ಗರ್ಭಿಣಿ ಸಹೋದರಿಯ ಶಿರಚ್ಛೇದ ಮಾಡಿದ ಕತ್ತರಿಸಿದ ತಲೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಆರೋಪಿ
ನಮ್ಮ ಒಪ್ಪಿಗೆಯಿಲ್ಲದೆ ಮದುವೆಯಾದ ಕಾರಣಕ್ಕೆ ನಾವು ತಮ್ಮ ಮಗಳನ್ನು ಕೊಂದಿರುವುದಾಗಿ ಎಂದು ಆರೋಪಿಗಳು ನೆರೆಹೊರೆಯವರ ಹೇಳಿರುವುದಾಗಿ ಪೊಲೀಸರು ಹೇಳಿದ್ದಾರೆ.
ಔರಂಗಬಾದ್: ಮಹಾರಾಷ್ಟ್ರದ (Maharashtra) ಔರಂಗಾಬಾದ್ (Aurangabad )ಜಿಲ್ಲೆಯಲ್ಲಿ ತನ್ನ ಕುಟುಂಬದ ಒಪ್ಪಿಗೆಯಿಲ್ಲದೆ ಮದುವೆಯಾದ ಕಾರಣಕ್ಕೆ 19 ವರ್ಷದ ಗರ್ಭಿಣಿಯನ್ನು ಭಾನುವಾರ ತಾಯಿಯ ಸಹಾಯದಿಂದ ಆಕೆಯ ಸಹೋದರ ಶಿರಚ್ಛೇದ ಮಾಡಿದ ಘಟನೆ ವರದಿಯಾಗಿದೆ. 38 ವರ್ಷದ ತಾಯಿ ಮತ್ತು 18 ವರ್ಷದ ಸಹೋದರ ಸಂತ್ರಸ್ತೆಯ ತಲೆಯನ್ನು ಎಳೆದುಕೊಂಡು ಹೋಗಿ ನೆರೆಹೊರೆಯವರ ಮುಂದೆ ಪ್ರದರ್ಶಿಸಿದರು ಎಂದು ಸುದ್ದಿ ಸಂಸ್ಥೆ ಎಎನ್ ವರದಿ ಮಾಡಿದೆ. ನಮ್ಮ ಒಪ್ಪಿಗೆಯಿಲ್ಲದೆ ಮದುವೆಯಾದ ಕಾರಣಕ್ಕೆ ನಾವು ತಮ್ಮ ಮಗಳನ್ನು ಕೊಂದಿರುವುದಾಗಿ ಎಂದು ಆರೋಪಿಗಳು ನೆರೆಹೊರೆಯವರ ಹೇಳಿರುವುದಾಗಿ ಪೊಲೀಸರು ಹೇಳಿದ್ದಾರೆ. ಆರು ತಿಂಗಳ ಹಿಂದೆ ವಿವಾಹವಾಗಿದ್ದ ಮಹಿಳೆಯ ತಲೆಯೊಂದಿಗೆ ಅವರು ಸೆಲ್ಫಿ ತೆಗೆದುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ತಾಯಿ ಮತ್ತು ಸಹೋದರ ಮಹಿಳೆಯೊಂದಿಗೆ ರಾಜಿ ಮಾಡಿಕೊಳ್ಳುವ ನೆಪದಲ್ಲಿ ಆಕೆಯ ಮನೆಗೆ ಹೋಗಿದ್ದರು. ಪತ್ನಿ ತನ್ನ ಸಹೋದರ ಮತ್ತು ತಾಯಿ ಜತೆ ಮುಕ್ತವಾಗಿ ಮಾತನಾಡಲಿ ಎಂದು ಸಂತ್ರಸ್ತೆಯ ಪತಿ ಕೊಠಡಿಯಿಂದ ಹೊರ ಬಂದಿದ್ದರು. ಮಹಿಳೆ ಚಹಾ ಮಾಡಲು ಅಡುಗೆ ಕೋಣೆಗೆ ಹೋದಾಗ, ಹರಿತವಾದ ಆಯುಧವನ್ನು ಹಿಡಿದಿದ್ದ ಸಹೋದರ ಆಕೆಯ ಮೇಲೆ ದಾಳಿ ಮಾಡಿ ಕತ್ತು ಕೊಯ್ದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಎಎನ್‌ಐಗೆ ತಿಳಿಸಿದ್ದಾರೆ.
