ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದಾಗ ಕುಮಾರ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು: ದರ್ಶನ್, ಬಿದರೆ ಗ್ರಾಮದ ನಿವಾಸಿ
ಕುಮಾರ್ ಗೊಲ್ಲ ಸಮುದಾಯದವರು ಮತ್ತು ಊರಲ್ಲಿ ತಮ್ಮ ಸಮುದಾಯದ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿದೆ ಎಂದು ದರ್ಶನ್ ಹೇಳುತ್ತಾರೆ. ಗ್ರಾಮಸ್ಥರು ಆರೋಪಿಗಳ ವಿರುದ್ಧ ದೂರು ದಾಖಲಿಸಲು ಸಖರಾಯಪಟ್ಟಣ ಪೊಲೀಸ್ ಠಾಣೆಗೆ ಹೋದರೂ ತಮ್ಮ ದೂರನ್ನು ಅವರು ತೆಗೆದುಕೊಳ್ಳಲಿಲ್ಲ, ಕೊನೆಗೆ ಸಮಾಜದಲ್ಲಿ ದೊಡ್ಡವರೆನಿಸಿಕೊಂಡವರಿಂದ ಒತ್ತಡ ಹಾಕಿಸಿದ ಬಳಿಕವೇ ಪೊಲೀಸರು ದೂರು ದಾಖಲಿಸಿಕೊಂಡರು ಎಂದು ದರ್ಶನ್ ಹೇಳುತ್ತಾರೆ.
ಚಿಕ್ಕಮಗಳೂರು, ಆಗಸ್ಟ್ 20: ಜಿಲ್ಲೆಯ ಕಡೂರು ತಾಲೂಕಿನ ಎಸ್ ಬಿದರೆ ಗ್ರಾಮದಲ್ಲಿ ಕುಮಾರ್ (Kumar) ಎನ್ನುವವರ ಭೀಕರ ಕೊಲೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ನಮ್ಮ ಸ್ಥಳೀಯ ವರದಿಗಾರನೊಂದಿಗೆ ಮಾತಾಡಿರುವ ದರ್ಶನ್ ಹೆಸರಿನ ವ್ಯಕ್ತಿ, ಕೆಳಗೆ ಬಿದ್ದಿದ್ದ ಎಳನೀರನ್ನು ಮುಟ್ಟಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳು ಕುಮಾರ್ ಮೇಲೆ ಮನವಂದಂತೆ ಹಲ್ಲೆ ನಡೆಸಿ ಕುರಿಯನ್ನು ಕುಯ್ಯುವಂತೆ ಅವರ ಕೈಕಾಲುಗಳನ್ನು ಕಡಿದಿದ್ದಾರೆ. ಯಾರೋ ವಿಷಯ ತಿಳಿಸಿದ ಬಳಿಕ ಗ್ರಾಮಸ್ಥರು ಅಲ್ಲಿಗೆ ಧಾವಿಸಿದಾಗ ಕುಮಾರ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಯಾರಿಗೂ ಗೊತ್ತಾಗಬಾರದೆನ್ನುವ ಕಾರಣಕ್ಕೆ ಒಂದು ಹಳ್ಳದಲ್ಲಿ ಎಳೆದು ಹಾಕಲಾಗಿತ್ತು. ಒಂದು ಅಂಬ್ಯುಲೆನ್ಸ್ ತರಿಸಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಕುಮಾರ್ ಉಳಿಯಲಿಲ್ಲ ಎಂದು ದರ್ಶನ್ ಹೇಳುತ್ತಾರೆ.
ಇದನ್ನೂ ಓದಿ: ಚಿತ್ರದುರ್ಗ: ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಯುವಕನಿಂದಲೇ ವಿದ್ಯಾರ್ಥಿನಿಯ ಕೊಲೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

