು ಶ್ರೀಫಲಕ ನೀಡಲಾಗುತ್ತದೆ.

ಇದೇ ವರ್ಷ ಡಿಸೆಂಬರ್​ 12 ರಂದು ಉಜ್ಜಯಿನಿಯಲ್ಲಿ ನಡೆಯುವ ಸಮಾರಂಭದಲ್ಲಿ ರಘುಪತಿ ಭಟ್ಟರಿಗೆ ಕಾಳಿದಾಸ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಭಟ್ಟರು ಭಾರತೀಯ ಶಾಸ್ತ್ರೀಯ ಚಿತ್ರ ಗಂಜಿಫಾ ರಚನೆಯಲ್ಲಿ ಸುಮಾರು 50 ವರ್ಷ ಸೇವೆ ಸಲ್ಲಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿದ ಮಧ್ಯಪ್ರದೇಶದ ಸರ್ಕಾರ ಕಾಳಿದಾಸ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ರಘುನಾಥ್​ ಭಟ್​​ಗೆ ರಾಷ್ಟ್ರ ಪ್ರಶಸ್ತಿ

ಗಂಜೀಫಾ ಕಲಾವಿದರೆಂದೇ ಖ್ಯಾತರಾಗಿರುವ ರಘುನಾಥ್ ಭಟ್ ಅವರು ಶ್ರೀರಂಗಪಟ್ಟಣದಲ್ಲಿ ಇಂಥ ಎಲೆಗಳ ಸಂಗ್ರಹಾಲಯ ತೆರೆದಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದಿರುವ ರಘುಪತಿ ಭಟ್ ಅವರು ಯುರೋಪಿನ ಕೆಲವು ದೇಶಗಳಲ್ಲಿ ಗಂಜೀಫಾ ಕಲಾ ಪ್ರದರ್ಶನವನ್ನು ನಡೆಸಿದ್ದಾರೆ.

ಏನಿದು ಗಂಜೀಫಾ?

ಗಾಂಜೀಫಾ ಇಸ್ಪೀಟಿನಂಥ ಒಂದು ಆಟ. ಇದಕ್ಕೆ ಛದ್ ಎಂಬ ಇನ್ನೊಂದು ಹೆಸರೂ ಇದೆ. ಬಾಬರ್ ನಾಮ, ಐನೆ ಅಕ್ಬರಿ, ಕಾಬೂನೆ ಇಸ್ಲಾಮ್, ಗಿರಿಧರ ಕೃತ ಗಂಜೀಫ್ ಲೇಖನ, ಶ್ರೀತತ್ತ್ವನಿಧಿ ಇತ್ಯಾದಿ ಗ್ರಂಥಗಳಲ್ಲಿ ಇದರ ವರ್ಣನೆಯಿದೆ. ಆಟದ ಪ್ರಕಾರ ಮತ್ತು ವಿವರಣೆಗಳಲ್ಲಿ ಒಂದು ಗ್ರಂಥಕ್ಕೂ ಇನ್ನೊಂದು ಗ್ರಂಥಕ್ಕೂ ವ್ಯತ್ಯಾಸವಿದೆ. ಮೂಲತಃ ಇದು ಪರ್ಷಿಯಾದಿಂದ ಬಂದು ಭಾರತದಲ್ಲಿ ಜನಪ್ರಿಯತೆಯನ್ನು ಪಡೆದಿತ್ತು. ಗಾಂಜೀಫಾ ಆಟವನ್ನು ಹೆಚ್ಚಾಗಿ ಮೊಘಲರು ಆಡುತ್ತಿದ್ದರು. ನಂತರ ಈ ಆಟ ಭಾರತೀಯ ಆಟವಾಗಿ ಖ್ಯಾತಿ ಪಡೆಯಿತು. ಗಾಂಜೀಫಾ ಆಟ 8-19ನೇ ಶತಮಾನದಲ್ಲಿ ಹಿಂದೆ ಭಾರತದಲ್ಲಿ ಅಸ್ತಿತ್ವದಲ್ಲಿತ್ತು.

