KSRTC: ಬಸ್ ಚಾಲನೆ ಮಾಡುವಾಗ ಚಾಲಕ ನಿದ್ರಿಸಿದರೂ ಅಪಘಾತವಾಗಲ್ಲ; ಕೃತಕ ಬುದ್ಧಿಮತ್ತೆ ಬಳಸಿ ಅಪಘಾತ ತಡೆಯಲಿದೆ ಕೆಎಸ್​ಆರ್​ಟಿಸಿ

ಬಸ್​​ ಸ್ವಲ್ಪ ನಿಯಂತ್ರಣ ತಪ್ಪಿದರೂ ಕೂಡಲೇ ಕಂಟ್ರೋಲ್ ರೂಮ್​ಗೆ ಮಾಹಿತಿ ರವಾನೆಯಾಗಲಿದೆ. ಇದರಿಂದ ಅಪಘಾತ ರಹಿತ ಸಾರಿಗೆ ಸೌಲಭ್ಯ ಸೇವೆ ಲಭ್ಯವಾಗಲಿದೆ ಎಂದು ಕೆಎಸ್​ಆರ್​ಟಿಸಿ ತಿಳಿಸಿದೆ.

KSRTC: ಬಸ್ ಚಾಲನೆ ಮಾಡುವಾಗ ಚಾಲಕ ನಿದ್ರಿಸಿದರೂ ಅಪಘಾತವಾಗಲ್ಲ; ಕೃತಕ ಬುದ್ಧಿಮತ್ತೆ ಬಳಸಿ ಅಪಘಾತ ತಡೆಯಲಿದೆ ಕೆಎಸ್​ಆರ್​ಟಿಸಿ
ಕೆಎಸ್​ಆರ್​ಟಿಸಿ ಬಸ್​
Follow us
TV9 Web
| Updated By: guruganesh bhat

Updated on: Jun 11, 2021 | 7:04 PM

ಬೆಂಗಳೂರು: ಪ್ರಯಾಣಿಕರ ಸುರಕ್ಷತೆಗೆ ಕೆಎಸ್​ಆರ್​ಟಿಸಿ ದಿಟ್ಟ ಹೆಜ್ಜೆ ಇಟ್ಟಿದೆ. ಕೃತಕ ಬುದ್ಧಿಮತ್ತೆ ಆಧರಿಸಿ ಅಪಘಾತ ತಡೆಯಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಕೆಎಸ್​ಆರ್​ಟಿಸಿ ಮುಂದಾಗಿದೆ. ಸಿಎಂಎಸ್, ಡಿಎಂಎಸ್​ ಎಂಬ 2 ರೀತಿಯ ತಂತ್ರಜ್ಞಾನವನ್ನು 1044 ಬಸ್​ಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ.

ಈ ತಂತ್ರಜ್ಞಾನ ಅಳವಡಿಕೆಯಿಂದ ಚಾಲಕ ನಿದ್ರಿಸಿದರೆ, ಬಸ್ ರಸ್ತೆ ಬಿಟ್ಟು ಡಿವೈಡರ್​ಗಳತ್ತ, ಬಸ್​​ ಬೇರೆ ವಾಹನಗಳತ್ತ ಹೋಗುವುದು ತಪ್ಪಲಿದೆ. ಬಸ್​​ ಸ್ವಲ್ಪ ನಿಯಂತ್ರಣ ತಪ್ಪಿದರೂ ಕೂಡಲೇ ಕಂಟ್ರೋಲ್ ರೂಮ್​ಗೆ ಮಾಹಿತಿ ರವಾನೆಯಾಗಲಿದೆ. ಇದರಿಂದ ಅಪಘಾತ ರಹಿತ ಸಾರಿಗೆ ಸೌಲಭ್ಯ ಸೇವೆ ಲಭ್ಯವಾಗಲಿದೆ ಎಂದು ಕೆಎಸ್​ಆರ್​ಟಿಸಿ ತಿಳಿಸಿದೆ.

