ಯಾವಾಗಲೋ ಒಮ್ಮೆ ಸಿಗುತ್ತಿದ್ದ ಶವವನ್ನು ಪೋಸ್ಟ್ಮಾರ್ಟಂಗೆ ಕಳಿಸುತ್ತಿದ್ದೆವು, ಯಾವುದನ್ನೂ ಹೂತಿಲ್ಲ: ಮಂಡ್ಯದ ವ್ಯಕ್ತಿ
ಪಂಚಾಯ್ತಿಯವರು 250 ಶವಗಳನ್ನು ಹೂತು ಹಾಕಿರಬಹುದೆಂದು ಹೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಮಂಡ್ಯದ ವ್ಯಕ್ತಿ, ಅವರು ಹಾಗೆ ಹೇಳೋದಾದರೆ ಶವಗಳ ಅವಶೇಷಗಳು ಎಲ್ಲಿ ಹೋದವು? ಅಸಲಿಗೆ ಪಂಚಾಯ್ತಿಯವರು ಯಾರೂ ಅಲ್ಲಿಗೆ ಬರುತ್ತಿರಲಿಲ್ಲ, ಪೊಲೀಸರು ಮತ್ತು ಮಾಹಿತಿ ಕೇಂದ್ರದವರು ಮಾತ್ರ ಅಲ್ಲಿಗೆ ಬರುತ್ತಿದ್ದರು ಎಂದು ಹೇಳುವ ಅವರು ಶವಗಳನ್ನು ಹೂತು ಹಾಕುವ ಕೆಲಸ ಅಲ್ಲಿ ನಡೆದೇ ಇಲ್ಲ ಅನ್ನುತ್ತಾರೆ.
ಮಂಡ್ಯ, ಆಗಸ್ಟ್ 20: ಧರ್ಮಸ್ಥಳದಲ್ಲಿ ಶವ ಹೂತುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಅಲ್ಲೇ ಕೆಲಸ ಮಾಡುತ್ತಿದ್ದ ಮಂಡ್ಯದ ವ್ಯಕ್ತಿಯೊಬ್ಬನನ್ನು ಎಸ್ಐಟಿ ಅಧಿಕಾರಿಗಳು (SIT) ವಿಚಾರಣೆ ನಡೆಸಿದ್ದು ಅದೇ ವ್ಯಕ್ತಿಯನ್ನು ನಮ್ಮ ವರದಿಗಾರ ಮಾತಾಡಿಸಿದ್ದಾರೆ. ಈ ವ್ಯಕ್ತಿ ಹೇಳುವ ಪ್ರಕಾರ ಮುಸುಕುಧಾರಿ ತೋರಿಸಿದ ಸ್ಥಳದಲ್ಲಿ ಶವಗಳನ್ನು ಹೂತು ಹಾಕಿದ್ದರೆ ಅವಶೇಷಗಳು ಪತ್ತೆಯಾಗಬೇಕಿತ್ತು, ಅವನು ಸುಳ್ಳು ಹೇಳುತ್ತಿದ್ದಾನೆ ಮತ್ತು ದೇವಸ್ಥಾನಕ್ಕೆ ಕೆಟ್ಟ ಹೆಸರು ತರುತ್ತಿದ್ದಾನೆ. ನದಿಯಲ್ಲಿ ತೇಲಿ ಬರುತ್ತಿದ್ದ ಶವಗಳು ಅಥವಾ ಮರಕ್ಕೆ ನೇಣು ಹಾಕಿಕೊಂಡ ವ್ಯಕ್ತಿಗಳ ಶವಗಳು ಯಾವಾಗಲೋ ಒಮ್ಮೆ ತಮಗೆ ಸಿಗುತ್ತಿದ್ದವು, ಅವುಗಳನ್ನು ಪ್ಯಾಕ್ ಮಾಡಿ ಅಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕಳಿಸುವ ಕೆಲಸ ಮಾತ್ರ ತಮ್ಮದಾಗಿತ್ತು, ಯಾವ ಶವವನ್ನೂ ತಾವು ಹೂತು ಹಾಕಿಲ್ಲ ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: ಧರ್ಮಸ್ಥಳದಲ್ಲಿ ಅನನ್ಯ ಭಟ್ ನಾಪತ್ತೆ ಕೇಸ್ಗೆ ಬಿಗ್ ಟ್ವಿಸ್ಟ್: ಸುಜಾತಾ ಭಟ್ಗೆ ಮಕ್ಕಳೇ ಇರಲಿಲ್ಲ!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

