Crime News: ಆಲ್ಕೋಹಾಲ್ ತರಲಿಲ್ಲವೆಂದು ಹೊಡೆದ ಮಗನನ್ನೇ ಕೊಂದ ತಾಯಿ!

Murder News Today: ಮೊದಲು ಪ್ರವೀಣ್ ತನ್ನ ತಾಯಿ ಆಲ್ಕೋಹಾಲ್ ಬಾಟಲ್ ತರಲಿಲ್ಲ ಎಂದು ಆಕೆಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಆಕೆ ಸುತ್ತಿಗೆಯಿಂದ ಮಗನ ತಲೆಯನ್ನು ಒಡೆದಿದ್ದಾಳೆ.

Crime News: ಆಲ್ಕೋಹಾಲ್ ತರಲಿಲ್ಲವೆಂದು ಹೊಡೆದ ಮಗನನ್ನೇ ಕೊಂದ ತಾಯಿ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 08, 2021 | 6:49 PM

ಮುಂಬೈ: ತನ್ನ ತಾಯಿ ಮನೆಗೆ ಬರುವಾಗ ಆಲ್ಕೋಹಾಲ್ ತರಲಿಲ್ಲ ಎಂಬ ಕಾರಣಕ್ಕೆ ಹೊಡೆದಿದ್ದಕ್ಕೆ ಕೋಪಗೊಂಡ ತಾಯಿ ತನ್ನ ಮಗನನ್ನೇ ಕೊಲೆ ಮಾಡಿದ್ದಾಳೆ. ಮುಂಬೈನ ಚೆಂಬೂರ್ ಪ್ರದೇಶದಲ್ಲಿ 52 ವರ್ಷದ ಮಹಿಳೆಯೇ ತನ್ನ ಮಗನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ತನಗೆ ದೊಣ್ಣೆಯಿಂದ ಹೊಡೆದಿದ್ದಕ್ಕೆ ಕೋಪಗೊಂಡ ತಾಯಿ ಮಗನನ್ನು ಕೊಂದ ಆರೋಪದ ಮೇಲೆ ನಿನ್ನೆ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನ ವಶಿನಕಾ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಲೂರ್ತ್‌ಮೇರಿ ಮುರ್ಗೆಶನ್ ಮತ್ತು ಆಕೆಯ ಮಗ ಪ್ರವೀಣ್ ನಡುವೆ ಜಗಳ ನಡೆದ ನಂತರ ಕೊಲೆ ಮಾಡಲಾಗಿದೆ ಎಂದು ಆರ್‌ಸಿಎಫ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೊದಲು ಪ್ರವೀಣ್ ತನ್ನ ತಾಯಿ ಆಲ್ಕೋಹಾಲ್ ಬಾಟಲ್ ತರಲಿಲ್ಲ ಎಂದು ಆಕೆಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಆಕೆ ಸುತ್ತಿಗೆಯಿಂದ ಮಗನ ತಲೆಯನ್ನು ಒಡೆದಿದ್ದಾಳೆ. ನಂತರ ಅವಳು ಫ್ಲಾಟ್‌ಗೆ ಬೀಗ ಹಾಕಿ ತನ್ನ ಸ್ನೇಹಿತನಿಗೆ ಫೋನ್ ಮಾಡಿದ್ದಾಳೆ. ಫೋನ್​ನಲ್ಲಿ ತನ್ನ ಮಗ ಕಾಣೆಯಾಗಿದ್ದಾನೆ, ನಾಳೆ ಆತನನ್ನು ಹುಡುಕಬೇಕು ಎಂದು ಹೇಳಿದ್ದಾಳೆ. ನಂತರ ತನ್ನ ಗಂಡನಿಗೂ ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ಆಕೆ ಹೇಳಿದಳು. ಆದರೆ, ಆತ ತನ್ನ ಹೆಂಡತಿಯ ಮಾತನ್ನು ನಂಬಲಿಲ್ಲ.

ಸೋಮವಾರ ಮಧ್ಯಾಹ್ನ ಆ ದಂಪತಿಗಳು ತಮ್ಮ ಫ್ಲಾಟ್​ಗೆ ಬಂದಾಗ ಅವರ ಮಗ ಪ್ರವೀಣನ ದೇಹವು ರಕ್ತದ ಮಡುವಿನಲ್ಲಿ ಬಿದ್ದಿತ್ತು. ನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ವಿಚಾರಣೆ ಬಳಿಕ ಮೃತ ಯುವಕನ ತಾಯಿಯನ್ನು ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Crime News: ಗಂಡ ಬ್ಲೌಸ್ ಹೊಲಿದಿದ್ದು ಸರಿಯಾಗಿಲ್ಲವೆಂದು ಹೆಂಡತಿ ಆತ್ಮಹತ್ಯೆ!

Crime News: 2.5 ಲಕ್ಷಕ್ಕೆ ಗಂಡು ಮಗುವನ್ನು ಮಾರಿದ ತಾಯಿ ಮರುಕ್ಷಣವೇ ಹಣ ಕಳೆದುಕೊಂಡ ಕತೆಯಿದು!