AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗ: ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಯುವಕನಿಂದಲೇ ವಿದ್ಯಾರ್ಥಿನಿಯ ಕೊಲೆ

ಚಿತ್ರದುರ್ಗದ ವಿದ್ಯಾರ್ಥಿನಿ ವರ್ಷಿತಾ ಕೊಲೆ ಪ್ರಕರಣ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮೃತಳ ಸಂಬಂಧಿಕರು ಮತ್ತು ದಲಿತಪರ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಕ್ಯಾನ್ಸರ್ ಥರ್ಡ್ ಸ್ಟೇಜ್​ನಲ್ಲಿರುವ ಯುವಕ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ: ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಯುವಕನಿಂದಲೇ ವಿದ್ಯಾರ್ಥಿನಿಯ ಕೊಲೆ
ಪ್ರಾತಿನಿಧಿಕ ಚಿತ್ರ
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 20, 2025 | 12:49 PM

Share

ಚಿತ್ರದುರ್ಗ, ಆಗಸ್ಟ್ 20: ರಾಷ್ಟ್ರೀಯ ಹೆದ್ದಾರಿ 48ರ ಬಳಿ ಪತ್ತೆಯಾದ ಅಪ್ರಾಪ್ತ ಯುವತಿ (girl) ಶವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.​ ಕ್ಯಾನ್ಸರ್ ಥರ್ಡ್ ಸ್ಟೇಜ್​ನಲ್ಲಿರುವ ಆರೋಪಿ ಚೇತನ್​ ಎಂಬಾತನೇ ಕೊಲೆ (kill) ಮಾಡಿದ್ದು, ಸದ್ಯ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೇರಹಟ್ಟಿ ಗ್ರಾಮದ ಕೋವೇರಹಟ್ಟಿ ಮೂಲದ ವರ್ಷಿತಾ(19) ಬರ್ಬರವಾಗಿ ಹತ್ಯೆಗೊಳಗಾಗಿದ್ದ ಯುವತಿ(girl). ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇರೊಬ್ಬನ ಜೊತೆ ಸಂಬಂಧ

ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಯುವಕ ಚೇತನ್​ ವರ್ಷಿತಾ ಜತೆ ಸಂಪರ್ಕದಲ್ಲಿದ್ದ. ಹೀಗಾಗಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ಮಾಡಿದ್ದು, ಈ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಬೇರೊಬ್ಬನ ಜೊತೆ ವರ್ಷಿತಾ ಸಂಬಂಧ ಹಿನ್ನೆಲೆ ಕೊಲೆ ಮಾಡಿದ್ದೇನೆ ಎಂದಿರುವ ಚೇತನ್, ಗೋನೂರು ಬಳಿ ಕರೆದೊಯ್ದು ಹೊಡೆದಾಗ ನೆಲಕ್ಕೆ ಬಿದ್ದು ಸಾವನ್ನಪ್ಪಿದಳು. ಬಳಿಕ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವುದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. 

ಇದನ್ನೂ ಓದಿ
Image
ಬಿರಿಯಾನಿ ತಿನ್ನುತ್ತಿರುವಾಗಲೇ ಯುವಕನ ಕೊಲೆ; 18 ಗಂಟೆಯಲ್ಲೇ ಆರೋಪಿಗಳ ಬಂಧನ
Image
ಬೆಂಗಳೂರು: ಲೇಡಿಸ್ ಪಿಜಿಗೆ ನುಗ್ಗಿದ ಖದೀಮ; ಚಾಕು ತೋರಿಸಿ ಲೈಂಗಿಕ ದೌರ್ಜನ್ಯ
Image
ವಿಡಿಯೋ: ಮಧ್ಯರಾತ್ರಿ ಎಟಿಎಂ ಕಳವು ಮಾಡ್ತಿದ್ದವನ ಹೆಡೆಮುರಿ ಕಟ್ಟಿದ ಪೊಲೀಸ್
Image
ಹಾಸನ: ಅಪ್ಪನ ಸಾವಿನಿಂದ ಬಯಲಾಯ್ತು ಮಗನ ಹತ್ಯೆ ರಹಸ್ಯ!

ನಡೆದದ್ದೇನು?

