ಮಡಿಕೇರಿ: ಕೊಡಗಿನಲ್ಲಿ ಹುಲಿ ಸೆರೆ ಕಾರ್ಯಾಚರಣೆ ಯಶಸ್ವಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ನಿನ್ನೆಯಷ್ಟೇ ಹುಲಿ ದಾಳಿಗೆ 9 ಆಡುಗಳು ಬಲಿಯಾಗಿದ್ದವು. ಕೊಡಗಿನ ವಿರಾಜಪೇಟೆ ತಾಲೂಕಿನ ನಾಣಚ್ಚಿ ಗ್ರಾಮದಲ್ಲಿ ಗದ್ದೆ ಬಯಲಿನಲ್ಲಿದ್ದ ಆಡುಗಳನ್ನು ಹುಲಿ ಕೊಂದಿತ್ತು. ಹುಲಿಯ ಚಲನವಲನ ಮೊಬೈಲ್ನಲ್ಲಿ ಸೆರೆಯಾಗಿತ್ತು. ನಿನ್ನೆ 9 ಆಡುಗಳನ್ನು ಕೊಂದಿದ್ದ ಹುಲಿಯನ್ನು ಇಂದು ಸೆರೆ ಹಿಡಿಯಲಾಗಿದೆ. ಪೊನ್ನಂಪೇಟೆ ತಾಲ್ಲೂಕಿನ ನಾಣಚ್ಚಿ ಗ್ರಾಮದಲ್ಲಿ ವ್ಯಾಘ್ರ ಸೆರೆಯಾಗಿದೆ.
ನಿನ್ನೆ ರಾತ್ರಿಯಿಂದ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆದಿತ್ತು. ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು. ಸಾಕಾನೆಗಳ ಮೂಲಕ ಅರವಳಿಕೆ ನೀಡಿ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಅಂದಾಜು 10 ವರ್ಷದ ಹೆಣ್ಣು ಹುಲಿಯನ್ನು ಸೆರೆ ಹಿಡಿಯಲಾಗಿದೆ. ಆ ಹುಲಿಯನ್ನು ಮೈಸೂರು ಮೃಗಾಲಯಕ್ಕೆ ರವಾನೆ ಮಾಡಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿಗೆ ನಿನ್ನೆ 9 ಆಡುಗಳು ಬಲಿಯಾಗಿದ್ದವು. ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿಗೆ 9 ಆಡು ಬಲಿ ಆದ ದುರ್ಘಟನೆ ನಡೆದಿತ್ತು. ಇಲ್ಲಿನ ವಿರಾಜಪೇಟೆ ತಾಲ್ಲೂಕಿನ ನಾಣಚ್ಚಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಗದ್ದೆ ಬಯಲಿನಲ್ಲಿ ಇದ್ದ ಆಡುಗಳನ್ನು ಹುಲಿ ಕೊಂದಿತ್ತು. ಹುಲಿಯ ಚಲನವಲನ ಮೊಬೈಲ್ ನಲ್ಲಿ ಸೆರೆ ಆಗಿತ್ತು. ನಾಣಚ್ಚಿ ಅಂಗನವಾಡಿ ಸಮೀಪವೇ ಕಂಡು ಬಂದ ಹುಲಿಯಿಂದಾಗಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಮನೆಮಾಡಿತ್ತು. ಆ ಹುಲಿಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ನಾಣಚ್ಚಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮೈಸೂರು ಮೃಗಾಲಯಕ್ಕೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: ಸೋಲರಿಯದ ಸರ್ದಾರನಾಗಿ ಟಗರು ಕಾಳಗದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದ ಬೆಟ್ಟದ ಹುಲಿ ಖ್ಯಾತಿಯ ಟಗರು ಇನ್ನಿಲ್ಲ
Karnataka News: ಬರೋಬ್ಬರಿ 200 ಕ್ವಿಂಟಾಲ್ ಗೋವಿನ ಚರ್ಮ ಜಪ್ತಿ, ಹುಲಿ ದಾಳಿಗೆ ಎಂಟು ಆಡು ಬಲಿ