ಜನರ ತೆರಿಗೆ ಹಣದಲ್ಲಿ ಸರ್ಕಾರ ಸಾಧನಾ ಸಮಾವೇಶಗಳನ್ನು ಮಾಡುತ್ತಿದೆ, ಸಾಧನೆ ಮಾತ್ರ ಸೊನ್ನೆ: ಸಿಟಿ ರವಿ
ಕಾಂಗ್ರೆಸ್ ಸರ್ಕಾರಕ್ಕೆ ಸಂವಿಧಾನದ ಬಗ್ಗೆ ಗೌರವವಿಲ್ಲ, ಅದರ ಆಶಯಗಳನ್ನು ಕಾಂಗ್ರೆಸ್ ತಿಳಿದುಕೊಂಡಿದ್ದೇಯಾದರೆ ಸಾಧನಾ ಸಮಾವೇಶಕ್ಕಾಗಿ ಮಾಡಿದ ತೆರಿಗೆ ಹಣವನ್ನು ಪಕ್ಷದ ಕಚೇರಿಯಿಂದ ತಂದು ತುಂಬಿಸಲಿ, ಸರ್ಕಾರ ಸಾಧನೆ ಮಾಡಿದ್ದರೆ ಜನ ಹೊಗಳುತ್ತಾರೆ, ಅದರೆ ಅವರು ತೆಗಳುತ್ತಿದ್ದಾರೆ, ಎಸ್ಸಿಪಿಟಿಎಸ್ಪಿ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ, ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಕಾಲರ್ಶಿಪ್ಗಳನ್ನು ನಿಲ್ಲಿಸಲಾಗಿದೆ ಎಂದು ರವಿ ಹೇಳಿದರು.
ಬೆಂಗಳೂರು, ಆಗಸ್ಟ್ 20: ವಿಧಾನಸೌಧದ ಅವರಣದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ಒಂದು ರಸ್ತೆಗುಂಡಿ ಮುಚ್ಚಲು ಯೋಗ್ಯತೆಯಿಲ್ಲದ ಸರ್ಕಾರ ಜನರ ತೆರಿಗೆ ಹಣದಲ್ಲಿ ಸಾಧನಾ ಸಮಾವೇಶಗಳನ್ನು ಮಾಡಿ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಸರ್ಕಾರವನ್ನು (Siddaramaiah government) ಜರಿದರು. ಈ ಸರ್ಕಾರದ ಸಾಧನೆ ಏನೂ ಇಲ್ಲ, ದೊಡ್ಡ ಸೊನ್ನೆ, ಆಡಳಿತವನ್ನು ಯಾವುದೇ ಸರ್ಕಾರ ನಡೆಸುತ್ತಿರಲಿ, ಅದು ರಾಜ್ಯ ಬೊಕ್ಕಸಕ್ಕೆ ಟ್ರಸ್ಟಿಯೇ ಹೊರತು ಮಾಲೀಕನಲ್ಲ, ಕಾಂಗ್ರೆಸ್ ಸರ್ಕಾರ ಬೇಕಾದರೆ ತನ್ನ ಪಕ್ಷದ ಕಚೇರಿಯಿಂದ ಸಾಧನಾ ಸಮಾವೇಶಗಳನ್ನು ಮಾಡಿಕೊಳ್ಳಲಿ, ಯಾರು ಬೇಡವೆನ್ನುತ್ತಾರೆ? ಆದರೆ ಜನರ ಹಣದಲ್ಲಿ ಮೆರೆಯೋದು ಖಂಡನೀಯ ಎಂದು ಸಿಟಿ ರವಿ ಹೇಳಿದರು.
ಇದನ್ನೂ ಓದಿ: ರಾಹುಲ್ ಗಾಂಧಿ ಬಗ್ಗೆ ಮಾತಾಡುತ್ತಿದ್ದ ಸಿಟಿ ರವಿ ಮಹಿಳೆಯೊಬ್ಬರು ಮಧ್ಯಪ್ರವೇಶಿಸಿದಾಗ ನಿರುತ್ತರರಾದರು!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

