17 ಬಾಲಕಿಯರಿಗೆ ಮಾದಕ ದ್ರವ್ಯ ಕೊಟ್ಟು ಕಿರುಕುಳ; ಮಾಡಿದ್ದ ಕಿಚಡಿ ಎಸೆದ ಶಾಲಾ ವ್ಯವಸ್ಥಾಪಕರು, ತನಿಖೆಗೆ ಆದೇಶಿಸಿದ ಬಿಜೆಪಿ ಶಾಸಕ
ಈ ಘಟನೆ ನಡೆದು 17 ದಿನಗಳೇ ಕಳೆದು ಹೋಗಿವೆ. ಇದು ಸ್ಥಳೀಯ ಬಿಜೆಪಿ ಶಾಸಕ ಪ್ರಮೋದ್ ಉಟ್ವಾಲ್ರ ಗಮನಕ್ಕೆ ಬಂದು, ಅವರು ತನಿಖೆಗೆ ಆದೇಶ ನೀಡಿದ್ದರಿಂದ ಇದೀಗ ಸಾರ್ವಜನಿಕವಾಗಿ ಬೆಳಕಿಗೆ ಬಂದಿದೆ.
ಪ್ರಾಯೋಗಿಕ ಪರೀಕ್ಷೆ (Practical Exams)ನಡೆಸುವ ನೆಪದಲ್ಲಿ 10ನೇ ತರಗತಿಯ 17 ಬಾಲಕಿಯರಿಗೆ ಮಾದಕ ದ್ರವ್ಯ ನೀಡಿ, ಕಿರುಕುಳ ನೀಡಿದ ಆರೋಪದಡಿ ಉತ್ತರಪ್ರದೇಶದ ಮುಜಾಫರ್ನಗರದಲ್ಲಿರುವ ಎರಡು ಶಾಲೆಗಳ ವ್ಯವಸ್ಥಾಪಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಎರಡು ಶಾಲೆಗಳ ವ್ಯವಸ್ಥಾಪಕರು ಪುರ್ಕಾಜಿ ಪಟ್ಟಣದವರಾಗಿದ್ದು, ಭೋಪಾದ 17 ಬಾಲಕಿಯರಿಗೆ ಜಿಜಿಎಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಬಾಲಕಿಯರೊಟ್ಟಿಗೆ ಮಹಿಳಾ ಶಿಕ್ಷಕಿಯರು ಇರಲಿಲ್ಲ. ಈ ವೇಳೆ ವ್ಯವಸ್ಥಾಪಕರಿಬ್ಬರು ಸೇರಿ ವಿದ್ಯಾರ್ಥಿನಿಯರಿಗೆ ಅಮಲೇರುವ ಆಹಾರ ಕೊಟ್ಟಿದ್ದಾರೆ. ನಂತರ ಕಿರುಕುಳ ನೀಡಿದ್ದಾರೆ ಎಂದು ಬಾಲಕಿಯರ ಕುಟುಂಬದವರೂ ಆರೋಪಿಸಿದ್ದಾರೆ. ಪೊಲೀಸರ ಗಮನಕ್ಕೆ ಈ ವಿಚಾರ ಬಂದರೂ ಕೂಡ ಅವರು ಶಾಲಾ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ. ಅದರ ಬದಲು ಶಾಲಾ ವ್ಯವಸ್ಥಾಪಕರ ವಿರುದ್ಧ ರೂಮರ್ಸ್ ಹಬ್ಬಿಸಿದ ಮತ್ತು ಬ್ಲ್ಯಾಕ್ಮೇಲ್ ಮಾಡಿದ ಆರೋಪದಡಿ ಸ್ಥಳೀಯ ಪತ್ರಕರ್ತನೊಬ್ಬನ ವಿರುದ್ಧವೇ ಕೇಸ್ ದಾಖಲಿಸಲು ಮುಂದಾದರು ಎಂದು ವಿದ್ಯಾರ್ಥಿನಿಯರ ಪಾಲಕರು ಆರೋಪಿಸಿದ್ದಾರೆ.
ಅಂದಹಾಗೆ ಈ ಘಟನೆ ನಡೆದು 17 ದಿನಗಳೇ ಕಳೆದು ಹೋಗಿವೆ. ಇದು ಸ್ಥಳೀಯ ಬಿಜೆಪಿ ಶಾಸಕ ಪ್ರಮೋದ್ ಉಟ್ವಾಲ್ರ ಗಮನಕ್ಕೆ ಬಂದು, ಅವರು ತನಿಖೆಗೆ ಆದೇಶ ನೀಡಿದ್ದರಿಂದ ಇದೀಗ ಸಾರ್ವಜನಿಕವಾಗಿ ಬೆಳಕಿಗೆ ಬಂದಿದೆ. ಯಾರಿಗಾದರೂ ಹೇಳಿದರೆ ಪರೀಕ್ಷೆಯಲ್ಲಿ ಫೇಲ್ ಮಾಡುವ ಮತ್ತು ಅವರ ಕುಟುಂಬದವರನ್ನು ಕೊಲ್ಲುವ ಬೆದರಿಕೆಯನ್ನು ವಿದ್ಯಾರ್ಥಿನಿಯರಿಗೆ ಹಾಕಲಾಗಿತ್ತು. ಹೀಗಾಗಿ ಹೆದರಿದ್ದ ವಿದ್ಯಾರ್ಥಿನಿಯರು ಕೆಲವು ದಿನ ಶಾಲೆಗೇ ಹೋಗಲಿಲ್ಲ. ಆಮೇಲೆ ಕುಟುಂಬದವರ ಬಳಿ ನಡೆದ ವಿಷಯವನ್ನು ತಿಳಿಸಿದ್ದಾರೆ. ಹಾಗೇ, ಅಂದು ರಾತ್ರಿ ಊಟಕ್ಕೆ ಕಿಚಡಿ ಮಾಡಲಾಗಿತ್ತು. ಆದರೆ ವ್ಯವಸ್ಥಾಪಕರು ಅದನ್ನು ಬೀಸಾಡಿ, ಬೇರೆ ಆಹಾರ ತಯಾರಿಸಿದರು. ಅದರಲ್ಲಿ ಮಾದಕ ದ್ರವ್ಯ ಇತ್ತು ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.
ಇದನ್ನೂ ಓದಿ: ವಿಚ್ಛೇದನದ ಬಳಿಕ ಕುಗ್ಗಿ ಹೋಗುತ್ತೇನೆ ಎಂದು ಭಾವಿಸಿದ್ದೆ: ಮನದ ಮಾತು ಹಂಚಿಕೊಂಡ ನಟಿ ಸಮಂತಾ ರುತ್ ಪ್ರಭು
Published On - 12:58 pm, Tue, 7 December 21