ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯ ಮೇಲೆ ಗುರುವಾರ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ (Anti Corruption Bureau – ACB) ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದಾಗಲೇ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಸಿಂಪಿ ಅವರನ್ನು ವಶಕ್ಕೆ ಪಡೆದುಕೊಂಡಿದೆ. ಶಸ್ತ್ರಚಿಕಿತ್ಸೆಗಾಗಿ ಸೂರ್ಯ ಎಂಬ ರೋಗಿಯಿಂದ ವೈದ್ಯ ಸಿಂಪಿ ₹ 5000 ನೀಡುವಂತೆ ಕೇಳಿದ್ದ. ರೋಗಿಯು ₹ 3000 ಗೂಗಲ್ ಪೇ ಮಾಡಿದ್ದ. ಉಳಿದ ₹ 2000 ನಗದು ನೀಡುವಾಗ ಎಸಿಬಿ ಸಿಬ್ಬಂದಿ ವೈದ್ಯನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರೀತಿಸಿ ಮದುವೆಯಾದ ಜೋಡಿಗೆ ಜೀವಬೆದರಿಕೆ
ಕೊಪ್ಪಳ: ಪ್ರೀತಿಸಿ ಮದುವೆಯಾದ ಜೋಡಿಗೆ ಯುವತಿ ಮನೆಯವರಿಂದ ಜೀವ ಬೆದರಿಕೆ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಪ್ರೇಮಿಗಳು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಸಂಪರ್ಕಿಸಿದ್ದಾರೆ. ಯಲಬುರ್ಗಾ ನಿವಾಸಿಗಳಾದ ವಿದ್ಯಾಶ್ರೀ ಮತ್ತು ಪ್ರಶಾಂತ್ ಕಟ್ಟಿಮನಿ ಪ್ರೀತಿಸಿ ಮದುವೆಯಾಗಿದ್ದ ಜೋಡಿಗಳು. ಇವರ ಮದುವೆ 2013ರಲ್ಲಿಯೇ ನಡೆದಿದೆ. ಮದುವೆಗೆ ಮೊದಲಿನಿಂದಲೂ ಯುವತಿಯ ಕುಟುಂಬ ವಿರೋಧ ವ್ಯಕ್ತಪಡಿಸುತ್ತಿತ್ತು. ಯುವಕ ಪ್ರಶಾಂತ ಪರಿಶಿಷ್ಟ ಜಾತಿಯವ, ಯುವತಿ ವಿದ್ಯಾಶ್ರೀ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಮೊದಲ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದಾಗ ಪ್ರಶಾಂತ್ ಜೊತೆ ವಿದ್ಯಾಶ್ರೀ ಅವರ ಮದುವೆಯಾಗಿತ್ತು. ಮದುವೆಗೆ ಕಳೆದ 8 ವರ್ಷದಿಂದ ಮನೆಯವರನ್ನು ಒಪ್ಪಿಸಲು ವಿದ್ಯಾಶ್ರೀ ಯತ್ನಿಸುತ್ತಿದ್ದರು. ಮನೆಯವರನ್ನು ಒಪ್ಪಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 3 ದಿನಗಳ ಹಿಂದೆ ಪ್ರೀತಿಸಿದ ಯುವಕನ ಮನೆಗೆ ಯುವತಿ ಬಂದಿದ್ದಾಳೆ.
ಫ್ಲಾಟ್ಗಳಲ್ಲಿ ಕಳ್ಳತನ ಮಾಡುತ್ತಿದ್ದ ಐವರ ಬಂಧನ
ಬೆಂಗಳೂರು: ಹೆಣ್ಣೂರು ಸುತ್ತಮುತ್ತಲ ಫ್ಲಾಟ್ಗಳಲ್ಲಿ ಕಳ್ಳತನ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ಕರಣ್ ಬಿಸ್ವಾ, ಹಿಕಮತ್ ಶಾಹಿ, ಬಿ.ಕೆ.ರಾಜು ಅಲಿಯಾಸ್ ಚಾಮ್ಡಿ, ಜೀವನ್, ಗೋರಕ್ ಬಂಧಿತರು. ಮುಂಬೈನಿಂದ ಕಳ್ಳರನ್ನು ಕರೆಸಿ ಕಳ್ಳತನ ಮಾಡಿಸುತ್ತಿದ್ದರು. ಬಂಧಿತರಿಂದ ₹ 9.3 ಲಕ್ಷ ನಗದು, ₹ 25 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಯಾರೂ ಇಲ್ಲದ ಫ್ಲ್ಯಾಟ್ಗಳನ್ನು ಗುರುತಿಸುತ್ತಿದ್ದ ಕಳ್ಳರು ಕಳ್ಳತನದ ಪ್ಲಾನ್ ಮಾಡಿಕೊಳ್ಳುತ್ತಿದ್ದರು. ಬೆಂಗಳೂರಿನ ಹೆಣ್ಣೂರು ಸುತ್ತಮುತ್ತ ಕಳ್ಳತನ ಸಕ್ರಿಯರಾಗಿದ್ದರು. ಸೆಕ್ಯುರಿಟಿ ಕೆಲಸ ಮಾಡ್ತಿದ್ದ ಕರಣ್ ಬಿಸ್ವಾ ಪ್ರಮುಖ ಅರೋಪಿ. ಹಿಕಮತ್ ಶಾಹಿ, ಬಿ.