ಸರ್ಕಾರಿ ಪದವಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ಆಗಿದ್ದ ವರ್ಷಿತಾಳ ಶವ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರೆ 48ರ ಬಳಿ ಪತ್ತೆ ಆಗಿತ್ತು. ಅತ್ಯಾಚಾರ ಎಸಗಿ ಕೊಲೆಗೈದು ಬೆಂಕಿ ಹಚ್ಚಿರುವುದಾಗಿ ಶಂಕಿಸಲಾಗಿತ್ತು.

ಇದನ್ನೂ ಓದಿ: ಕರ್ನಾಟಕದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಭಾರಿ ಹೆಚ್ಚಳ: ಎರಡೇ ವರ್ಷದಲ್ಲಿ ಶೇ 26 ರಷ್ಟು ಹೆಚ್ಚಾದ ಪೋಕ್ಸೊ ಕೇಸ್

ಎಸ್​​​ಸಿ, ಎಸ್​​​ಟಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವರ್ಷಿತಾ ಇರುತ್ತಿದ್ದಳು. ಆಗಸ್ಟ್​ 14ರಂದು ಊರಿಗೆ ಹೋಗಲು ರಜೆ ಕೋರಿ ಹಾಸ್ಟೆಲ್ ವಾರ್ಡನ್​ಗೆ ಲಿವ್ ಲೆಟರ್ ನೀಡಿದ್ದಳು. ಅದೇ ದಿನ ಹಾಸ್ಟೆಲ್​​ನಿಂದ ವರ್ಷಿತಾ ತನ್ನ ಫೋನ್​​ನಲ್ಲಿ ಮಾತನಾಡುತ್ತಾ ಕಾಲೇಜು ಯೂನಿಫಾರ್ಮ್​ನಲ್ಲಿ ಸಹಪಾಠಿ ಜತೆ ತೆರಳಿದ್ದಳು. 

ಇನ್ನು ವಿದ್ಯಾರ್ಥಿನಿ ವರ್ಷಿತಾಳನ್ನು ಕಳೆದುಕೊಂಡ ಪೋಷಕರು ಕಣ್ಣೀರು ಹಾಕಿದ್ದಾರೆ. ವರ್ಷಿತಾ ಸಾವಿಗೆ ನ್ಯಾಯ ಕೊಡಿಸುವಂತೆ ಜಿಲ್ಲಾಸ್ಪತ್ರೆಯ ಶವಾಗಾರ ಬಳಿ ಆಕ್ರಂದಿಸಿದರು. ಚಿತ್ರದುರ್ಗದ ಚೇತನ್​​ ನಮ್ಮ ಪುತ್ರಿಯನ್ನು ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದರು.

ಚೇತನ್​​ ನನ್ನ ಪುತ್ರಿಯ ಕೊಲೆ ಮಾಡಿದ್ದಾನೆ ಎಂದ ತಾಯಿ

ಮೃತ ವರ್ಷಿತಾ ತಾಯಿ ಜ್ಯೋತಿ ತಿಪ್ಪೇಸ್ವಾಮಿ ಹೇಳಿಕೆ ನೀಡಿದ್ದು, ಮೊನ್ನೆ ರಾತ್ರಿ ಕರೆ ಮಾಡಿದಾಗ ಮಗಳು ಅಮ್ಮ ಅಂದಳು ಅಷ್ಟೇ. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿ ಸ‌ಂಪರ್ಕಕ್ಕೆ ಸಿಕ್ಕಿಲ್ಲ. ನಿನ್ನೆ ಬೆಳಗ್ಗೆ ಹಾಸ್ಟೆಲ್​ ಬಳಿಗೆ ಭೇಟಿ ಮಾಡಲು ನಾನು ಬಂದಿದ್ದೆ. ಆದರೂ ಸಿಗಲಿಲ್ಲ. ಬಳಿಕ ಐಮಂಗಲ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿದ್ದೆವು. ನಿನ್ನೆ ಸಂಜೆ ವೇಳೆಗೆ ವರ್ಷಿತಾ ಕೊಲೆ ಆಗಿರುವ ವಿಚಾರ ತಿಳಿಸಿದರು. ಚಿತ್ರದುರ್ಗದ ಚೇತನ್ ಫೋನ್ ಮಾಡಿ ಕರೆದೊಯ್ದು ನನ್ನ ಪುತ್ರಿಯ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದರು.