ಆಟದ ಪರಿಕಲ್ಪನೆ

3 ರಿಂದ 3.5 ಇಂಚು ವ್ಯಾಸವುಳ್ಳ ವೃತ್ತಾಕಾರದ ಎಲೆಗಳನ್ನು(ಕಾರ್ಡ್) ಇದಕ್ಕೆ ಉಪಯೋಗಿಸಲಾಗುತ್ತದೆ. ಒಂದು ಬದಿಯಲ್ಲಿ ಸಾಂಕೇತಿಕವಾಗಿ ಬರೆದ ಒಂದು ಚಿತ್ರವಿರುತ್ತಿತ್ತು. ಇನ್ನೊಂದು ಬದಿ ಖಾಲಿ. ಇದರಲ್ಲಿ ೯೬ – ೩೬೦ ಎಲೆಗಳನ್ನು ಬಳಸಿ ಆಡುವ ವಿವಿಧ ರೀತಿಯ ಆಟಗಳಿರುತ್ತಿದ್ದವು. ಆಟದ ಪದ್ಧತಿಗೆ ಹೊಂದಿಕೊಂಡು ಅದರ ಮೇಲೆ ಚಿತ್ರಗಳಿರುತ್ತವೆ. ಪೌರಾಣಿಕ ವ್ಯಕ್ತಿಗಳು, ಸಾಮಾಜಿಕ, ಹೆಣ್ಣು, ಹೂ, ಪ್ರಾಣಿಗಳು ಮುಂತಾದ ಚಿತ್ರಗಳನ್ನು ಚಿತ್ರಿಸಲಾಗಿರುತ್ತಿತ್ತು. ದಂತದಿಂದ ಮಾಡಿದ ಎಲೆಗಳನ್ನು ಆಟಕ್ಕೆ ಬಳಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಗಂಜೀಫಾ ಆಟಕ್ಕೆ ಬೇರೆ ರೂಪ ನೀಡಿದ ಮೈಸೂರು ರಾಜರು

ಮೈಸೂರು-ಗಂಜಿಫಾ ಮೈಸೂರು ರಾಜಮನೆತನದಿಂದ ವ್ಯಾಪಕವಾಗಿ ಪ್ರೋತ್ಸಾಹಿಸಲ್ಪಟ್ಟಿತ್ತು. ಮೈಸೂರು-ಗಂಜಿಫಾ ಶೈಲಿಯ ಎಲ್ಲ 18 ಆಟಗಳ ಕಾರ್ಡ್​ಗಳಲ್ಲಿ ಹಿಂದೂ ಪುರಾಣಗಳಲ್ಲಿ, ರಾಮಾಯಣ ಮತ್ತು ಮಹಾಭಾರತದಲ್ಲಿ ಬರುವ ಪಾತ್ರಗಳ ಚಿತ್ರಗಳನ್ನು ಬಿಡಿಸಲಾಗಿತ್ತು. ವಿಷ್ಣುವಿನ ದಶಾವತಾರಗಳನ್ನು ಕೂಡ ಬಿಡಿಸಲಾಗಿತ್ತು. ದಶಾವತಾರ ಗಂಜಿಫಾ ಆಟ ಜನಪ್ರಿಯವಾಗಿತ್ತು. ದಶಾವತಾರ-ಗಂಜಿಫಾ 120 ವಿವಿಧ ಪ್ಲೇಯಿಂಗ್ ಕಾರ್ಡ್‌ಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಪೌರಾಣಿಕ ವಿಷಯಗಳ ಹೊರತಾಗಿ ಕಲಾವಿದರು ಮಹಾರಾಜರ ಭಾವಚಿತ್ರಗಳಂತಹ ಚಿತ್ರಿಸಲು ಪ್ರಾರಂಭಿಸಿದರು.

ಕಾಳಿದಾಸ್​ ಸಮ್ಮಾನ್​ ಪ್ರಶಸ್ತಿ

ಕಾಳಿದಾಸ ಭಾರತದ ಶ್ರೇಷ್ಠ ​ಕವಿ. ಸಂಸ್ಕೃತ ಭಾಷೆಯಲ್ಲಿ ಕಾವ್ಯ, ನಾಟಕಗಳನ್ನು ರಚಿಸಿದ್ದಾರೆ. “ಕವಿಕುಲಗುರು” ಎಂದು ಪ್ರಖ್ಯಾತನಾದವರು. ಕವಿ ಕಾಳಿದಾಸ ಅವರ ಹೆಸರನ್ನೇ ಮಧ್ಯಪ್ರದೇಶ ಸರ್ಕಾರ ಈ ಪ್ರಶಸ್ತಿಗೆ ಇಟ್ಟಿದೆ.

ರಾಜ್ಯದ 7 ಜನರಿಗೆ ಕಾಳಿದಾಸ್​ ಸಮ್ಮಾನ್​ ಪ್ರಶಸ್ತಿ

ಮಧ್ಯಪ್ರದೇಶ ಸರ್ಕಾರ ಕರ್ನಾಟಕದ ಏಳು ಜನರಿಗೆ ಕಾಳಿದಾಸ್​ ಸಮ್ಮಾನ್​ ಪ್ರಶಸ್ತಿ ನೀಡಿ ಗೌರವಿಸಿದೆ.

