ಮಾಸ್ಕ್ ದಂಡ ಕೇಳಿದ ಬಿಬಿಎಂಪಿ ಮಾರ್ಷಲ್​ಗೆ ಅವಾಜ್ ಹಾಕಿದ ವ್ಯಕ್ತಿ

ಮಾಸ್ಕ್ ದಂಡ ಕೇಳಿದ ಬಿಬಿಎಂಪಿ ಮಾರ್ಷಲ್​ಗೆ ಅವಾಜ್ ಹಾಕಿದ ವ್ಯಕ್ತಿ

TV9 Web
| Updated By: sandhya thejappa

Updated on:Dec 07, 2021 | 9:34 AM

ದಂಡ ಕೇಳಿದ ಮಾರ್ಷಲ್ ಜತೆ ವ್ಯಕ್ತಿ ಜಗಳ ಮಾಡಿದ್ದಾರೆ. ಏಕೆ ದಂಡ ಪಾವತಿಸಬೇಕೆಂದು ಪ್ರಶ್ನಿಸುತ್ತಾ ಅವಾಜ್ ಹಾಕಿದ್ದಾರೆ. ನೀನೇನು ಆರ್ಮಿನಾ, ಪೊಲೀಸಾ ಅಂತ ಪ್ರಶ್ನಿಸಿದ್ದಾರೆ.

ಸದ್ಯ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಶುರುವಾಗಿದೆ. ಈ ನಡುವೆ ಒಮಿಕ್ರಾನ್ ಕೂಡಾ ರಾಜ್ಯದಲ್ಲಿ ಪತ್ತೆಯಾಗಿದೆ. ಒಮಿಕ್ರಾನ್ ಪತ್ತೆಯಾದ ಬೆನ್ನಲ್ಲೆ ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಅಂತ ಸರ್ಕಾರ ತಿಳಿಸಿದೆ. ಹೀಗಿದ್ದೂ ಜನರು ಮಾತ್ರ ಬೇಜವಾಬ್ದಾರಿ ಮೆರೆಯುತ್ತಿದ್ದಾರೆ. ಬಿಬಿಎಂಪಿ ಮಾರ್ಷಲ್​ಗಳು ಮಾಸ್ಕ್ ಧರಿಸದವರಿಗೆ ದಂಡ ಪ್ರಯೋಗ ಮಾಡುತ್ತಿದ್ದಾರೆ. ದಂಡ ಹಾಕಿದರೆ ಮಾಸ್ಕ್ ಧರಿಸುತ್ತಾರೆ ಎಂಬುವುದು ಮಾರ್ಷಲ್​ಗಳ ಉದ್ದೇಶ. ಆದರೆ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಮಾಸ್ಕ್ ಹಾಕದಿದ್ದಕ್ಕೆ ದಂಡ ಕೇಳಿದಾಗ ಬಿಬಿಎಂಪಿ ಮಾರ್ಷಲ್​ಗಳಿಗೆ ಅವಾಜ್ ಹಾಕಿದ್ದಾರೆ.

ದಂಡ ಕೇಳಿದ ಮಾರ್ಷಲ್ ಜತೆ ವ್ಯಕ್ತಿ ಜಗಳ ಮಾಡಿದ್ದಾರೆ. ಏಕೆ ದಂಡ ಪಾವತಿಸಬೇಕೆಂದು ಪ್ರಶ್ನಿಸುತ್ತಾ ಅವಾಜ್ ಹಾಕಿದ್ದಾರೆ. ನೀನೇನು ಆರ್ಮಿನಾ, ಪೊಲೀಸಾ ಅಂತ ಪ್ರಶ್ನಿಸಿದ್ದಾರೆ. ಫೈನ್ ಕಟ್ಟೋ ಎಂದು ಏಕವಚನದಲ್ಲಿ ಕರೆಯುತ್ತೀಯಾ? ಇಲ್ಲಿಗೆ ಶಾಸಕ ಜಮೀರ್ರನ್ನು ಕರೆಸುತ್ತೇನೆ ಅಂತ ಗದರಿದ್ದಾರೆ. ಈ ಘಟನೆ ಕೆಎಸ್ಆರ್ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಇದನ್ನೂ ಓದಿ

Omicron Variant: ದೇಶದಲ್ಲಿ ಇನ್ನೆರಡು ಒಮಿಕ್ರಾನ್​ ಕೇಸ್​ಗಳು ಪತ್ತೆ; ಒಟ್ಟೂ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆ

Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ಬೆಲೆಯಲ್ಲಿ ಇಳಿಕೆ; ಪ್ರಮುಖ ನಗರಗಳಲ್ಲಿ ಎಷ್ಟಿದೆ ಗೊತ್ತಾ ಆಭರಣಗಳ ಬೆಲೆ?

Published on: Dec 07, 2021 09:17 AM