ಮಹಿಳೆಯ ಪತಿ ರಕ್ಷಿಸಲು ಬರುವಷ್ಟರಲ್ಲಿ ಸಂತ್ರಸ್ತೆಯ ಸಹೋದರ ಆಕೆಯ ಶಿರಚ್ಛೇದ ಮಾಡಿದ್ದಾನೆ ಎಂದು ಅವರು ಹೇಳಿದರು. ಸಂತ್ರಸ್ತೆಯ ಪತಿ ತನ್ನ ಮೇಲೆಯೂ ಹಲ್ಲೆ ನಡೆಸಬಹುದೆಂಬ ಭಯದಿಂದ ಮನೆ ಬಿಟ್ಟು ಓಡಿ ಹೋಗಿದ್ದಾನೆ. ಸಂತ್ರಸ್ತೆಯ ತಾಯಿ ಮತ್ತು ಸಹೋದರ ವಿರ್ಗೋನ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು, ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸಂತ್ರಸ್ತೆ ಜೂನ್‌ನಲ್ಲಿ ಓಡಿಹೋಗಿ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದಳು. ಆಕೆಯ ತಾಯಿ ಕಳೆದ ವಾರ ಆಕೆಯನ್ನು ಸಂಪರ್ಕಿಸಿ ಆಕೆಯನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದು ಭಾನುವಾರ ಮಗನೊಂದಿಗೆ ಮಗಳ ಮನೆಗೆ ಮರಳಿದ್ದಳು.
ಭಾನುವಾರ ಅವರು ಬಂದಾಗ ಟೀ ಮಾಡುತ್ತಿದ್ದ ಮಗಳ ಮೇಲೆ ಹಿಂಬದಿಯಿಂದ ಹಲ್ಲೆ ನಡೆಸಲಾಗಿದೆ. ಆಕೆಯ ತಾಯಿ ಆಕೆಯ ಕಾಲನ್ನು ಹಿಡಿದುಕೊಂಡಿದ್ದು, ಕುಡುಗೋಲು ತಂದಿದ್ದ ಆಕೆಯ ಸಹೋದರ ಆಕೆಯ ತಲೆಯನ್ನು ಕತ್ತರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಕಪಕ್ಕದ ಮನೆಯವರು ನೋಡಲೆಂದು ತಲೆಯನ್ನು ಹೊರಕ್ಕೆ ಕೊಂಡೊಯ್ದಿದ್ದಾರೆ ಎನ್ನಲಾಗಿದೆ.
”ವಾರದ ಹಿಂದೆ ತಾಯಿ ಮಗಳನ್ನು ಭೇಟಿ ಮಾಡಿದ್ದರು. ಡಿ.5ರಂದು ಮತ್ತೆ ಮಗನೊಂದಿಗೆ ಬಂದಿದ್ದಳು. ಸಂತ್ರಸ್ತೆಯ ಮನೆ ಹೊಲದಲ್ಲಿದೆ. ಅತ್ತೆಯೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಳು. ತಾಯಿ ಮತ್ತು ಸಹೋದರನನ್ನು ನೋಡಿ ಅವಳು ಗದ್ದೆಯಲ್ಲಿ ಕೆಲಸ ಬಿಟ್ಟು ಇಬ್ಬರಿಗೂ ಉಪಚಾರ ಮಾಡಲು ಧಾವಿಸಿದವಳು ಇಬ್ಬರಿಗೂ ನೀರು ಕೊಟ್ಟು ಚಹಾ ಮಾಡಲು ಅಡುಗೆ ಮನೆಗೆ ಹೋದಳು.ಇದೇ ವೇಳೆಗೆ ಆಕೆಯ ಅಣ್ಣ ಹಿಂದಿನಿಂದ ಬಂದು ತಲೆ ಕಡಿದಿದ್ದಾನೆ ಎಂದು ವೈಜಾಪುರದ ಹಿರಿಯ ಪೋಲೀಸ್ ಕೈಲಾಶ್ ಪ್ರಜಾಪತಿ ಹೇಳಿದ್ದಾರೆ.
ಇದನ್ನೂ ಓದಿ: ನಾಗಾಲ್ಯಾಂಡ್‌ನಲ್ಲಿ ಸೇನೆಯಿಂದ ನಾಗರಿಕರ ಹತ್ಯೆ ಪ್ರಕರಣ: ಲೋಕಸಭೆಯಲ್ಲಿ ಅಮಿತ್ ಶಾ ವಿವರಣೆ