Cyber Crime: ಸೈಬರ್​ ವಂಚನೆಯಲ್ಲಿ 2 ಕೋಟಿ ರೂ. ಕಳೆದುಕೊಂಡ ಕಾಫಿ ಬೆಳಗಾರ

| Updated By: ವಿವೇಕ ಬಿರಾದಾರ

Updated on: Jun 01, 2024 | 2:18 PM

ಸೈಬರ್ ವಂಚನೆ ಪ್ರಕರಣಗಳು ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿವೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದ ದೇವಯ್ಯ ಎಂಬುವರು ಸೈಬರ್​ ವಂಚಕರ ಜಾಲಕ್ಕೆ ಸಿಲುಕಿ ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ.

Cyber Crime: ಸೈಬರ್​ ವಂಚನೆಯಲ್ಲಿ 2 ಕೋಟಿ ರೂ. ಕಳೆದುಕೊಂಡ ಕಾಫಿ ಬೆಳಗಾರ
ಸಾಂದರ್ಭಿಕ ಚಿತ್ರ
Follow us on

ಕೊಡಗು, ಜೂ. 01: ಇತ್ತೀಚಿಗೆ ರಾಜ್ಯದಲ್ಲಿ ಸೈಬರ್​ ವಂಚನೆ (Cyber Crime) ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲಂತೂ ಬೆಂಗಳೂರಿನಲ್ಲಿ (Bengaluru) ಸೈಬರ್​ ವಂಚನೆ ಅಧಿಕವಾಗಿದೆ. ಇದೀಗ ಈ ಸೈಬರ್​ ವಂಚನೆ ಜಾಲ ಕೊಡಗು ಜಿಲ್ಲೆಗೂ ವ್ಯಾಪಿಸಿದೆ. ಹೌದು, ಕೊಡಗು (Kodagu) ಜಿಲ್ಲೆ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದ ದೇವಯ್ಯ ಎಂಬುವರು ಸೈಬರ್​ ವಂಚನೆ ಜಾಲದಲ್ಲಿ ಸಿಲುಕಿ ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ.

ಕರಡಿಗೋಡು ಗ್ರಾಮದ ದೇವಯ್ಯ ದೇವಯ್ಯ (70) ಅವರಿಗೆ ವಂಚಕರು ಕರೆ ಮಾಡಿ ತಾವು ಫೆಡೆಕ್ಸ್ ಕೊರಿಯರ್ ಸಂಸ್ಥೆಯಿಂದ ಕರೆ ಮಾಡುತ್ತಿರುವುದು ಎಂದು ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ನಿಮ್ಮ ಹೆಸರಿಗೆ ಡ್ರಗ್ಸ್ ಬಂದಿದೆ ಎಂದಿದ್ದಾರೆ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಸಂಕಷ್ಟವಾಗಲಿದೆ ಎಂದಿದ್ದಾರೆ. ವಂಚಕರ ಮಾತಿಗೆ ದೇವಯ್ಯ ಅವರು ಬೆದರಿಸಿದ್ದಾರೆ.

ಇದನ್ನೂ ಓದಿ: ಆನ್​ಲೈನ್ ವಂಚನೆಯಿಂದ ಬರೋಬ್ಬರಿ 1.60 ಕೋಟಿ ರೂ. ಕಳೆದುಕೊಂಡ ಮಂಗಳೂರಿನ ವ್ಯಕ್ತಿ

ಬಳಿಕ ವಂಚಕರು ತಮ್ಮ ಖಾತೆಗೆ ಎರಡು ಹಂತದಲ್ಲಿ ಒಟ್ಟು 2.20 ಕೋಟಿ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಬಳಿಕ ದೇವಯ್ಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇದೀಗ ದೇವಯ್ಯ ಮಡಿಕೇರಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