
ಬೆಳಗಾವಿ: ಖಾನಾಪುರ ತಾಲೂಕು ಆಸ್ಪತ್ರೆಗೆ 3 ಆ್ಯಂಬುಲೆನ್ಸ್ ಕೊಡುಗೆ ನೀಡಿರುವ ಶಾಸಕಿ ಅಂಜಲಿ ನಿಂಬಾಳ್ಕರ್, ಸ್ವತಃ ತಾವೇ ಆ್ಯಂಬುಲೆನ್ಸ್ ಚಲಾಯಿಸಿ ಅಚ್ಚರಿ ಮೂಡಿಸಿದ್ದಾರೆ. ಬೆಳಗಾವಿ ಜಿಲ್ಲೆ ಖಾನಾಪುರ ಮುಖ್ಯರಸ್ತೆಯಲ್ಲಿ ಆ್ಯಂಬುಲೆನ್ಸ್ ಚಾಲನೆ ಮಾಡಿರುವ ಶಾಸಕಿ ಅಂಜಲಿ ನಿಂಬಾಳ್ಕರ್, ಆಸ್ಪತ್ರೆಗೆ ತಾವು ನೀಡಿರುವ ಆ್ಯಂಬುಲೆನ್ಸ್ನ್ನು ಸ್ವತಃ ತಾವೇ ಚಲಾಯಿಸುವುದರ ಮೂಲಕ ಚಾಲನೆ ನೀಡಿದ್ದಾರೆ.
ಈ ಮುನ್ನ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸ್ವತಃ ಆ್ಯಂಬುಲೆನ್ಸ್ ಚಾಲಿಸಿ ಅಚ್ಚರಿ ಮೂಡಿಸಿದ್ದರು. ಇದೀಗ ಶಾಸಕಿ ಅಂಜಲಿ ನಿಂಬಾಳ್ಕರ್ ಸಹ ಆ್ಯಂಬುಲೆನ್ಸ್ ಓಡಿಸಿ ಅಚ್ಚರಿ ಮೂಡಿಸಿದ್ದಾರೆ.
ಶಾಸಕ ರೇಣುಕಾಚಾರ್ಯ ಅವರೂ ಆ್ಯಂಬುಲೆನ್ಸ್ ಚಲಾಯಿಸಿದ್ದರು!
ಸಿಎಂ ಯಡಿಯೂರಪ್ಪರ ರಾಜಕೀಯ ಕಾರ್ಯದರ್ಶಿ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಸದ್ಯ ತಮ್ಮ ಕ್ಷೇತ್ರದ ಜನರ ಕೊವಿಡ್ ಸೋಂಕಿತರ ಸಲುವಾಗಿ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳ ತಮ್ಮ ಖಾತೆಯಲ್ಲಿ ಕೊವಿಡ್ ಸೋಂಕಿನ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ ಶಾಸಕ ರೇಣುಕಾಚಾರ್ಯ. ಹೀಗಿರುವಾಗ ಇಂದು ಅವರು ಮಾಡಿದ ಕೆಲಸವೊಂದು ನಿಜಕ್ಕೂ ಓರ್ವ ಶಾಸಕ ಹೀಗೂ ಇರಬಹುದಾ ಎಂದು ಅಚ್ಚರಿ ಮೂಡಿಸಿತ್ತು. ಅಲ್ಲದೇ, ನೆಟ್ಟಿಗರಂತೂ ಶಾಸಕ ರೇಣುಕಾಚಾರ್ಯರನ್ನು ಹಾಡಿ ಹೊಗಳುತ್ತಿದ್ದರು. ಇದೀಗ ಶಾಸಕಿ ಅಂಜಲಿ ನಿಂಬಾಳ್ಕರ್ ಸಹ ಆ್ಯಂಬುಲೆನ್ಸ್ ಓಡಿಸಿ ಅಚ್ಚರಿ ಮೂಡಿಸಿದ್ದಾರೆ.
ಕಳೆದ ಹತ್ತು ದಿನಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಘಪರಿವಾರದ ಕಾರ್ಯಕರ್ತ ಸಾಸ್ವೇಹಳ್ಳಿ ರಂಗಪ್ಪ ಎಂಬುವವರ ತಾಯಿ ಕೊರೊನಾ ಸೋಂಕಿನಿಂದ ಇಂದು ಮೃತಪಟ್ಟಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕಾಗಮಿಸಿದ ಶಾಸಕ ರೇಣುಕಾಚಾರ್ಯ, ಸಾಸ್ವೇಸಾಂತ್ವನ ಹೇಳಿದಹಳ್ಳಿ ರಂಗಪ್ಪ ಅವರಿಗೆ ಸಾಂತ್ವನ ಹೇಳಿದರು. ಅಲ್ಲದೇ, ಮೃತದೇಹವನ್ನು ಹೊತ್ತ ಆ್ಯಂಬುಲೆನ್ಸ್ನ್ನು ಸ್ವತಃ ಚಾಲನೆ ಮಾಡಿಕೊಂಡು ಚಿತಾಗಾರಕ್ಕೆ ಕೊಂಡೊಯ್ದಿದ್ದರು.
ಇದನ್ನೂ ಓದಿ: ಕ್ರಿಕೆಟ್ ದಂಪತಿಯ ವ್ಯಾಯಾಮ, ವೈರಲ್!
ಕೋವಿಡ್ ಸೋಂಕಿತ ಮಾವನನ್ನು ಅಸ್ಸಾಮಿನ ಈ ಮಹಿಳೆ ಬೆನ್ನ ಮೇಲೆ ಆಸ್ಪತ್ರೆಗೆ ಹೊತ್ತುಕೊಂಡು ಹೋಗುತ್ತಿರುವ ಫೋಟೋ ವೈರಲ್ ಆಗಿದೆ
(Khanapur MLA Anjali Nimbalkar herself drives ambulance in Belagavi)