ಕೊಡಗಿನಲ್ಲಿ ಯುವತಿಯನ್ನ ಮಚ್ಚಿನಿಂದ ಕೊಚ್ಚಿ ಬರ್ಬರ ಕೊಲೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 16, 2023 | 11:44 AM

ವಿರಾಜಪೇಟೆ ತಾಲ್ಲೂಕಿನ ನಾಂಗಲದಲ್ಲಿ ಬುಟ್ಟಿಯಂಡ ಆರತಿ(24) ಎಂಬ ಯುವತಿಯನ್ನ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಕೊಡಗಿನಲ್ಲಿ ಯುವತಿಯನ್ನ ಮಚ್ಚಿನಿಂದ ಕೊಚ್ಚಿ ಬರ್ಬರ ಕೊಲೆ
ಕೊಲೆಯಾದ ಯುವತಿ
Follow us on

ಕೊಡಗು: ವಿರಾಜಪೇಟೆ ತಾಲ್ಲೂಕಿನ ನಾಂಗಲದಲ್ಲಿ ಬುಟ್ಟಿಯಂಡ ಆರತಿ(24) ಎಂಬ ಯುವತಿಯನ್ನ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಅದೇ ಊರಿನ ತಿಮ್ಮಯ್ಯ ಎಂಬಾತನೆ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕೃತ್ಯ ನಡೆದ ಸ್ಥಳದಿಂದ ಕೆಲವೇ ದೂರದಲ್ಲಿರುವ ಕೆರೆಯ ಬಳಿ ಆತನ ಚಪ್ಪಲಿ, ಹೆಲ್ಮೆಟ್ ಪತ್ತೆಯಾಗಿದ್ದು ತಿಮ್ಮಯ್ಯನಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಇನ್ನು ಈ ಕುರಿತು ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಕೆರೆಯ ಬಳಿ ಪತ್ತೆಯಾಗಿರುವ ತಿಮ್ಮಯ್ಯನ ಚಪ್ಪಲಿ, ಮದ್ಯದ ಬಾಟಲಿ ವಿಷದ ಡಬ್ಬಿಯನ್ನ ನೋಡಿದರೆ ಆರೋಪಿ ತಿಮ್ಮಯ್ಯ ವಿಷ ಕುಡಿದು ಕೆರೆಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಡಿಜೇರಿ ಅಗ್ನಿಶಾಮಕ ದಳ ಸಿಬ್ಬಂದಿ ಬಂದಿದ್ದು, ಕೆರೆಯಲ್ಲಿ ತಿಮ್ಮಯ್ಯನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಬೆಂಗಳೂರಲ್ಲಿ ಅಕ್ರಮ ಸಂಬಂಧ ಒಪ್ಪದಿದ್ದಕ್ಕೆ ಮಹಿಳೆಗೆ ಚಾಕು ಇರಿತ

ಬೆಂಗಳೂರು: ಆರ್.ಟಿ.ನಗರದ ಶೇಖ್​​ ಮೆಹಬೂಬ್​ ಎಂಬಾತನಿಂದ ಅಕ್ರಮ ಸಂಬಂಧ ಒಪ್ಪದಿದ್ದಕ್ಕೆ ಹಬೀಬಾತಾಜ್​​(30)ಎಂಬ ಮಹಿಳೆಗೆ ಚಾಕು ಇರಿದಿದ್ದಾನೆ. ಆರು ವರ್ಷದ ಹಿಂದೆ ಹಬೀಬಾ ತಾಜ್​​​ ಪತಿ ಮೃತಪಟ್ಟಿದ್ದರು. ಸದ್ಯ ಇಬ್ಬರು ಮಕ್ಕಳ ಜೊತೆ ಜೀವನ ನಡೆಸುತ್ತಿದ್ದ ಹಬೀಬಾ ತಾಜ್ ಆಟೋ ಚಾಲಕ ಶೇಖ್​​ ಮೆಹಬೂಬ್ ಸ್ನೇಹ ಬೆಳೆಸಿದ್ದಳು. ನಂತರ ಅಟೋ ಚಾಲಕ ಶೇಖ್​​​​ ಮೆಹಬೂಬ್​​ಗೂ ಮದುವೆಯಾಗಿ ಮಕ್ಕಳಿದ್ದಾರೆ ಎಂಬ ವಿಷಯ ತಿಳಿದ ಮೇಲೆ ಹಬೀಬಾ ಶೇಖ್​​​ ಮೆಹಬೂಬ್​​ನಿಂದ ದೂರವಾಗಲು ನಿರ್ಧರಿಸಿದ್ದಳು.

ಇದೇ ವಿಚಾರಕ್ಕೆ ನಿನ್ನೆ ರಾತ್ರಿ 12 ಗಂಟೆಗೆ ಮೆಹಬೂಬ್​, ಹಬೀಬಾ ನಡುವೆ ಗಲಾಟೆ ಶುರುವಾಗಿದೆ. ಗಲಾಟೆ ವೇಳೆ ಶೇಖ್​​ ಮೆಹಬೂಬ್ ಹಬೀಬಾ ತಾಜ್​ಗೆ ಚಾಕು ಇರಿದಿದ್ದಾನೆ. ಗಾಯಾಳು ಹಬೀಬಾ ತಾಜ್​ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆರೋಪಿ ಶೇಖ್​​ ಮೆಹಬೂಬ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