KSRTC Logo: ಯಾರಿಗೆ ಟ್ರೇಡ್​ಮಾರ್ಕ್​: ನಮಗೆ ಯಾವ ಆದೇಶವೂ ಬಂದಿಲ್ಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಇನ್ನು ಮುಂದೆ ಕೆಎಸ್‌ಆರ್‌ಟಿಸಿ ಟ್ರೇಡ್​ ಮಾರ್ಕ್​ ಬಳಸುವಂತಿಲ್ಲ ಎಂಬ ಆದೇಶವನ್ನು ಕೇಂದ್ರದ ಟ್ರೇಡ್​ ಮಾರ್ಕ್ ನೋಂದಣಿ ಇಲಾಖೆ ನೀಡಿರುವ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೇಂದ್ರ ಟ್ರೇಡ್​ ಮಾರ್ಕ್ ರಿಜಿಸ್ಟ್ರಿ ಸಂಸ್ಥೆಯು ಬುಧವಾರ ಅಂತಿಮ ತೀರ್ಪು ತೀರ್ಪು ಪ್ರಕಟಿಸಿದ್ದು, ಎರಡು ರಾಜ್ಯಗಳ ನಡುವಿನ ಒಂದು ದಶಕದ ಕಾನೂನಾತ್ಮಕ ಹೋರಾಟವು ಅಂತ್ಯಗೊಂಡಂತಿದೆ ಎಂಬ ಮಾಧ್ಯಮಗಳ ವರದಿಯನ್ನು ನೋಡಿ ಆಶ್ಚರ್ಯವಾಗಿದೆ ಎಂದು ಹೇಳಿದ್ದಾರೆ. ಇಂಥ ಯಾವುದೇ ಸೂಚನೆ ಅಥವಾ ಆದೇಶ ನಮಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೆಎಸ್ಆರ್​ಟಿಸಿಗೆ ನೀಡಲಾದ ಟ್ರೇಡ್ ಮಾರ್ಕ್ ಪ್ರಮಾಣಪತ್ರದ ವಿರುಧ್ಧ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ ಮುಂದೆ ಮನವಿ ಸಲ್ಲಿಸಿದೆ. ಆದರೆ ಈ ಕುರಿತು ಈವರೆಗೆ ಯಾವುದೇ ಅಂತಿಮ ಆದೇಶ ಹೊರಡಿಸಿಲ್ಲ ಎಂದು ಅವರು ಹೇಳಿದ್ದಾರೆ.

ಈ ಮಂಡಳಿಯನ್ನು ಏಪ್ರಿಲ್ 4ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆಯ ಮೂಲಕ ರದ್ದುಪಡಿಸಿದೆ. ಮಂಡಳಿಯ ಎದುರು ಬಾಕಿಯಿರುವ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಲಾಗುತ್ತದೆ. ಆದ್ದರಿಂದ, ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ನೋಂದಣಿಯು ಪ್ರಸ್ತುತ ಜಾರಿಯಲ್ಲಿದೆ. ಕೆಎಸ್‌ಆರ್‌ಟಿಸಿಯು ತನಗೆ ನೀಡಲಾಗಿರುವ ಟ್ರೇಡ್‌ಮಾರ್ಕ್‌ಗಳನ್ನು ಬಳಸಲು ಅವಕಾಶವಿಲ್ಲ ಎಂಬ ಸುದ್ದಿ-ವರದಿಗಳು ಸತ್ಯಕ್ಕೆ ದೂರವಾದವು. ಇದನ್ನು ಕಾನೂನಾತ್ಮಕವಾಗಿ ಒಪ್ಪಲಾಗದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: KSRTC Logo: ಯಾರಿಗೆ ಟ್ರೇಡ್​ಮಾರ್ಕ್​: ನಮಗೆ ಯಾವ ಆದೇಶವೂ ಬಂದಿಲ್ಲ ಕೆಎಸ್​ಆರ್​ಟಿಸಿ ಎಂಡಿ ಶಿವಯೋಗಿ ಕಳಸದ ಸ್ಪಷ್ಟನೆ

KSRTC Logo: ನಮ್ಮ ಕೆಎಸ್​ಆರ್​ಟಿಸಿಯಿಂದ ಕೇರಳದ ಸಾರಿಗೆಗೆ ನಷ್ಟವೇನಿಲ್ಲ, ನಾವು ಪ್ರತಿಸ್ಪರ್ಧಿಗಳೂ ಅಲ್ಲ; ವಿವಾದ ಅನಗತ್ಯ ಎಂದ ಲಕ್ಷ್ಮಣ ಸವದಿ

(KSRTC introduce Artificial Intelligence facility in Buses to stop accidents)