ಕೊಡಗು ಜಿಲ್ಲೆಯಲ್ಲಿ ಕೋಟ್ಯಂತರ ಮೌಲ್ಯದ ಹರಳು ಕಲ್ಲುಗಳ ಲೂಟಿ; ಅರಣ್ಯ ಇಲಾಖೆ ಸಿಬ್ಬಂದಿಯಿಂದಲೇ ದೋಖಾ, ನಾಗರಿಕರ ಆಕ್ರೋಶ

| Updated By: ಆಯೇಷಾ ಬಾನು

Updated on: Feb 13, 2022 | 11:43 AM

ಕಳೆದ 15 ವರ್ಷಗಳಿಂದ ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ತಣ್ಣಿಮಾನಿ, ಕಡಮಕಲ್ಲು, ಎರಡನೇ ಮೊಣ್ಣಂಗೇರಿ, ಬಿಳೆಗೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂ ಒಡಲನ್ನ ಬಗೆದು ನೂರಾರು ಕೋಟಿ ರೂ ಮೌಲ್ಯದ ಹರಳು ಕಲ್ಲುಗಳನ್ನ ಲೂಟಿ ಮಾಡಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಕೋಟ್ಯಂತರ ಮೌಲ್ಯದ ಹರಳು ಕಲ್ಲುಗಳ ಲೂಟಿ; ಅರಣ್ಯ ಇಲಾಖೆ ಸಿಬ್ಬಂದಿಯಿಂದಲೇ ದೋಖಾ, ನಾಗರಿಕರ ಆಕ್ರೋಶ
ಕೊಡಗು ಜಿಲ್ಲೆಯಲ್ಲಿ ಕೋಟ್ಯಂತರ ಮೌಲ್ಯದ ಹರಳು ಕಲ್ಲುಗಳ ಲೂಟಿ; ಅರಣ್ಯ ಇಲಾಖೆ ಸಿಬ್ಬಂದಿಯಿಂದಲೇ ದೋಖಾ, ನಾಗರಿಕರ ಆಕ್ರೋಶ
Follow us on

ಕೊಡಗು ಜಿಲ್ಲೆಯ ಕಲ್ಲು ಗಣಿಗಾರಿಕೆಯ ಅಕ್ರಮಗಳು ಬಗೆದಷ್ಟು ಆಳವಾಗುತ್ತಿದೆ. ಪ್ರಕರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಹಲವು ಪ್ರಭಾವಿಗಳು ಕೂಡ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ ಕೆಂಪು ಹರಳು ಕಲ್ಲು.. ಕೊಡಗಿನ ಪಟ್ಟಿಘಾಟ ಬೆಟ್ಟ ಸಾಲುಗಳ ಒಡಲಲ್ಲಿ ಹುದುಗಿರೋ ಅತ್ಯಮೂಲ್ಯ ಸಂಪತ್ತು. ಆಭರಣ ತಯಾರಿಕಾ ಉದ್ದಿಮೆಯಲ್ಲಿ ಈ ಹರಳು ಕಲ್ಲು ನೂರಾರು ಕೋಟಿ ಬೆಲೆ ಬಾಳುತ್ತೆ. ಇಂಥಾ ಅಮೂಲ್ಯ ವಸ್ತುವನ್ನೇ ಇದೀಗ ಲೂಟಿ ಮಾಡಲಾಗ್ತಿದೆ.