ಹಾಸ್ಟೆಲ್ ಬಳಿಗೆ ಬಂದಾಗ ನನಗೆ ಡೌಟ್ ಇತ್ತು. ಹಾಸ್ಟೆಲ್​ನ ಕೆಲ ಹುಡುಗಿಯರು ಚೇತನ್ ಹೆಸರು ಹೇಳಿದರು. ಹಾಸ್ಟೆಲ್ ಬಳಿಗೆ ಬಾ ಎಂದು ಚೇತನ್​ಗೆ ಕರೆ ಮಾಡಿದರೆ ಬರಲಿಲ್ಲ. ವರ್ಷಿತಾಳಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದಾರೆ. ಆರೋಪಿಗೆ ಗಲ್ಲಿಗೇರಿಸಬೇಕೆಂದು ತಾಯಿ ಜ್ಯೋತಿ ಆಗ್ರಹಿಸಿದರು.

ನ್ಯಾಯ ಸಿಗುವವರೆಗೆ ಮೃತದೇಹ ತೆಗೆದುಕೊಂಡು ಹೋಗಲ್ಲ ಎಂದ ತಂದೆ

ತಂದೆ ತಿಪ್ಪೇಸ್ವಾಮಿ ಪ್ರತಿಕ್ರಿಯಿಸಿದ್ದು, ಮೊನ್ನೆ ಫೋನ್ ಸ್ವಿಚ್ ಆಫ್ ಆದಾಗ ನಾಪತ್ತೆ ದೂರು ನೀಡಿದ್ದೆವು. ಹಾಸ್ಟೆಲ್ ಸಿಬ್ಬಂದಿ ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅವರು ಕಾಳಜಿ ವಹಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಏನಾಗಿದೆ ಎಂದು ನಮಗೆ ಗೊತ್ತಿಲ್ಲ. ಹಾಸ್ಟೆಲ್​ಗೆ ಕಳಿಸಿದ್ದು ಮಾತ್ರ ಗೊತ್ತು ಎಂದಿದ್ದಾರೆ.

ಚೇತನ್ ವರ್ಷಿತಾಳೊಂದಿಗೆ ಫೋನಲ್ಲಿ ಮಾತಾಡುತ್ತಿದ್ದ. ಚುಡಾಯಿಸುತ್ತಿದ್ದ, ಆಕೆಯೊಂದಿಗೆ ಓಡಾಡುತ್ತಿದ್ದನಂತೆ. ನಮಗೆ ವರ್ಷಿತಾಳ ಸಾವಿಗೆ ನ್ಯಾಯ ಬೇಕು. ನ್ಯಾಯ ಸಿಗುವವರೆಗೆ ನಾವು ಮೃತದೇಹ ತೆಗೆದುಕೊಂಡು ಹೋಗಲ್ಲ. ಚೇತನ್​ ನನ್ನು ಗಲ್ಲಿಗೇರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೊಂದು ಪೂರ್ವನಿಯೋಜಿತ ಕೃತ್ಯ ಎಂದ ವರ್ಷಿತಾ ಸಂಬಂಧಿ ಪ್ರವೀಣ್

ವರ್ಷಿತಾ ಸಂಬಂಧಿ ಪ್ರವೀಣ್ ಎಂಬುವವರು ಮಾತನಾಡಿದ್ದು, ನಾಲ್ಕು ದಿನಗಳಿಂದ ಚಿತ್ರದುರ್ಗದ ಹಾಸ್ಟೆಲ್ ನಲ್ಲಿ ಇರಲಿಲ್ಲ. ಕೋವೇರಹಟ್ಟಿಯ ಮನೆಗೂ ಬಂದಿರಲಿಲ್ಲ. ಪೊಲೀಸರು ಪ್ರಕರಣ ಬೇಧಿಸಿ ಆರೋಪಿಗಳನ್ನು ಪತ್ತೆ ಹಚ್ಚಬೇಕು. ಈ ರೀತಿಯ ಪ್ರಕರಣ ನಾರ್ಥ್ ಇಂಡಿಯಾದಲ್ಲಿ ನೋಡುತ್ತಿದ್ದೆವು. ಇಂತಹ ಮಳೆಗಾಲದಲ್ಲೂ ವಿದ್ಯಾರ್ಥಿನಿಯ ದೇಹ ಸುಟ್ಟು ಹಾಕಿದ್ದಾರೆ. ಇದೊಂದು ಪೂರ್ವನಿಯೋಜಿತ ಕೃತ್ಯ ಎಂದೆನಿಸುತ್ತದೆ ಎಂದರು.

ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಯುವಕನ ವಿಚಾರಣೆ

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:34 pm, Wed, 20 August 25