ಒಮಿಕ್ರಾನ್ ಸೋಂಕಿತ ವಿದೇಶಕ್ಕೆ ಪರಾರಿ ಪ್ರಕರಣ; ಆಫ್ರಿಕಾ ಪ್ರಜೆ, ಶಾಂಗ್ರಿ-ಲಾ ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ ದಾಖಲು
ನವೆಂಬರ್ 20ರಂದು ಬೆಂಗಳೂರಿಗೆ ಬಂದಿದ್ದ ಆಫ್ರಿಕಾ ಪ್ರಜೆಯನ್ನು ಏರ್ಪೋರ್ಟ್ ಟೆಸ್ಟ್ ಮಾಡಿದಾಗ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆ ಶಾಂಗ್ರಿಲಾ ಹೊಟೇಲ್ನಲ್ಲಿ 14 ದಿನಗಳ ಕ್ವಾರಂಟೈನ್ ಮಾಡಲಾಗಿತ್ತು.
ಬೆಂಗಳೂರು: ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕಿದ್ದರೂ ಆಫ್ರಿಕಾ ಪ್ರಜೆ ದೇಶ ತೊರೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಶಾಂಗ್ರಿ-ಲಾ ಆಡಳಿತ ಮಂಡಳಿ ಮತ್ತು ಆಫ್ರಿಕಾ ಪ್ರಜೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ.ನವೀನ್ ದೂರು ಸಲ್ಲಿಸಿದ್ದು, ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 269, 271, 114 ಹಾಗೂ ಕರ್ನಾಟಕ ಎಪಿಡೆಮಿಕ್ ಡಿಸಿಸ್ ಆ್ಯಕ್ಟ್ ಅಡಿ ಎಫ್ಐಆರ್ ದಾಖಲಾಗಿದೆ.
ನವೆಂಬರ್ 20ರಂದು ಬೆಂಗಳೂರಿಗೆ ಬಂದಿದ್ದ ಆಫ್ರಿಕಾ ಪ್ರಜೆಯನ್ನು ಏರ್ಪೋರ್ಟ್ನಲ್ಲಿ ಟೆಸ್ಟ್ ಮಾಡಿದಾಗ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆ ಶಾಂಗ್ರಿಲಾ ಹೊಟೇಲ್ನಲ್ಲಿ 14 ದಿನಗಳ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ನವೆಂಬರ್ 27ಕ್ಕೆ ಹೋಟೆಲ್ ತೊರೆದು ದೇಶ ಬಿಟ್ಟು ಪರಾರಿಯಾಗಿದ್ದಾನೆ. ಆದರೆ ಈ ಬಗ್ಗೆ ಶಾಂಗ್ರಿ-ಲಾ ಹೋಟೆಲ್ ಆಡಳಿತ ಮಂಡಳಿ ಮಾಹಿತಿ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ.
ಬಿಬಿಎಂ ನೋಟಿಸ್ ಒಮಿಕ್ರಾನ್ ಸೋಂಕಿತ ವಿದೇಶಕ್ಕೆ ಹೇಗೆ ಎಸ್ಕೇಪ್ ಆದ? ಹೋಟೆಲ್ ಸಿಬ್ಬಂದಿ ಯಾವ ಕಾರಣಕ್ಕೆ ಹೊರಗೆ ಕಳಿಸಿದರು? ಜಿನೋಮಿಕ್ ಸೀಕ್ವೆನ್ಸ್ಗೂ ಮೊದಲೇ ಹೇಗೆ ಹೊರಗೆ ಬಿಟ್ರಿ? ಯಾವ ಕಾರಣಕ್ಕೆ ಆತನನ್ನು ಕ್ವಾರಂಟೈನ್ ಮಾಡಿಲ್ಲ? ಕಾರಣ ಹೇಳಿ ಸ್ಪಷ್ಟನೆ ನೀಡುವಂತೆ ಬಿಬಿಎಂಪಿ ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಿತ್ತು.
ಇದನ್ನೂ ಓದಿ
ಮ್ಯಾನ್ ಹೋಲ್ನಲ್ಲಿ ಕಾರ್ಮಿಕನನ್ನ ಇಳಿಸಿ ಚರಂಡಿ ಸ್ವಚ್ಛಗೊಳಿಸಲು ಮುಂದಾದ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
ಒಮಿಕ್ರಾನ್ನಿಂದ ಭಾರತದಲ್ಲಿ ಕೊವಿಡ್ 19 ಮೂರನೇ ಅಲೆ ಆತಂಕ; ಐಎಂಎಯಿಂದ ಎಚ್ಚರಿಕೆ
Published On - 11:59 am, Tue, 7 December 21