AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳ ಕೇಸಿಗೆ ಟ್ವಿಸ್ಟ್! ಅನಾಮಿಕನ ಮುಖವಾಡ ಕಳಚಿದ ಗೆಳೆಯ ರಾಜು

ಧರ್ಮಸ್ಥಳ ಕೇಸಿಗೆ ಟ್ವಿಸ್ಟ್! ಅನಾಮಿಕನ ಮುಖವಾಡ ಕಳಚಿದ ಗೆಳೆಯ ರಾಜು

ದಿಲೀಪ್​, ಚೌಡಹಳ್ಳಿ
| Updated By: ರಮೇಶ್ ಬಿ. ಜವಳಗೇರಾ|

Updated on:Aug 20, 2025 | 3:48 PM

Share

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಅನಾಮಿಕ ಮಾಸ್ಕ್​ ಮ್ಯಾನ್ ಆರೋಪ ಮಾಡಿದ್ದು, ಈ ಸಂಬಂಧ ಎಸ್​ಐಟಿ ಅಧಿಕಾರಿಗಳು ಮಾಸ್ಕ್​ ಮ್ಯಾನ್ ತೋರಿಸಿದ ಸ್ಥಳಗಳಲ್ಲಿ ಅಗೆದು ಶೋಧ ಕಾರ್ಯ ನಡೆಸಿದ್ದಾರೆ. ಆದ್ರೆ, ಎರಡು ಸ್ಥಳಗಳಲ್ಲಿ ಒಂದೆಡೆ ಅಸ್ಥಿಪಂಜರ ಸಿಕ್ಕಿದ್ದರೆ, ಮತ್ತೊಂದು ಜಾಗದಲ್ಲಿ ಮಾನವನ ಮೂಳೆಗಳು ಪತ್ತೆಯಾಗಿವೆ. ಸದ್ಯ ಎಸ್​ಐಟಿ ಅಧಿಕಾರಿಗಳು ಉತ್ಖನನ ಕಾರ್ಯ ಸ್ಥಗಿತಗೊಳಿಸಿದ್ದು, ಮಾಸ್ಕ್​ ಮ್ಯಾನ್​​ ನನ್ನು ವಿಚಾರಣೆಗೊಳಪಡಿಸಿದ್ದಾರೆ. ಇದರ ನಡುವೆ ಧರ್ಮಸ್ಥಳದಲ್ಲೇ ಕೆಲಸ ಮಾಡಿದ್ದ ಮಾಸ್ಕ್​​ ಮ್ಯಾನ್​​ ನ ಸ್ನೇಹಿತ ರಾಜು ಎನ್ನುವಾತನನ್ನು ಸಹ ಎಸ್​​ ಐಟಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ.

ಮಂಡ್ಯ/ಮಂಗಳೂರು, (ಆಗಸ್ಟ್ 20): ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಅನಾಮಿಕ ಮಾಸ್ಕ್​ ಮ್ಯಾನ್ ಆರೋಪ ಮಾಡಿದ್ದು, ಈ ಸಂಬಂಧ ಎಸ್​ಐಟಿ ಅಧಿಕಾರಿಗಳು ಮಾಸ್ಕ್​ ಮ್ಯಾನ್ ತೋರಿಸಿದ ಸ್ಥಳಗಳಲ್ಲಿ ಅಗೆದು ಶೋಧ ಕಾರ್ಯ ನಡೆಸಿದ್ದಾರೆ. ಆದ್ರೆ, ಎರಡು ಸ್ಥಳಗಳಲ್ಲಿ ಒಂದೆಡೆ ಅಸ್ಥಿಪಂಜರ ಸಿಕ್ಕಿದ್ದರೆ, ಮತ್ತೊಂದು ಜಾಗದಲ್ಲಿ ಮಾನವನ ಮೂಳೆಗಳು ಪತ್ತೆಯಾಗಿವೆ. ಸದ್ಯ ಎಸ್​ಐಟಿ ಅಧಿಕಾರಿಗಳು ಉತ್ಖನನ ಕಾರ್ಯ ಸ್ಥಗಿತಗೊಳಿಸಿದ್ದು, ಮಾಸ್ಕ್​ ಮ್ಯಾನ್​​ ನನ್ನು ವಿಚಾರಣೆಗೊಳಪಡಿಸಿದ್ದಾರೆ. ಇದರ ನಡುವೆ ಧರ್ಮಸ್ಥಳದಲ್ಲೇ ಕೆಲಸ ಮಾಡಿದ್ದ ಮಾಸ್ಕ್​​ ಮ್ಯಾನ್​​ ನ ಸ್ನೇಹಿತ ರಾಜು ಎನ್ನುವಾತನನ್ನು ಸಹ ಎಸ್​​ ಐಟಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ.

