ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರದ ಉದ್ಯೋಗಿ ಹೆಣಗಳ ಲೆಕ್ಕ ಹಾಕಿ ಲಂಚ ತೆಗೆದುಕೊಳ್ಳುತ್ತಿದ್ದ!

ನೂರಾರು ಜನರಿಂದ ಹಣ ಪಡೆದು ಸುಬ್ರಮಣಿ ವಂಚಿಸಿರುವ ಆರೋಪವೂ ಕೇಳಿಬಂದಿದೆ. ಇತ್ತ ಡೆತ್ ಸರ್ಟಿಫಿಕೇಟೂ ಇಲ್ಲ, ಅತ್ತ ಹಣವೂ ಇಲ್ಲ ಎಂಬಂತಾಗಿದೆ ಸಂತ್ರಸ್ತರ ಗೋಳು. ಹಣ ಕಳೆದುಕೊಂಡವರು ಸುಬ್ರಮಣಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಎಸಿಬಿಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದರು.

ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರದ ಉದ್ಯೋಗಿ ಹೆಣಗಳ ಲೆಕ್ಕ ಹಾಕಿ ಲಂಚ ತೆಗೆದುಕೊಳ್ಳುತ್ತಿದ್ದ!
ವಿಲ್ಸನ್ ಗಾರ್ಡನ್ ಎಲೆಕ್ಟ್ರಿಕ್ ಚಿತಾಗಾರದ ವರದಿಗಾರ ಹೆಣಗಳ ಲೆಕ್ಕ ಹಾಕಿ ಲಂಚ ತೆಗೆದುಕೊಳ್ಳುತ್ತಿದ್ದ!


ಬೆಂಗಳೂರು: ಇದು ವಿಲ್ಸನ್ ಗಾರ್ಡನ್ ಎಲೆಕ್ಟ್ರಿಕ್ ಚಿತಾಗಾರದ ಚಿಂತಾಜನಕ ಕತೆ. ಅಲ್ಲಿಗೆ ಬರುವ ಹೆಣಗಳ ಲೆಕ್ಕ ಹಾಕುವ ಚಿತಾಗಾರದ ವರದಿಗಾರನ ಕರ್ಮಕಾಂಡ. ವಿಲ್ಸನ್ ಗಾರ್ಡನ್ ವಿದ್ಯುತ್​ ಚಿತಾಗಾರದ ವರದಿಗಾರ ಹೆಣಗಳ ಲೆಕ್ಕ ಹಾಕಿ ಲಂಚ ತೆಗೆದುಕೊಳ್ಳುತ್ತಿದ್ದ ಸತ್ಯ ಬಹಿರಂಗವಾಗಿದೆ! ಸ್ಮಶಾನದ ವರದಿಗಾರ ಸುಬ್ರಮಣಿಯಿಂದ ಹೀಗೆ ಹೆಣಗಳ ರೋಲ್‌ಕಾಲ್ ಮಾಡುತ್ತಿರುವುದರ ವಿರುದ್ಧ ಎಸಿಬಿಯಲ್ಲಿ FIR ದಾಖಲಾಗಿದೆ.

ಸಾಲು ಸಾಲು ಶವಗಳೇ ಇವನ ಬಂಡವಾಳ:
ಕೊವಿಡ್ ವೇಳೆ ಪ್ರತಿನಿತ್ಯ 50ಕ್ಕೂ ಹೆಚ್ಚು ಶವಗಳು ಅಂತ್ಯಸಂಸ್ಕಾರಕ್ಕೆಂದು ವಿಲ್ಸನ್ ಗಾರ್ಡನ್ ವಿದ್ಯುತ್​ ಚಿತಾಗಾರಕ್ಕೆ ಬರುತ್ತಿದ್ದವು. ಚಿತಾಗಾರಕ್ಕೆ ಬರುತ್ತಿದ್ದ ಮೃತದೇಹಗಳು ಆಧಾರದ ಮೇಲೆ ಚಿತಾಗಾರದ ವರದಿಗಾರ, ಆರೋಪಿ ಸುಬ್ರಮಣಿ ಮೃತರ ಡೆತ್ ಸರ್ಟಿಫಿಕೆಟ್ ನೀಡಲು ಲಂಚಕ್ಕೆ ಬೇಡಿಕೆಯೊಡ್ಡುತ್ತಿದ್ದ. ಇದೀಗ ಸುಬ್ರಮಣಿಯಿಂದ 2,000 ರೂಪಾಯಿ ಲಂಚಕ್ಕೆ ಬೇಡಿಕೆ ಆರೋಪ ಕೇಳಿಬಂದಿದೆ. ಆ 2,000 ರೂಪಾಯಿ ನೀಡಿದ್ರೂ ಡೆತ್ ಸರ್ಟಿಫಿಕೆಟ್ ನೀಡದೆ ವಂಚನೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ನೂರಾರು ಜನರಿಂದ ಹಣ ಪಡೆದು ಸುಬ್ರಮಣಿ ವಂಚಿಸಿರುವ ಆರೋಪವೂ ಕೇಳಿಬಂದಿದೆ. ಇತ್ತ ಡೆತ್ ಸರ್ಟಿಫಿಕೇಟೂ ಇಲ್ಲ, ಅತ್ತ ಹಣವೂ ಇಲ್ಲ ಎಂಬಂತಾಗಿದೆ ಸಂತ್ರಸ್ತರ ಗೋಳು. ಹಣ ಕಳೆದುಕೊಂಡವರು ಸುಬ್ರಮಣಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಎಸಿಬಿಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದರು. ಸುಬ್ರಮಣಿ ವಿರುದ್ಧ ಎಫ್ಐಆರ್ ದಾಖಲಿಸಿ, ಎಸಿಬಿ ತನಿಖೆ ನಡೆಸುತ್ತಿದೆ.

Omicron Variant: ಸ್ಮಶಾನದ ವರದಿಗಾರ ಸುಬ್ರಮಣಿಯಿಂದ ಮಹಾ ರೋಲ್​​ಕಾಲ್|Tv9 kannada

Published On - 11:13 am, Tue, 7 December 21

Click on your DTH Provider to Add TV9 Kannada