ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ಹರಿದು ಬೈಕ್ ಸವಾರ ಸಾವು

ಚಿತ್ರದುರ್ಗದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ 28 ವರ್ಷದ ವ್ಯಕ್ತಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮೊಹಮ್ಮದ್ ಅಜರ್(28) ಹತ್ಯೆಗೊಳಗಾದ ವ್ಯಕ್ತಿ. ಸಾಲದ ಹಣ ಹಿಂತಿರುಗಿಸುವುದಾಗಿ ಹೇಳಿ ಕರೆಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ಹರಿದು ಬೈಕ್ ಸವಾರ ಸಾವು
ಸಾಂಕೇತಿಕ ಚಿತ್ರ

ಬೆಂಗಳೂರು: ವಾಟರ್ ಟ್ಯಾಂಕರ್ ಹರಿದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ 27ನೇ ಮುಖ್ಯರಸ್ತೆಯಲ್ಲಿ ಸಂಭವಿಸಿದೆ. ವಾಟರ್ ಟ್ಯಾಂಕ್ ಪಕ್ಕದಲ್ಲೇ ಬೈಕ್ ಸವಾರ ತೆರಳುತ್ತಿದ್ದ. ಈ ವೇಳೆ ಟ್ಯಾಂಕರ್ ಚಾಲಕ ದಿಢೀರ್ ಎಡಕ್ಕೆ ತಿರುಗಿಸಿದ್ದಾನೆ. ಟ್ಯಾಂಕರ್ ತಾಗಿ ಬೈಕ್ ಸವಾರ ಫುಟ್​ಬಾತ್​ಗೆ ಮೇಲೆ ಬಿದ್ದಿದ್ದಾನೆ. ಬ್ಯಾಲೆನ್ಸ್ ತಪ್ಪಿ ಬಿದ್ದ ವ್ಯಕ್ತಿ ತಲೆ ಮೇಲೆ ಟ್ಯಾಂಕರ್ ಚಕ್ರ ಹರಿದು ಸಾವನ್ನಪ್ಪಿದ್ದಾನೆ.

ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಕೊಲೆ ಚಿತ್ರದುರ್ಗದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ 28 ವರ್ಷದ ವ್ಯಕ್ತಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮೊಹಮ್ಮದ್ ಅಜರ್(28) ಹತ್ಯೆಗೊಳಗಾದ ವ್ಯಕ್ತಿ. ಸಾಲದ ಹಣ ಹಿಂತಿರುಗಿಸುವುದಾಗಿ ಹೇಳಿ ಕರೆಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬಾಲಕಿಯರ ಪದವಿ ಪೂರ್ವ ಕಾಲೇಜು ಬಳಿ ಕೊಲೆ ನಡೆದಿದ್ದು, ಮುಬಾರಕ್, ಬಾಬು, ಪ್ರದೀಪ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.

ಆಟೋ ಚಾಲಕನ ಬರ್ಬರ ಕೊಲೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಿಹಳ್ಳಿ ಬಳಿ ಆಟೋ ಚಾಲಕನ ಬರ್ಬರ ಕೊಲೆಯಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಗಜೇಂದ್ರ(25) ಎಂಬಾತ ಹತ್ಯೆಯಾಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಕುಂಬಾರಹಳ್ಳಿಯ ಗಜೇಂದ್ರನ ಆಟೋ ತಡೆದ ದುಷ್ಕರ್ಮಿಗಳು ಅಟ್ಟಾಡಿಸಿ ಕೊಲೆಗೈದಿದ್ದಾರೆ. ಬೆಂಗಳೂರಿನಿಂದ ಮೈಸೂರು ಕಡೆ ತರಕಾರಿ ತೆಗೆದುಕೊಂಡು ಹೋಗುತಿದ್ದಾಗ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಡ್ರಗ್ಸ್ ಪೆಡ್ಲರ್ಸ್ ಅರೆಸ್ಟ್ ಬೆಂಗಳೂರಿನಲ್ಲಿ ಐವರು ಡ್ರಗ್ಸ್ ಪೆಡ್ಲರ್ಸ್​ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಎಂಡಿಎಂಎ, ಕ್ರಿಸ್ಟಲ್, ಗಾಂಜಾ ಮಾರುತ್ತಿದ್ದರು. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಬಂಧಿತರಿಂದ ಸುಮಾರು 10 ಲಕ್ಷ ರೂ. ಮೌಲ್ಯದ ಡ್ರಗ್ಸ್​ನ ಜಪ್ತಿ ಮಾಡಿದ್ದಾರೆ.

ವಿವಸ್ತ್ರಗೊಳಿಸಿ ನೇಣು ಬಿಗಿದು ಕೊಲೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನಾವದಗಿ ಬಳಿ ವ್ಯಕ್ತಿಯನ್ನ ವಿವಸ್ತ್ರಗೊಳಿಸಿ ನೇಣು ಬಿಗಿದು ಕೊಲೆ ಮಾಡಿದ್ದಾರೆ. ಬೆಳಕೋಟಾ ಗ್ರಾಮದ ಸಿದ್ದಪ್ಪ ಸಿಂಗೆ(35) ಕೊಲೆಯಾಗಿದ್ದಾರೆ. ಸ್ಥಳಕ್ಕೆ ಕಮಲಾಪುರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನವನಿಹಾಳ ಬಳಿ ಇರುವ ಸತ್ಯ ಸಾಯಿ ವಿವಿಯಲ್ಲಿ ಸಿದ್ದಪ್ಪ ಕೆಲಸ ಮಾಡುತ್ತಿದ್ದರು. ನಿನ್ನೆ ಸಂಜೆ ಕೆಲಸ ಮುಗಿಸಿ ಮನೆಗೆ ಹೋಗೊದಾಗಿ ಹೇಳಿ ಕಮಲಾಪುರ ಕಡೆ ಬಂದಿದ್ದರು. ರಾತ್ರಿ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಎಲ್ಲಾ ಕಡೆ ಹುಡುಕಿದ್ದಾರೆ.  ಇಂದು ಬೆಳಗ್ಗೆ ನಾವದಗಿ ಬಳಿ ತೊಗರಿ ಹೊಲದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ

ದುಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಕೋಟಿ ಕೋಟಿ ಹಣ: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲು, ತನಿಖೆ ಕೈಗೆತ್ತಿಕೊಂಡ ಇ.ಡಿ

ಮಾಸ್ಕ್ ದಂಡ ಕೇಳಿದ ಬಿಬಿಎಂಪಿ ಮಾರ್ಷಲ್​ಗೆ ಅವಾಜ್ ಹಾಕಿದ ವ್ಯಕ್ತಿ

Published On - 11:34 am, Tue, 7 December 21

Click on your DTH Provider to Add TV9 Kannada