ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ವಿದ್ಯುತ್ ದರ ಏರಿಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. 5ತಿಂಗಳಲ್ಲಿ ಈಗ ಮೂರನೇ ಬಾರಿಗೆ ವಿದ್ಯುತ್ ದರ ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಪ್ರಸ್ತಾವನೆ ಸಲ್ಲಿಸಿದೆ. ಬೆಸ್ಕಾಂ ಪ್ರತಿ ಯೂನಿಟ್ಗೆ 1.39ರೂ., ಮೆಸ್ಕಾಂ- 1.69 ರೂ., ಹೆಸ್ಕಾಂ 83 ಪೈಸೆ, ಸೆಸ್ಕ್-1.56ರೂ. ಮತ್ತು ಜೆಸ್ಕಾಂ 1.31 ರೂ. ಹೆಚ್ಚಳದ ಬಗ್ಗೆ ಪ್ರಸ್ತಾವನೆಯಲ್ಲಿ ಉಲ್ಲೇಖವಾಗಿದೆ.
ಕಳೆದ ಎರಡು ತ್ರೈಮಾಸಿಕಗಳಲ್ಲಿ ಎಸ್ಕಾಂಗಳಿಗೆ ಒಟ್ಟು 3,556 ಕೋಟಿ ರೂ.ನಷ್ಟವಾಗಿದ್ದು, ಅದನ್ನು ಸರಿದೂಗಿಸಲು KERC ದರ ಏರಿಕೆ ಮಾಡುವ ನಿರ್ಧಾರಕ್ಕೆ ಬಂದಿದೆ. ಇನ್ನು ಪ್ರಸ್ತಾವನೆ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಗಡುವು ನೀಡಿದೆ. ಇನ್ನು ಆಕ್ಷೇಪಣಾ ಅವಧಿ ಮುಕ್ತಾಯ, ಪರಿಶೀಲನೆ ಬಳಿಕ ಏಪ್ರಿಲ್ 1ರಿಂದ ವಿದ್ಯುತ್ ದರದಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ.
ಸಾಹಿತ್ಯ ಪತ್ರಿಕೆಗಳ ಗಾತ್ರ ಸಣ್ಣದಾಗಿದ್ದರೂ, ಗುಣಮಟ್ಟ ಮಹತ್ವದ್ದಾಗಿದೆ: ಡಾ. ಎಚ್.ಎಸ್. ಶಿವಪ್ರಕಾಶ್
Published On - 2:50 pm, Mon, 11 January 21