ಮ್ಯಾನ್ ಹೋಲ್​ನಲ್ಲಿ ಕಾರ್ಮಿಕನನ್ನ ಇಳಿಸಿ ಚರಂಡಿ ಸ್ವಚ್ಛಗೊಳಿಸಲು ಮುಂದಾದ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

ಮ್ಯಾನ್ ಹೋಲ್​ನಲ್ಲಿ ಕಾರ್ಮಿಕನನ್ನ ಇಳಿಸಿ ಚರಂಡಿ ಸ್ವಚ್ಛಗೊಳಿಸಲು ಮುಂದಾದ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
ಮ್ಯಾನ್​ಹೋಲ್​ನಲ್ಲಿ ಇಳಿದ ಕಾರ್ಮಿಕ

ಸ್ಥಳೀಯರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಕೆಯುಐಡಿಎಫ್​ಸಿ ಸಹಾಯಕ ಇಂಜಿನಿಯರ್ ರವೀಂದ್ರ ಕಾರ್ಮಿಕನನ್ನ ಮ್ಯಾನ್ ಹೋಲ್​ನಿಂದ ಮೇಲೆ ಹತ್ತಿಸಿದ್ದಾರೆ. ಕಾರ್ಮಿಕ ಚರಂಡಿ ನೀರಿನಲ್ಲಿ ಮಿಂದೆದ್ದು ಮೇಲೆ ಹತ್ತಿದ್ದಾರೆ.

TV9kannada Web Team

| Edited By: sandhya thejappa

Dec 07, 2021 | 10:33 AM

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ನಗರದಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಅಧಿಕಾರಿಗಳು ಮ್ಯಾನ್ ಹೋಲ್​ನಲ್ಲಿ ಕಾರ್ಮಿಕನನ್ನ ಇಳಿಸಿ ಚರಂಡಿ ಸ್ವಚ್ಛಗೊಳಿಸಲು ಮುಂದಾಗಿದ್ದು, ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮ್ಯಾನ್ ಹೋಲ್ನಲ್ಲಿ ಕಾರ್ಮಿಕನನ್ನ ಇಳಿಸಿ ಕ್ಲೀನ್ ಮಾಡದಂತೆ ನಿಯಮವಿದ್ದರೂ ಅಧಿಕಾರಿಗಳು ಕಾರ್ಮಿಕನನ್ನ ಕೆಳಗೆ ಇಳಿಸಿದ್ದಾರೆ. ಕೆಟ್ಟ ವಾಸನೆಯಿಂದ ಕೂಡಿರುವ ಮ್ಯಾನ್ ಹೋಲ್​ನಲ್ಲಿ ಕಾರ್ಮಿಕನನ್ನು ಕೆಳಗಿಳಿಸಿ ಸ್ವಚ್ಛತೆಗೆ ಮುಂದಾಗಿದ್ದ ಅಧಿಕಾರಿಯನ್ನು ಸ್ಥಳೀಯರು ತರಾಟೆ ತೆಗೆದುಕೊಂಡಿದ್ದಾರೆ.

ಸ್ಥಳೀಯರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಕೆಯುಐಡಿಎಫ್​ಸಿ ಸಹಾಯಕ ಇಂಜಿನಿಯರ್ ರವೀಂದ್ರ ಕಾರ್ಮಿಕನನ್ನ ಮ್ಯಾನ್ ಹೋಲ್ನಿಂದ ಮೇಲೆ ಹತ್ತಿಸಿದ್ದಾರೆ. ಕಾರ್ಮಿಕ ಚರಂಡಿ ನೀರಿನಲ್ಲಿ ಮಿಂದೆದ್ದು ಮೇಲೆ ಹತ್ತಿದ್ದಾರೆ. ಮಾನವೀಯತೆ ಮರೆತು ಕಾರ್ಮಿಕನನ್ನ ಮ್ಯಾನ್ ಹೋಲ್ನಲ್ಲಿ ಇಳಿಸಿದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ರಾಣೆಬೆನ್ನೂರು ನಗರದ ಮೆಡ್ಲೇರಿ ರಸ್ತೆಯಲ್ಲಿ ನಿನ್ನೆ (ಡಿಸೆಂಬರ್ 6) ಮಧ್ಯಾಹ್ನ ನಡೆದ ಘಟನೆಯ ವಿಡಿಯೋ ಟಿವಿ9ಗೆ ಲಭ್ಯವಾಗಿದೆ. ಕಳೆದ ಕೆಲವು ದಿನಗಳಿಂದ ಒಳಚರಂಡಿ ಬ್ಲಾಕ್ ಆಗಿ ಸ್ಥಗಿತಗೊಂಡಿದ್ದರಿಂದ ಮ್ಯಾನ್ ಹೋಲ್​ನಲ್ಲಿ ಕಾರ್ಮಿಕನನ್ನ ಇಂಜಿನಿಯರ್ ಇಳಿಸಿದ್ದಾರೆ.

ಇದನ್ನೂ ಓದಿ

ದುಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಕೋಟಿ ಕೋಟಿ ಹಣ: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲು, ತನಿಖೆ ಕೈಗೆತ್ತಿಕೊಂಡ ಇ.ಡಿ

ಇಂದು ಗೋರಖ್​ಪುರಕ್ಕೆ ಪ್ರಧಾನಿ ಮೋದಿ ಭೇಟಿ; ಯೋಗಿ ಕನಸಿನ ರಸಗೊಬ್ಬರ ಘಟಕ ಸೇರಿ 3 ಬೃಹತ್​​ ಯೋಜನೆಗಳ ಲೋಕಾರ್ಪಣೆ

Follow us on

Related Stories

Most Read Stories

Click on your DTH Provider to Add TV9 Kannada