ಬಿಜೆಪಿ ವೀಕ್ ಆಗಿದೆ ಎಂದು ಬಿಎಸ್ ಯಡಿಯೂರಪ್ಪರಿಂದ ಒಂದು ದೊಡ್ಡ ಸಂದೇಶ; ಡಿಕೆ ಶಿವಕುಮಾರ್ ಹೇಳಿಕೆ
ಅರುಣ್ ಸಿಂಗ್ ಜೆಡಿಎಸ್ ಬಗ್ಗೆ ಬಾಯಿಗೆಬಂದಂತೆ ಮಾತಾಡಿದ್ದರು. ಆದರೆ ನಾವು ಮಾತ್ರ ಬಿಜೆಪಿಯಿಂದ ದೂರವಾಗಿ ಇದ್ದೇವೆ. ಜೆಡಿಎಸ್ ಜೊತೆ ನಾವು ಕೆಲವು ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಬಿಜೆಪಿ ಸದ್ಯಕ್ಕೆ ಮರ್ಯಾದೆಗೆ ಸೀಟ್ ಉಳಿಸಿಕೊಳ್ಳಬೇಕಿದೆ.
ಬೆಂಗಳೂರು: ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ಬಿಎಸ್ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಈ ಮೂಲಕ ಬಿಎಸ್ ಯಡಿಯೂರಪ್ಪರಿಂದ ಭಾರತೀಯ ಜನತಾ ಪಾರ್ಟಿ ವೀಕ್ ಆಗಿದೆ ಎಂಬ ಸಂದೇಶ ರವಾನೆಯಾಗಿದೆ ಅಂತ ಕೆಪಿಸಿಸಿ ಅಧಕ್ಷ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಕೇಂದ್ರ, ರಾಜ್ಯದಲ್ಲಿ ಎರಡೂ ಕಡೆ ಅವರದ್ದೇ ಸರ್ಕಾರವಿದೆ. ಆದರೂ ಅವರ ಅಭ್ಯರ್ಥಿ ಸೋಲುತ್ತಾರೆಂಬ ಭಯ ಬಂದಿದೆ. ಅವರ ಭಯಕ್ಕೆ ಇದಕ್ಕಿಂತಲೂ ಬೇರೆ ಸಾಕ್ಷಿ ಮತ್ತೊಂದಿಲ್ಲ ಅಂತ ಡಿಕೆಶಿ ಹೇಳಿದ್ದಾರೆ.
ಅರುಣ್ ಸಿಂಗ್ ಜೆಡಿಎಸ್ ಬಗ್ಗೆ ಬಾಯಿಗೆಬಂದಂತೆ ಮಾತಾಡಿದ್ದರು. ಆದರೆ ನಾವು ಮಾತ್ರ ಬಿಜೆಪಿಯಿಂದ ದೂರವಾಗಿ ಇದ್ದೇವೆ. ಜೆಡಿಎಸ್ ಜೊತೆ ನಾವು ಕೆಲವು ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಬಿಜೆಪಿ ಸದ್ಯಕ್ಕೆ ಮರ್ಯಾದೆಗೆ ಸೀಟ್ ಉಳಿಸಿಕೊಳ್ಳಬೇಕಿದೆ. ಕೋಲಾರದಲ್ಲಿ ಮನೆ ಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ ಅಂತ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟರು.
ಡಿಕೆ ಶಿವಕುಮಾರ್ ವಿರುದ್ಧ ಸಿಟಿ ರವಿ ವಾಗ್ದಾಳಿ ಕಾಂಗ್ರೆಸ್ನಲ್ಲಿ ಇದ್ದಾಗ ಅಕ್ರಮ ಆಸ್ತಿ ಮಾಡಿದ್ರು ಅಂತ ಶಿವಕುಮಾರ್ ಒಪ್ಪಿಕೊಂಡಿದ್ದಾರೆ ಅಂತ ಸಿಟಿ ರವಿ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಅವರು ಬಿಜೆಪಿ ಸೇರಲಿಲ್ಲ ಅಂತ ಚಾರ್ಜ್ ಶೀಟ್ ಆಗಿಲ್ಲ. ಅಕ್ರಮ ಆಸ್ತಿ ಸಂಬಂಧಿಸಿದಂತೆ ಚಾರ್ಜ್ ಶೀಟ್ ಆಗಿದೆ. ನಾಯಕತ್ವಕ್ಕಾಗಿ ಕಾಂಗ್ರೆಸ್ನಲ್ಲಿ ಅಂತರ್ಯುದ್ದ ಆಗುತ್ತಿದೆ. ವಿಚಾರವನ್ನ ವಿಷಯಾಂತರ ಮಾಡಲು ಈ ರೀತಿ ಹೇಳಿಕೆ ನೀಡಿದ್ದಾರೆ. ಅವರ ಪಾಲಿಟಿಕ್ಸ್ ಬೇರೆ, ಅವರ ನಾಯಕತ್ವವೇ ಬೇರೆ. ಗೂಂಡಾಗಿರಿ ಮಾಡುವುದೇ ಡಿಕೆ ಶಿವಕುಮಾರ್ ಸಂಸ್ಕೃತಿ ಅಂತ ರವಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ
ಮುಂದಿನ ಕೊರೊನಾ ರೂಪಾಂತರಿ ವೈರಸ್ ಹೆಚ್ಚು ಮಾರಕ, ಸಾಂಕ್ರಾಮಿಕವಾಗಿರಲಿದೆ; ಆಕ್ಸ್ಫರ್ಡ್ ವಿಜ್ಞಾನಿ ಎಚ್ಚರಿಕೆ