ಶಾಲೆ ಆರಂಭಕ್ಕೆ ಗೈಡ್‌ಲೈನ್ಸ್ ಬಿಡುಗಡೆ ಮಾಡಿದ ಸರ್ಕಾರ; ಭೌತಿಕ ಹಾಜರಾತಿ ಕಡ್ಡಾಯವಿಲ್ಲ
ಶಾಲೆಗೆ ಬರುವುದಕ್ಕೆ ಪೋಷಕರ ಅನುಮತಿ ಪತ್ರ ತರಬೇಕು. ಶಾಲೆಯಲ್ಲಿ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವಿದ್ಯಾರ್ಥಿಗಳಿಗೆ ಭೌತಿಕ ಹಾಜರಾತಿ ಕಡ್ಡಾಯವಿರುವುದಿಲ್ಲ. ಮಗುವಿಗೆ ಕೊರೊನಾ ಲಕ್ಷಣದ ಕುರಿತು ದೃಢಪಡಿಸಬೇಕು.
ಬೆಂಗಳೂರು: ಕೊರೊನಾ 3ನೆಯ ಅಲೆ ಬೀಸುತ್ತಿದ್ದಂತೆ ಎಚ್ಚೆತ್ತಿರುವ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯಾದ್ಯಂತ ಶಾಲೆಗಳ ಆರಂಭಕ್ಕೆ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ. ಪ್ರತಿದಿನ ಬೆಳಗಿನ ಅವಧಿಯಲ್ಲಿ ಭೌತಿಕ ತರಗತಿಗೆ ಅವಕಾಶ ನೀಡಲಾಗಿದೆ. ಶಾಲೆಗೆ ಬರುವುದಕ್ಕೆ ಪೋಷಕರ ಅನುಮತಿ ಪತ್ರ ತರಬೇಕು. ಶಾಲೆಯಲ್ಲಿ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವಿದ್ಯಾರ್ಥಿಗಳಿಗೆ ಭೌತಿಕ ಹಾಜರಾತಿ ಕಡ್ಡಾಯವಿರುವುದಿಲ್ಲ. ಮಗುವಿಗೆ ಕೊರೊನಾ ಲಕ್ಷಣದ ಕುರಿತು ದೃಢಪಡಿಸಬೇಕು. ಪೋಷಕರು ಲಕ್ಷಣ ಇಲ್ಲದಿರುವ ಕುರಿತು ದೃಢಪಡಿಸಬೇಕು ಎಂಬ ಮಾರ್ಗಸೂಚಿಗಳು ಅನಾವರಣಗೊಂಡಿವೆ. ಎಲ್ಲ ವಿದ್ಯಾರ್ಥಿಗಳು ತರಗತಿಗೆ ಬರುವುದು ಕಡ್ಡಾಯವಲ್ಲ. ಆನ್‌ಲೈನ್ / ಪರ್ಯಾಯ ವಿಧಾನದಲ್ಲಿ ಹಾಜರಿಗೂ ಅಸ್ತು ಎನ್ನಲಾಗಿದೆ. ಶಾಲೆಗೆ ಹಾಜರಾಗಲು ಬಯಸದಿರುವವರಿಗೆ ಒತ್ತಾಯವಿಲ್ಲ. ಆದರೆ ಆಯಾಯ ಕಾಲಕ್ಕೆ ಸರ್ಕಾರದ ಸೂಚನೆ ಪಾಲನೆ ಕಡ್ಡಾಯವಿರುತ್ತದೆ.
ಉಳಿದೆರಡು ದಿನ ಶಾಲೆ ಕೊಠಡಿಗಳ ಸ್ವಚ್ಚತೆ: ಶಾಲೆಗಳ ಆರಂಭದಲ್ಲಿ ಪಾಲನೆಯಾಗುತ್ತಿದ್ದ ಗೈಡ್ ಲೈನ್ಸ್ ಟೈಟ್ ರೂಲ್ಸ್ ಪಾಲನೆಯೊಂದಿಗೆ ಮತ್ತೆ ಜಾರಿಗೆ. ಶೇ. 50 ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಅವಕಾಶವಿದೆ. ಅದೂ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರವೇ ಶಾಲೆಗಳು ಒಪನ್ ಆಗಿರುತ್ತವೆ. ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ತರಗತಿಗಳು ನಡೆಯಲಿವೆ. ಇನ್ನುಳಿದ ಎರಡು ದಿನ ಶಾಲೆ ಕೊಠಡಿಗಳ ಸ್ವಚ್ಚತಾ ಕಾರ್ಯ, ಸ್ಯಾನಿಟೈಸೇಶನ್ಗೆ ಅವಕಾಶ ನೀಡಲಾಗಿದೆ. ಮಕ್ಕಳಿಗೆ ಒಂದು ದಿನ ತರಗತಿ, ಒಂದು ದಿನ ರಜೆ ಇರಲಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. 15 ರಿಂದ 20 ಮಕ್ಕಳ ತಂಡ ರಚಿಸಿಕೊಂಡು, ಮಕ್ಕಳಿಗೆ ಪಾಠ ಮಾಡಬೇಕು. ಎರಡು ಡೋಸ್ ಪಡೆದ ಶಿಕ್ಷಕರಿಗೆ ಮಾತ್ರ ಪಾಠ ಮಾಡಲು ಅವಕಾಶ ನೀಡಲಾಗಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರ ಇರಲೇಬೇಕು.
ಜನರ ದಿವ್ಯ ನಿರ್ಲಕ್ಷ್ಯ: ಈ ಮಧ್ಯೆ, ರಾಜ್ಯದಲ್ಲಿ ರೂಪಾಂತರಿ ಒಮಿಕ್ರಾನ್ ಆತಂಕವಿದ್ದರೂ ಎಲ್ಲೆಡೆ ನಿರ್ಲಕ್ಷ್ಯ ಮೇರೆಮೀರಿದೆ. ಮಾರುಕಟ್ಟೆ, ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸರ್ಕಾರದಿಂದ ಆದೇಶ ಹೊರಬಿದ್ದಿದೆ. ಆದರೆ ರಾಜ್ಯ ಸರ್ಕಾರದ ಆದೇಶವನ್ನು ಜನ ಪಾಲಿಸುತ್ತಿಲ್ಲ. ಮಂಗಳೂರು, ಕಲಬುರಗಿ, ಬೆಳಗಾವಿ, ಚಿತ್ರದುರ್ಗ, ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು, ಗದಗ, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವೆಡೆ ಜನರಿಂದ ಕೊವಿಡ್ ಗೈಡ್‌ಲೈನ್ಸ್ ಬ್ರೇಕ್ ಮಾಡಲಾಗುತ್ತಿದೆ.
Bengaluru School Corona Guidelines|ಹೆಚ್ಚಾಗ್ತಿರೋ ಕೊರೊನಾ ಬಗ್ಗೆ ಶಾಲಾ ಸಿಬ್ಬಂದಿ-ಪೋಷಕರು ಹೇಳೋದೇನು?
Published On - 9:38 am, Tue, 7 December 21