ಕೆ.ರಾಜು, ಜೀವನ್ ಮತ್ತು ಗೋರಕ್ ಕಾಲು ಬಂಧಿತರು. ಬೀಗ ಹಾಕಿರುವ ಫ್ಲಾಟ್ಗಳನ್ನು ಗುರುತಿಸಿ ಮುಂಬೈನಲ್ಲಿರುವ ತನ್ನ ಗುಂಪಿಗೆ ಸೆಕ್ಯುರಿಟಿ ಗಾರ್ಡ್ ಮಾಹಿತಿ ನೀಡುತ್ತಿದ್ದ. ಕಳ್ಳತನ ಮಾಡಿ ನಾಲ್ವರು ಅರೋಪಿಗಳು ಪರಾರಿಯಾದರೂ ಸೆಕ್ಯುರಿಟಿ ಮಾತ್ರ ಅಲ್ಲಿಯೇ ಇರುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಯುರಿಟಿ ಗಾರ್ಡ್ ಸೇರಿ ಐವರನ್ನು ಬಂಧಿಸಿರುವ ಹೆಣ್ಣೂರು ಪೊಲೀಸರು ಅರೋಪಿಗಳಿಂದ ₹ 9.3 ಲಕ್ಷ ನಗದು ಹಾಗೂ ₹ 75 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಅಪ್ಪನ ಬರ್ತ್ಡೇ
ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಬಾಲಕೃಷ್ಣ ತಮ್ಮ ತಂದೆಯ ಜನ್ಮದಿನ ಆಚರಿಸಿದ್ದಾರೆ. ಪತ್ನಿ, ಮಕ್ಕಳ ಜತೆ ತಂದೆಯ ಜನ್ಮದಿನ ಆಚರಿಸಿರುವ ಇನ್ಸ್ಪೆಕ್ಟರ್ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಚೆಸ್ಕಾಂ ನೌಕರ ಸಾವು
ಲೈನ್ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ನೌಕರ ಮೃತಪಟ್ಟಿರುವ ಘಟನೆ ವಳೆಗೆರೆಹಳ್ಳಿಯಲ್ಲಿ ನಡೆದಿದೆ. ಚೆಸ್ಕಾಂ ನೌಕರ ಕಿರಣ್ (26) ಮೃತರು. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವಳೆಗೆರೆಹಳ್ಳಿ ನಿವಾಸಿ ಕಿರಣ್, ಎರಡು ವರ್ಷದಿಂದ ಚೆಸ್ಕಾಂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.
ರಾಮನಗರ: ಮೂರು ವರ್ಷಗಳಲ್ಲಿ 598 ಪ್ರಕರಣ ಪತ್ತೆ
ರಾಮನಗರ: ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಮೂರು ವರ್ಷಗಳಿಂದ ವಿವಿಧೆಡೆ ದಾಖಲಾಗಿದ್ದ 598 ಪ್ರಕರಣನ್ನು ಭೇದಿಸಿದ್ದಾರೆ. ದರೋಡೆ, ಸುಲಿಗೆ, ದರೋಡೆ ಯತ್ನ, ಸರಗಳ್ಳತನ ಸೇರಿದಂತೆ ಹಲವು ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ₹ 21 ಕೋಟಿ ಮೌಲ್ಯದ 15.301 ಕೆಜಿ ಚಿನ್ನಾಭರಣ, 18 ಕೆಜಿ 446 ಗ್ರಾಂ ಬೆಳ್ಳಿಯ ವಸ್ತಗಳು, 432 ದ್ವಿಚಕ್ರ ವಾಹನ, 258 ಮೊಬೈಲ್, 28 ಟಿವಿ, ಲ್ಯಾಪ್‌ಟಾಪ್, ₹1.64 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ನಡೆದ ಪ್ರಾಪರ್ಟಿ ಪರೇಡ್ ಕಾರ್ಯಕ್ರಮದಲ್ಲಿ ಸಂಬಂಧಿಸಿದವರಿಗೆ ವಸ್ತುಗಳನ್ನು ಐಜಿಪಿ ಹಸ್ತಾಂತರಿಸಿದರು.
ಇದನ್ನೂ ಓದಿ: Crime News: ಆಲ್ಕೋಹಾಲ್ ತರಲಿಲ್ಲವೆಂದು ಹೊಡೆದ ಮಗನನ್ನೇ ಕೊಂದ ತಾಯಿ!
ಇದನ್ನೂ ಓದಿ: Mysuru Crime: ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನಿಗೆ ಚಾಕು ಇರಿದ ಅಪರಿಚಿತ ವ್ಯಕ್ತಿ
Published On - 3:48 pm, Thu, 9 December 21