ಈ ಬಗ್ಗೆ  ಟಿವಿ9 ಜತೆ ಮಾತನಾಡಿದ ರಾಜು, 10 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದೇನೆ. ಮಾಸ್ಕ್ ಹಾಕಿರುವ ವ್ಯಕ್ತಿ, ನಾನು ಅಕ್ಕಪಕ್ಕದ ಮನೆಯವರು ನಾನು ಇದ್ದಾಗ ನೋಡಿದ್ದು ಕೇವಲ ಎರಡು ಶವಗಳು ಅಷ್ಟೇ. ಅದರಲ್ಲಿ ಒಂದು ಗಂಡು, ಇನ್ನೊಂದು ಹೆಣ್ಣು ಶವ. ಆ ಶವಗಳು ಕೊಳೆತ ಸ್ಥಿತಿಯಲ್ಲಿತ್ತು, ಆದ್ರೆ ನಾನು ಹೂತು ಹಾಕಿಲ್ಲ. ಮರದಿಂದ ಇಳಿಸಿ ನದಿಯಲ್ಲಿ ಇದ್ದಿದ್ದನ್ನು ತೆಗೆದು ವೈದ್ಯರಿಗೆ ನೀಡಿದ್ದೆ. ಈ ವೇಳೆ ಮಾಸ್ಕ್​ಮ್ಯಾನ್ ಅವರ ಅಣ್ಣ ಎಲ್ಲಾ ಜೊತೆಗಿದ್ದರು. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದು ಸುಳ್ಳು ಎಂದು ಸ್ಫೋಟಕ ಅಂಶ ಬಿಚ್ಚಿಟ್ಟಿದ್ದಾರೆ.

ಮಾಸ್ಕ್​ ಮ್ಯಾನ್ ಸುಳ್ಳು ಹೇಳುತ್ತಿದ್ದಾನೆ. ದುಡ್ಡಿನ ಆಸೆಗೆ ​ ಸುಳ್ಳು ಹೇಳುತ್ತಿದ್ದಾನೋ ಏನೋ. ಧರ್ಮಾಧಿಕಾರಿ ವಿರುದ್ಧ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಸ್ನಾನಘಟ್ಟ, ಬಾಹುಬಲಿ ಬೆಟ್ಟ, ದೇವಸ್ಥಾನದ ಬಳಿ ಕೆಲಸ ಮಾಡಿದ್ದೇನೆ. ನನಗೆ ಸ್ವಲ್ಪ ಸಮಸ್ಯೆಯಾಯಿತು, ಹಾಗಾಗಿ ಅಲ್ಲಿ ಕೆಲಸ ಬಿಟ್ಟು ಬಂದೆ‌. ಅರ್ಧ ಗಂಟೆ ನನ್ನನ್ನು ಎಸ್​ಐಟಿ ಅಧಿಕಾರಿಗಳು ವಿಚಾರಣೆ ಮಾಡಿದ್ರು ಎಂದುರಾಜು ಹೇಳಿದರು.

Published on: Aug 20, 2025 03:13 PM