  • ಮಲ್ಲಿಕಾರ್ಜುನ್​ ಮನ್ಸೂರು
  • ಕುಮಾರ್​ ಗಂಧರ್ವ
  • ಬಿವಿ ಕಾರಂತ್​
  • ಗಿರೀಶ್​ ಕಾರ್ನಾಡ್​​
  • ಪಂಡಿತ ಪಟ್ಟರಾಜ್​ ಗವಾಯಿ
  • ಸರೋಜಾ ವೈದ್ಯನಾಥನ್
  • ವೆಂಕಟೇಶ​ ಕುಮಾರ್​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದು ಎರಡೂ ಪಕ್ಷಗಳಿಗೆ ಲಾಭವಾಗಿದೆ: ಯತ್ನಾಳ್
ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದು ಎರಡೂ ಪಕ್ಷಗಳಿಗೆ ಲಾಭವಾಗಿದೆ: ಯತ್ನಾಳ್
ಮೆಟ್ರೊ ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ಹಳಿ ಮೇಲೆ ಮೂತ್ರ ಮಾಡಿದ ವ್ಯಕ್ತಿ
ಮೆಟ್ರೊ ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ಹಳಿ ಮೇಲೆ ಮೂತ್ರ ಮಾಡಿದ ವ್ಯಕ್ತಿ
ಚನ್ನಪಟ್ಟಣ ಕ್ಷೇತ್ರಕ್ಕೆ ತಾನು ಅಭ್ಯರ್ಥಿಯೆಂದು ಇವತ್ತು ಡಿಕೆಶಿ ಹೇಳಲಿಲ್ಲ
ಚನ್ನಪಟ್ಟಣ ಕ್ಷೇತ್ರಕ್ಕೆ ತಾನು ಅಭ್ಯರ್ಥಿಯೆಂದು ಇವತ್ತು ಡಿಕೆಶಿ ಹೇಳಲಿಲ್ಲ
ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವ ವ್ಯಾಪಾರಸ್ಥರು!
ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವ ವ್ಯಾಪಾರಸ್ಥರು!
ಆನೆಗಳ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್, ವಿಡಿಯೋ ನೋಡಿ
ಆನೆಗಳ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್, ವಿಡಿಯೋ ನೋಡಿ
ಇಡಿ ದಾಳಿ: ಮೈಸೂರು ಮುಡಾ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್
ಇಡಿ ದಾಳಿ: ಮೈಸೂರು ಮುಡಾ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್
ವಿರಾಟ್ ಕೊಹ್ಲಿ ಔಟಾದಾಗ ರೋಹಿತ್ ಶರ್ಮಾ ರಿಯಾಕ್ಷನ್ ಹೇಗಿತ್ತು ನೋಡಿ
ವಿರಾಟ್ ಕೊಹ್ಲಿ ಔಟಾದಾಗ ರೋಹಿತ್ ಶರ್ಮಾ ರಿಯಾಕ್ಷನ್ ಹೇಗಿತ್ತು ನೋಡಿ
ಬೆಳಗಾವಿ: ಗೃಹಲಕ್ಷ್ಮೀ ಯೋಜನೆ ಹಣದಿಂದ ಎತ್ತು ಖರೀದಿಸಿದ ರೈತ ಮಹಿಳೆ
ಬೆಳಗಾವಿ: ಗೃಹಲಕ್ಷ್ಮೀ ಯೋಜನೆ ಹಣದಿಂದ ಎತ್ತು ಖರೀದಿಸಿದ ರೈತ ಮಹಿಳೆ
‘ಸುದೀಪ್ ಸರಿಯಾದ ನಿರ್ಧಾರವೇ ತೆಗೆದುಕೊಂಡಿರ್ತಾರೆ’; ಮಿತ್ರ
‘ಸುದೀಪ್ ಸರಿಯಾದ ನಿರ್ಧಾರವೇ ತೆಗೆದುಕೊಂಡಿರ್ತಾರೆ’; ಮಿತ್ರ
Daily Devotional: ಮಹಿಳೆಯರು ರಾತ್ರಿ ಕನ್ನಡಿ ನೋಡಬಾರದು ಏಕೆ?
Daily Devotional: ಮಹಿಳೆಯರು ರಾತ್ರಿ ಕನ್ನಡಿ ನೋಡಬಾರದು ಏಕೆ?