AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಗಂಡ ಬ್ಲೌಸ್ ಹೊಲಿದಿದ್ದು ಸರಿಯಾಗಿಲ್ಲವೆಂದು ಹೆಂಡತಿ ಆತ್ಮಹತ್ಯೆ!

35 ವರ್ಷದ ವಿಜಯಲಕ್ಷ್ಮಿ ಎಂಬ ಮಹಿಳೆಗೆ ತನ್ನ ಗಂಡ ತನಗಾಗಿ ಹೊಲಿದು ತಂದ ಬ್ಲೌಸ್​ ಡಿಸೈನ್ ಇಷ್ಟವಾಗಲಿಲ್ಲ. ಇದರಿಂದ ಕೋಪಗೊಂಡ ಆಕೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ.

Crime News: ಗಂಡ ಬ್ಲೌಸ್ ಹೊಲಿದಿದ್ದು ಸರಿಯಾಗಿಲ್ಲವೆಂದು ಹೆಂಡತಿ ಆತ್ಮಹತ್ಯೆ!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Dec 06, 2021 | 8:42 PM

Share

ಹೈದರಾಬಾದ್: ಗಂಡ-ಹೆಂಡತಿ ನಡುವೆ ಜಗಳಗಳು ಸಾಮಾನ್ಯ. ಆದರೆ, ಕೆಲವು ಬಾರಿ ಸಣ್ಣಪುಟ್ಟ ಜಗಳಗಳೇ ಪ್ರಾಣಕ್ಕೆ ಹಾನಿ ಉಂಟುಮಾಡಿದ ಘಟನೆಗಳೂ ನಡೆದಿವೆ. ಹೈದರಾಬಾದ್‌ನಲ್ಲಿ ಟೈಲರ್ ಆಗಿರುವ ತನ್ನ ಗಂಡನೊಂದಿಗೆ ಬ್ಲೌಸ್​ ವಿಚಾರದಲ್ಲಿ ಜಗಳ ನಡೆದಿದ್ದು, ಬೇಸತ್ತ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 35 ವರ್ಷದ ವಿಜಯಲಕ್ಷ್ಮಿ ಎಂಬ ಮಹಿಳೆಗೆ ತನ್ನ ಗಂಡ ತನಗಾಗಿ ಹೊಲಿದು ತಂದ ಬ್ಲೌಸ್​ ಡಿಸೈನ್ ಇಷ್ಟವಾಗಲಿಲ್ಲ. ಇದರಿಂದ ಕೋಪಗೊಂಡ ಆಕೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ.

ಆ ಮಹಿಳೆ ತನ್ನ ಪತಿ ಶ್ರೀನಿವಾಸ್ ಜೊತೆ ಜಗಳವಾಡಿದ್ದಳು. ಇದರಿಂದ ಬೇಸತ್ತ ಶ್ರೀನಿವಾಸ್ ಮನೆಯಿಂದ ಹೊರಗೆ ಹೋಗಿದ್ದರು. ಗಂಡನ ಜೊತೆ ಜಗಳವಾಡಿದ ನಂತರ ವಿಜಯಲಕ್ಷ್ಮಿ ತನ್ನ ರೂಮಿಗೆ ಬೀಗ ಹಾಕಿ ಮಲಗಿದ್ದಳು. ನಂತರ, ಆಕೆಯ ಮಕ್ಕಳು ಶಾಲೆಯಿಂದ ಮನೆಗೆ ಹಿಂದಿರುಗಿದಾಗ, ಬೆಡ್ ರೂಮಿನ ಬಾಗಿಲಿಗೆ ಬೀಗ ಹಾಕಿರುವುದನ್ನು ಕಂಡು ಅದನ್ನು ತೆಗೆಯಲು ಪ್ರಯತ್ನಿಸಿದರು. ಆದರೆ, ಯಾವ ಪ್ರತಿಕ್ರಿಯೆಯೂ ಬಾರದ ಕಾರಣ ಆ ಮಕ್ಕಳು ಅಪ್ಪನಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಬಳಿಕ ಆ ಮಹಿಳೆಯ ಗಂಡ ಶ್ರೀನಿವಾಸ್ ಮನೆಗೆ ಹಿಂತಿರುಗಿ ರೂಮಿನ ಬಾಗಿಲು ಒಡೆದಾಗ ವಿಜಯಲಕ್ಷ್ಮೀ ನೆಲದ ಮೇಲೆ ಬಿದ್ದಿರುವುದು ಕಾಣಿಸಿತು.

ಹೈದರಾಬಾದ್​ನ ಅಂಬರ್‌ಪೇಟ್ ಪ್ರದೇಶದ ಗೋಲ್ನಾಕ ತಿರುಮಲ ನಗರದಲ್ಲಿ ದಂಪತಿಗಳು ಒಟ್ಟಿಗೆ ವಾಸಿಸುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು. ಗಂಡ ತನಗೆ ಚೆನ್ನಾಗಿರುವ ಡಿಸೈನ್​ನ ಬ್ಲೌಸ್​ ಹೊಲಿದು ಕೊಟ್ಟಿಲ್ಲ ಎಂಬ ಕಾರಣಕ್ಕೆ ಜಗಳವಾಡಿದ ಹೆಂಡತಿ ತನ್ನ ರೂಮಿನಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Viral Video: ಕುಕ್ಕರ್​ನಲ್ಲಿ ಕಾಫಿ ಮಾಡೋದನ್ನು ನೋಡಿದ್ದೀರಾ?; ಬೀದಿ ವ್ಯಾಪಾರಿಯ ವಿಡಿಯೋ ವೈರಲ್

ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆಗೆ ಯತ್ನಿಸಿದ ಪತ್ನಿ, ಪತ್ನಿ-ಪ್ರಿಯಕರ ಅರೆಸ್ಟ್

Published On - 8:40 pm, Mon, 6 December 21

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