ಸಹಕಾರಕ್ಕೆ ಅಸಹಕಾರ: 3 ಮತಗಳಿಂದ ವಿಧೇಯಕ ತಿರಸ್ಕೃತ, ಸರ್ಕಾರಕ್ಕೆ ಮುಖಭಂಗ

ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆ ವಿಧಾನ ಪರಿಷತ್ ತಿರಸ್ಕೃತಗೊಂಡಿದೆ. 23 ಮತಗಳು ಪರವಾಗಿ, 26 ಮತಗಳು ವಿರುದ್ಧವಾಗಿ ಬಂದವು. ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಮಸೂದೆ ಪರಿಷತ್ತಿನಲ್ಲಿ ತಿರಸ್ಕೃತಗೊಂಡಿದ್ದು ಸರ್ಕಾರ ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ. ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯೆ ಕಡಿಮೆಯಾಗಿರುವುದೇ ಇದಕ್ಕೆ ಕಾರಣವಾಗಿದೆ.

ಸಹಕಾರಕ್ಕೆ ಅಸಹಕಾರ: 3 ಮತಗಳಿಂದ ವಿಧೇಯಕ ತಿರಸ್ಕೃತ, ಸರ್ಕಾರಕ್ಕೆ ಮುಖಭಂಗ
ವಿಧಾನಸೌಧ
Updated By: ವಿವೇಕ ಬಿರಾದಾರ

Updated on: Aug 20, 2025 | 3:58 PM

ಬೆಂಗಳೂರು, ಆಗಸ್ಟ್​ 20: ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್​ನಲ್ಲಿ (Legislative Council) ತಿರಸ್ಕೃತಗೊಂಡಿದ್ದು, ಸರ್ಕಾರ (Karnataka Government) ಮುಜುಗುರಕ್ಕೆ ಒಳಗಾಗಿದೆ. ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ವಿರುದ್ಧ 26 ಮತಗಳು ಬಂದವು, ಪರ 23 ಮತಗಳು ಬಂದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ವಿಧಾನಪರಿಷತ್​ನಲ್ಲಿ ತಿರಸ್ಕೃತಗೊಂಡಿದೆ. ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ವಿಚಾರವಾಗಿ ಸುದೀರ್ಘ, ಚರ್ಚೆಯಾಗಿ ಅಂಗೀಕಾರಗೊಂಡಿತ್ತು.

ಬುಧವಾರ (ಆ.20) ಕಾನೂನು ಸಚಿವ ಹೆಚ್​​ಕೆ ಪಾಟೀಲ್​ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕವನ್ನು ವಿಧಾನಪರಿಷತ್​ನಲ್ಲಿ ಮಂಡಿಸಿದರು. ಆಗ, ವಿಪಕ್ಷಗಳು ವಿಧೇಯಕವನ್ನು ಮತಕ್ಕೆ ಹಾಕುವಂತೆ ಮನವಿ ಮಾಡಿದವು. ಬಳಿಕ, ಸಭಾಪತಿ ಬಸವರಾಜ ಹೊರಟ್ಟಿಯವರು ವಿಧೇಯಕವನ್ನು ಮತಕ್ಕೆ ಹಾಕಲು ಮುಂದಾದರು.

ಮತಕ್ಕೆ ಹಾಕುವ ಮೊದಲು ಎದ್ದು ನಿಂತ ಹೆಚ್​ಕೆ ಪಾಟೀಲ್, ಇದು ವಿರೋಧ ಪಕ್ಷಗಳ ಘನತೆಗೆ ಇದು ತಕ್ಕದ್ದಲ್ಲ. ಇದೊಂದು ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯುತ್ತದೆ. ನಾನು ಎಲ್ಲ ಉತ್ತರ ಕೊಟ್ಟಮೇಲೂ, ಮತಕ್ಕೆ ಹಾಕುವುದು ಅನವಶ್ಯಕವಾಗಿದೆ. ರಾಜಕಾರಣ ತರುವಂಥದ್ದು ಸರಿಯಲ್ಲ ಎಂದು ಹೇಳಿದರು.

ಇದನ್ನೂ ಓದಿ: ಸರ್ಕಾರಕ್ಕೆ ಹಿನ್ನಡೆ: ಗ್ರೇಟರ್ ಬೆಂಗಳೂರು ವಿಧೇಯಕ ವಾಪಸ್ ಕಳುಹಿಸಿದ ರಾಜ್ಯಪಾಲರು

ನಂತರ, ಸಭಾಪತಿ ಬಸವರಾಜ್ ಹೊರಟ್ಟಿಯವರು ಮತಕ್ಕೆ ಹಾಕಬೇಕಾ? ಬೇಡವಾ? ಎಂದು ಮತ್ತೊಮ್ಮೆ ಕೇಳಿದರು. ವಿಪಕ್ಷಗಳು ಮತಕ್ಕೆ ಹಾಕುವಂತೆ ಹೇಳಿದ ಮೇಲೆ, ಸಭಾಪತಿ ಬಸವರಾಜ ಹೊರಟ್ಟಿ ವಿಧೇಯಕವನ್ನು ಮತಕ್ಕೆ ಹಾಕಿದರು. ಆಗ, ವಿಧೇಯಕದ ಪರವಾಗಿ 23 ಮತಗಳು ಮತ್ತು ವಿರುದ್ಧವಾಗಿ 26 ಮತಗಳು
ಬಂದವು. ಈ ಕಾರಣದಿಂದ ವಿಧೇಯಕ ತಿರಸ್ಕೃತಗೊಂಡಿತು.

ಪರಿಷತ್​ನಲ್ಲಿ ಕಾಂಗ್ರೆಸ್​ ಸಂಖ್ಯೆ ಕಡಿಮೆ ಆಗಲು ಕಾರಣ

ಕಾಂಗ್ರೆಸ್​ನ ಯು.ಬಿ.ವೆಂಕಟೇಶ್, ಪ್ರಕಾಶ್ ರಾಥೋಡ್ ಅವರ ಸದಸ್ಯತ್ವ ಅವಧಿ ಮುಕ್ತಾಯಗೊಂಡಿದೆ. ಇನ್ನು, ಕಾಂಗ್ರೆಸ್​ನಿಂದ ಸಿ.ಪಿ.ಯೋಗೇಶ್ವರ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈ ಕಾರಣದಿಂದ ವಿಧಾನಪರಿಷತ್​ನಲ್ಲಿ ಕಾಂಗ್ರೆಸ್​ ಬಲ ಕಡಿಮೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:52 pm, Wed, 20 August 25