ಕೋಟ್ಯಂತರ ಮೌಲ್ಯದ ಹರಳು ಕಲ್ಲುಗಳ ಲೂಟಿ
ಕಳೆದ 15 ವರ್ಷಗಳಿಂದ ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ತಣ್ಣಿಮಾನಿ, ಕಡಮಕಲ್ಲು, ಎರಡನೇ ಮೊಣ್ಣಂಗೇರಿ, ಬಿಳೆಗೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂ ಒಡಲನ್ನ ಬಗೆದು ನೂರಾರು ಕೋಟಿ ರೂ ಮೌಲ್ಯದ ಹರಳು ಕಲ್ಲುಗಳನ್ನ ಲೂಟಿ ಮಾಡಲಾಗಿದೆ. ಆದ್ರೆ ಪ್ರಕರಣ ಬಯಲಾಗಿ ಒಂದು ತಿಂಗಳೇ ಕಳೆದ್ರೂ, ಇದುವರೆಗೂ ಏನೂ ಆಗಿಲ್ಲ. ಕೇವಲ ಇಬ್ಬರು ಗಾರ್ಡ್ಗಳನ್ನ ಮಾತ್ರ ಅಮಾನತು ಮಾಡಿ ಇಬ್ಬರು ಚಿಲ್ಲರೆ ದಂಧೆಕೋರರನ್ನ ಅರೆಸ್ಟ್ ಮಾಡಿ ಅರಣ್ಯ ಇಲಾಖೆ ಕೈತೊಳೆದುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸ್ಥಳೀಯ ಶಾಸಕ ಕೆಜಿ ಬೋಪಯ್ಯ, ಪ್ರಕರಣವನ್ನ ಸಿಒಡಿ ತನಿಖೆಗೆ ಒಪ್ಪಿಸಿ ಅಂತಾ ಒತ್ತಾಯಿಸಿದ್ದಾರೆ. ಇನ್ನು ಕೇಸ್ನ ಮುಖ್ಯ ತನಿಖಾಧಿಕಾರಿಯಾಗಿರೋ ಡಿಎಫ್ಒ ಪೂವಯ್ಯರನ್ನ ತನಿಖೆ ಬಗ್ಗೆ ಕೇಳಿದ್ರೆ, ಇಲಾಖೆಯಿಂದ ಸೂಕ್ತ ರೀತಿಯಲ್ಲಿ ಎನ್ಕ್ವೈರಿ ಆಗ್ತಿದೆ.. ಅಧಿಕಾರಿಗಳ ಕಾಲ್ ಡಿಟೇಲ್ಸ್ಗಳನ್ನ ಕಲೆ ಹಾಕಲಾಗಿದ್ದು, ಹಗರಣದಲ್ಲಿ ಭಾಗಿಯಾಗಿರುವವರನ್ನ ಶೀಘ್ರವೇ ಅರೆಸ್ಟ್ ಮಾಡ್ತೇವೆ ಅಂತಿದ್ದಾರೆ.

ಜನ ಸಾಮಾನ್ಯರು ಅರಣ್ಯದಲ್ಲಿ ಒಂದು ಮರ ಕಡಿದ್ರೆ, ಅರಣ್ಯ ಇಲಾಖೆ ಸಿಬ್ಬಂದಿ ಅವ್ರನ್ನ ಹಿಂಸಿಸಿ ಇನ್ನಿಲ್ಲದ ಶಿಕ್ಷೆ ಕೊಡ್ತಾರೆ. ಅದೇ ಅರಣ್ಯ ಇಲಾಖೆ ಸಿಬ್ಬಂದಿಯೇ ತನ್ನ ಹೊಲವನ್ನ ತಾನೇ ಮೇಯ್ದರೆ ಕೇಳುವವರೇ ಇಲ್ಲ. ಕೊಡಗಿನ ಬೆಟ್ಟ ಪ್ರದೇಶಗಳಲ್ಲಿ ಭೀಕರ ಭೂ ಕುಸಿತಗಳು ಸಂಭವಿಸುತ್ತಿವೆ ಅಂತಾ ನಾಗರಿಕರು ಆಕ್ರೋಶ ವ್ಯಕ್ತಡಿಸ್ತಿದ್ದಾರೆ.

ವರದಿ: ಗೋಪಾಲ್ ಸೋಮಯ್ಯ, ಟಿವಿ9 ಕೊಡಗು

ಇದನ್ನೂ ಓದಿ: ನಿರ್ಮಾಣ ಹಂತದ ಸುರಂಗದಲ್ಲಿ ಸಿಲುಕಿಕೊಂಡ 9 ಕಾರ್ಮಿಕರು; ರಕ್ಷಣೆಗೆ ಎಸ್​ಡಿಇಆರ್​ಎಫ್​ ತಂಡ ಹರಸಾಹಸ