ಲಂಡನ್‌ನಿಂದ ಬೆಂಗಳೂರಿಗೆ ಬಂದ 5 ಮಂದಿಗೆ ಕೊರೊನಾ.. ರೂಪಾಂತರಿ ಕೊರೊನಾ ಟೆಸ್ಟ್ಗೆ ಸ್ಯಾಂಪಲ್ ರವಾನೆ
ಇಂದು ಬೆಳಗ್ಗೆ ಲಂಡನ್‌ನಿಂದ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ಐವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ದೇವನಹಳ್ಳಿ: ಬೆಂಗಳೂರಿಗೆ ಮತ್ತೆ ಕೊರೊನಾ ಕಂಟಕ ಹೆಚ್ಚಾಗುತ್ತಿದೆ. ಇಂದು ಬೆಳಗ್ಗೆ ಲಂಡನ್‌ನಿಂದ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ಐವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಆದರೆ ಅದು ರೂಪಾಂತರಿ ಕೊರೊನಾನಾ ಎಂಬುದು ದೃಢಪಡಬೇಕಿದೆ.
ಏರ್‌ಪೋರ್ಟ್‌ನಲ್ಲಿ ನಡೆಸಿದ ಕೊವಿಡ್ ಟೆಸ್ಟ್‌ನಲ್ಲಿ ಕೊರೊನಾ ಇರುವುದ ದೃಢಪಟ್ಟಿದೆ. ಬೆಳಗ್ಗೆ ಲಂಡನ್‌ನಿಂದ ಕೆಐಎಬಿಗೆ ಸುಮಾರು 247 ಪ್ರಯಾಣಿಕರ ಬಂದಿಳಿದ್ರು. ಇವರ ಪೈಕಿ ಐವರ ಕೊರೊನಾ ವರದಿ ಪಾಸಿಟಿವ್ ಬಂದಿದ್ದು 242 ಜನರ ವರದಿ ನೆಗಟಿವ್ ಬಂದಿದೆ. ಇನ್ನು ಐವರಿಗೆ ರೂಪಾಂತರಿ ಕೊರೊನಾ ಇದೆಯಾ ಎಂದು ಟೆಸ್ಟ್ ಮಾಡಲಾಗುತ್ತಿದೆ.
ಐವರ ಕೊವಿಡ್ ಸ್ಯಾಂಪಲ್ಸ್ ಪರೀಕ್ಷೆ ಬಳಿಕ ರೂಪಾಂತರಿ ಕೊರೊನಾ ಇದೆಯಾ ಎಂಬ ಶಂಕೆಗೆ ತೆರೆ ಬೀಳಲಿದೆ. ಸೊಂಕಿತರನ್ನ ಕರೆದೋಗಲು ಏರ್ಪೋಟ್ನಲ್ಲಿ ಆ್ಯಂಬುಲೆನ್ಸ್ಗಳ ಆಯೋಜನೆ ಮಾಡಲಾಗಿದೆ. ಐವರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗಿದೆ.
ಲಂಡನ್‌ನಿಂದ ಬಂದ ಐವರಿಗೆ ಕೊರೊನಾ ದೃಢವಾದ ಹಿನ್ನೆಲೆಯಲ್ಲಿ ಒಂದೇ ವಿಮಾನದಲ್ಲಿ ಬಂದ 242 ಪ್ರಯಾಣಿಕರಲ್ಲಿ ಆತಂಕ ಹೆಚ್ಚಾಗಿದೆ. ತಮಗೂ ಸೋಂಕು ಹರಡಿರಬಹುದು ಎಂಬ ಭೀತಿ ಹುಟ್ಟುಕೊಂಡಿದೆ. ಹಾಗೂ ಲಂಡನ್‌ನಿಂದ ಬಂದ ಪ್ರಯಾಣಿಕರು ಕ್ಯಾಬ್‌ಗಳಲ್ಲಿ ತಮ್ಮ ಮನೆಗಳಿಗೆ ತೆರಳಿದ್ದಾರೆ. ಹೀಗಾಗಿ ಕ್ಯಾಬ್ ಚಾಲಕರಲ್ಲಿಯೂ ಕೊರೊನಾ ಆತಂಕ ಮನೆ ಮಾಡಿದೆ.
ರೂಪಾಂತರಿ ವೈರಸ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್.. ಲಾಕ್ಡೌನ್ ಆಯ್ತು; ಮಕ್ಕಳೇ ಹೆಚ್ಚು ಟಾರ್ಗೆಟ್
Published On - 12:34 pm, Mon, 11 January 21