AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid-19 Karnataka Update: ಕರ್ನಾಟಕದಲ್ಲಿ 8,249 ಮಂದಿಗೆ ಕೊರೊನಾ ಸೋಂಕು, 159 ಸಾವು

ಕರ್ನಾಟಕ ರಾಜ್ಯದಲ್ಲಿ ಕೊವಿಡ್ ಸೋಂಕು ಪ್ರಕರಣಗಳು ಶುಕ್ರವಾರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. 2ನೇ ಅಲೆ ವ್ಯಾಪಕವಾಗಿ ಹರಡಿದ ನಂತರ ಇದೇ ಮೊದಲ ಬಾರಿಗೆ ಸೋಂಕಿತರ ಒಟ್ಟು ಸಂಖ್ಯೆ 9 ಸಾವಿರದ ಗಡಿಯಿಂದ ಕೆಳಗಿಳಿದಿದೆ.

Covid-19 Karnataka Update: ಕರ್ನಾಟಕದಲ್ಲಿ 8,249 ಮಂದಿಗೆ ಕೊರೊನಾ ಸೋಂಕು, 159 ಸಾವು
ಸಾಂದರ್ಭಿಕ ಚಿತ್ರ
TV9 Web
| Updated By: guruganesh bhat|

Updated on:Jun 11, 2021 | 8:02 PM

Share

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೊವಿಡ್ ಸೋಂಕು ಪ್ರಕರಣಗಳು ಶುಕ್ರವಾರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. 2ನೇ ಅಲೆ ವ್ಯಾಪಕವಾಗಿ ಹರಡಿದ ನಂತರ ಇದೇ ಮೊದಲ ಬಾರಿಗೆ ಸೋಂಕಿತರ ಒಟ್ಟು ಸಂಖ್ಯೆ 9 ಸಾವಿರದ ಗಡಿಯಿಂದ ಕೆಳಗಿಳಿದಿದೆ. ಒಟ್ಟು 8,249 ಜನರಿಗೆ ಸೋಂಕು ದೃಢಪಟ್ಟಿದ್ದು, 159 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇಂದು 14,975 ಜನರು ಗುಣಮುಖರಾಗಿದ್ದು ಪಾಸಿಟಿವಿಟಿ ದರವು ಶೇ 4.86ಕ್ಕೆ ಇಳಿದಿದೆ. ಪಾಸಿಟಿವಿಟಿ ದರ ಶೇ 5ರ ಒಳಗೆ ಇರಬೇಕು ಎಂಬುದು ರಾಜ್ಯದ ಗುರಿಯಾಗಿತ್ತು.

ರಾಜ್ಯದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 27,47,539ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 25,11,105 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ ಒಟ್ಟು 32,644 ಜನರು ಮೃತಪಟ್ಟಿದ್ದಾರೆ. 20,3,769 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 1154 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಒಂದೇ ದಿನ 4,769 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟು 48 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 11,92,886ಕ್ಕೇರಿಕೆಯಾಗಿದೆ. 10,85,862 ಮಂದಿ ಚೇತರಿಸಿಕೊಂಡಿದ್ದಾರೆ. 91760 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಗರದಲ್ಲಿ ಈವರೆಗೆ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 15,263ಕ್ಕೆ ಏರಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು? ರಾಜ್ಯದಲ್ಲಿ ಇಂದು ಒಂದೇ ದಿನ 8,249 ಜನರಿಗೆ ಸೋಂಕು. ಬೆಂಗಳೂರು ನಗರದಲ್ಲಿ ಅತಿಹೆಚ್ಚು ಅಂದರೆ, 1154 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಮೈಸೂರು 817, ಹಾಸನ 733, ತುಮಕೂರು 576, ದಕ್ಷಿಣ ಕನ್ನಡ 506, ಶಿವಮೊಗ್ಗ 429, ಬೆಳಗಾವಿ 436, ಮಂಡ್ಯ 366, ಚಿಕ್ಕಮಗಳೂರು 332, ಉತ್ತರ ಕನ್ನಡ 311, ಬೆಂಗಳೂರು ಗ್ರಾಮಾಂತರ 234, ದಾವಣಗೆರೆ 260, ಧಾರವಾಡ 217, ಉಡುಪಿ 215, ಕೊಡಗು 189, ಬಳ್ಳಾರಿ 189, ಕೋಲಾರ 179, ವಿಜಯಪುರ 174, ಚಿಕ್ಕಬಳ್ಳಾಪುರ 168, ಚಾಮರಾಜನಗರ 162, ಚಿತ್ರದುರ್ಗ 123, ಕೊಪ್ಪಳ 98 ಬಾಗಲಕೋಟೆ 73, ಗದಗ 66, ಹಾವೇರಿ 65, ರಾಯಚೂರು 61, ರಾಮನಗರ 57, ಕಲಬುರಗಿ 29, ಯಾದಗಿರಿ 21, ಬೀದರ್ 9.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು? ರಾಜ್ಯದಲ್ಲಿ ಇಂದು ಒಟ್ಟು 159 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಅತಿಹೆಚ್ಚು ಅಂದರೆ, 48 ಜನರು ಸಾವನ್ನಪ್ಪಿದ್ದಾರೆ. ಮೈಸೂರು 20, ಹಾವೇರಿ 10, ಬಳ್ಳಾರಿ, ಧಾರವಾಡ 9, ಶಿವಮೊಗ್ಗ 7, ಬೆಂಗಳೂರು ಗ್ರಾಮಾಂತರ 6, ಬೆಳಗಾವಿ, ತುಮಕೂರು ತಲಾ 5, ಬಾಗಲಕೋಟೆ, ದಾವಣಗೆರೆ ತಲಾ 4, ದಕ್ಷಿಣ ಕನ್ನಡ, ಗದಗ, ಕೋಲಾರ, ವಿಜಯಪುರ ತಲಾ 3, ಚಿಕ್ಕಬಳ್ಳಾಪುರ, ಕೊಪ್ಪಳ, ಚಿಕ್ಕಮಗಳೂರು, ಮಂಡ್ಯ, ರಾಯಚೂರು, ಹಾಸನ, ಉತ್ತರ ಕನ್ನಡ, ಕೊಡಗು, ರಾಮನಗರ, ಉಡುಪಿ, ಚಾಮರಾಜನಗರ ಜಿಲ್ಲೆಯಲ್ಲಿ ತಲಾ ಇಬ್ಬರು, ಕಲಬುರಗಿ, ಚಿತ್ರದುರ್ಗದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 32,644 ಜನರು ಸಾವನ್ನಪ್ಪಿದ್ದಾರೆ.

(Coronavirus Karnataka Numbers Decreased 8249 Infected 159 Deaths)

ಇದನ್ನೂ ಓದಿ: ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣ ಶೇ 70ರಷ್ಟು ಇಳಿಕೆ: ಲವ್ ಅಗರ್ವಾಲ್

ಇದನ್ನೂ ಓದಿ: ರಾಜ್ಯಗಳ ಬಳಿ 1.17 ಕೋಟಿ ಡೋಸ್ ಕೊವಿಡ್ ಲಸಿಕೆ ಲಭ್ಯ: ಕೇಂದ್ರ ಆರೋಗ್ಯ ಇಲಾಖೆ

Published On - 7:42 pm, Fri, 11 June 21