Omicron Variant: ದೇಶದಲ್ಲಿ ಇನ್ನೆರಡು ಒಮಿಕ್ರಾನ್ ಕೇಸ್ಗಳು ಪತ್ತೆ; ಒಟ್ಟೂ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆ
ದೇಶದಲ್ಲಿ ಮೊದಲ 2 ಒಮಿಕ್ರಾನ್ ಕೇಸ್ಗಳು ಪತ್ತೆಯಾಗಿದ್ದು ಕರ್ನಾಟಕದಲ್ಲಿ. ಅದಾದ ಬಳಿ ಗುಜರಾತ್ನ ಜಾಮ್ನಗರದಲ್ಲಿ ಒಬ್ಬರಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಒಬ್ಬರಿಗೆ ಈ ಸೋಂಕು ತಗುಲಿದ್ದು ದೃಢಪಟ್ಟಿತ್ತು.
ಮುಂಬೈನಲ್ಲಿ ಸೋಮವಾರ ಇನ್ನೆರಡು ಒಮಿಕ್ರಾನ್ ಪ್ರಕರಣ (Omicron Cases)ಗಳು ಪತ್ತೆಯಾಗಿದ್ದು, ಭಾರತದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 10 ಆಗಿದೆ ಎಂದು ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ವೈರಲಾಜಿ ತಿಳಿಸಿದೆ. ಇದೀಗ ಒಮಿಕ್ರಾನ್ ಪತ್ತೆಯಾದ ಇಬ್ಬರೂ ಕೂಡ ಫೈಜರ್ ಕೊವಿಡ್ 19 ಲಸಿಕೆ ಪಡೆದವರಾಗಿದ್ದು, ಸದ್ಯಕ್ಕೆ ಯಾವುದೇ ಲಕ್ಷಣಗಳೂ ಇಲ್ಲ. ಇಬ್ಬರನ್ನೂ ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದರಲ್ಲಿ ಒಬ್ಬಾತನಿಗೆ 37ವರ್ಷವಾಗಿದೆ. ನವೆಂಬರ್ 25ರಂದು ದಕ್ಷಿಣ ಆಫ್ರಿಕಾದ ಜೊಹಾನ್ಸ್ಬರ್ಗ್ನಿಂದ ಮುಂಬೈಗೆ ಆಗಮಿಸಿದ್ದರು. ಹಾಗೇ, ಇನ್ನೊಬ್ಬಾತ 36ವರ್ಷದ ಯುವಕನಾಗಿದ್ದು, ಅದೇ ದಿನ ಯುಎಸ್ನಿಂದ ಆಗಮಿಸಿದ್ದರು. ಇವರಿಬ್ಬರ 5 ಮಂದಿ ಪ್ರಾಥಮಿಕ ಸಂಪರ್ಕಿತರು ಮತ್ತು 315 ದ್ವಿತೀಯ ಹಂತದ ಸಂಪರ್ಕಿತರನ್ನು ಟ್ರೇಸ್ ಮಾಡಿ, ತಪಾಸಣೆಗೆ ಒಳಪಡಿಸಲಾಗಿದೆ. ಹಾಗೇ, ಇನ್ನೂ ಒಂದಷ್ಟು ಮಂದಿಯನ್ನು ಟ್ರೇಸ್ ಮಾಡುವ ಕಾರ್ಯ ನಡೆಯುತ್ತಿದೆ.
ದೇಶದಲ್ಲಿ ಮೊದಲ 2 ಒಮಿಕ್ರಾನ್ ಕೇಸ್ಗಳು ಪತ್ತೆಯಾಗಿದ್ದು ಕರ್ನಾಟಕದಲ್ಲಿ. ಅದಾದ ಬಳಿ ಗುಜರಾತ್ನ ಜಾಮ್ನಗರದಲ್ಲಿ ಒಬ್ಬರಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಒಬ್ಬರಿಗೆ ಈ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಆದರೆ ಭಾನುವಾರ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಏಳು ಮಂದಿಯಲ್ಲಿ ಈ ಸೋಂಕು ದೃಢಪಟ್ಟಿತ್ತು. ಅದಾದ ರಾಜಸ್ಥಾನದ ಜೈಪುರದ ಒಂದೇ ಕುಟುಂಬದ 9 ಮಂದಿಗೂ ಒಮಿಕ್ರಾನ್ ತಗುಲಿದ್ದು ಗೊತ್ತಾಯ್ತು. ಈ ಮಧ್ಯೆ ದೆಹಲಿಯಲ್ಲಿಯೂ ಒಬ್ಬರಿಗೆ ಸೋಂಕು ದೃಢವಾಗಿತ್ತು. ಅವರು ಲೋಕ ನಾಯಕ ಜೈ ಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಒಮಿಕ್ರಾನ್ ಹರಡುವಿಕೆ ಪ್ರಮಾಣ ಜಾಸ್ತಿಯಿರುವ ಹಿನ್ನೆಲೆಯಲ್ಲಿ ರಾಜ್ಯಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲಸಿಕೆ ಅಭಿಯಾನದ ವೇಗವನ್ನೂ ಚುರುಕುಗೊಳಿಸಲಾಗಿದೆ.
ಇದನ್ನೂ ಓದಿ: David Warner: ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಂದ ಡೇವಿಡ್ ವಾರ್ನರ್ಗೆ ವಿಶೇಷ ಬೇಡಿಕೆ: ಈಡೇರಿಸ್ತಾರ ಆಸೀಸ್ ಕ್ರಿಕೆಟಿಗ?