Crime Roundup: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಕಸಿದು ಪರಾರಿ, ಉದ್ಯಮಿ ಮನೆಯಲ್ಲಿ ಆಭರಣ ಕಳವು

ಆರೋಪಿಗಳನ್ನು ಬೆಂಗಳೂರಿಗೆ ಕರೆತಂದು ವಿಚಾರಣೆಗೆ ಒಳಪಡಿಸುವ ಪ್ರಕ್ರಿಯೆಗಳು ಆರಂಭವಾಗಿವೆ.

Crime Roundup: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಕಸಿದು ಪರಾರಿ, ಉದ್ಯಮಿ ಮನೆಯಲ್ಲಿ ಆಭರಣ ಕಳವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 05, 2021 | 10:02 PM

ಬೆಂಗಳೂರು: ನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಚಿನ್ನಾಭರಣ ಕಳುವು ಮಾಡಿ ಪರಾರಿಯಾಗಿದ್ದ ಕಳ್ಳರನ್ನು ನೇಪಾಳದ ಪೊಲೀಸರು ಬಂಧಿಸಿದ್ದಾರೆ. ಅವರನ್ನು ನಗರಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸುವ ಪ್ರಕ್ರಿಯೆಗಳು ಆರಂಭವಾಗಿವೆ. ನಗರದ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವೆಂಬರ್ 8ರಂದು‌ ಚಿನ್ನಾಭರಣ ಕಳುವಾಗಿತ್ತು. ಈ ಸಂಬಂಧ ಉದ್ಯಮಿ ವಾಂಕಿ ಪೆಂಚಾಲಯ್ಯ ಅವರು ಪೊಲೀಸರಿಗೆ ದೂರು ನೀಡಿದ್ದರು. ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ಲಾಲ್​ ಚಂದ್ರಸಿಂಗ್ ಶಾಹಿ ಠಾಕೂರ್ ಮತ್ತು ಕೋಮಲಾ ಮೇಲೆ ದೂರಿನಲ್ಲಿ ಅನುಮಾನ ವ್ಯಕ್ತಪಡಿಸಲಾಗಿತ್ತು. ನವೆಂಬರ್ 8ರಂದು ಇವರು ಚೆನ್ನೈನಲ್ಲಿರುವ ಮಗಳ ಗೃಹಪ್ರವೇಶಕ್ಕೆ ತೆರಳಿದ್ದಾಗ ಕಳ್ಳತನ ಮಾಡಿ ಪರಾರಿಯಾಗಿದ್ದರು. ಆರೋಪಿಗಳಿಂದ ₹ 3 ಕೋಟಿ‌ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಕಾರು ಕದ್ದಿದ್ದಾರೆ ಎಂದು ದೂರಲಾಗಿತ್ತು. ಕಾನೂನು ಪ್ರಕ್ರಿಯೆಗಳ ಬಳಿಕ ವಶಕ್ಕೆ ಪಡೆಯಲು ಸದಾಶಿವನಗರ ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ನೈಸ್ ರಸ್ತೆಯಲ್ಲಿ ಮೊಬೈಲ್ ಕಸಿದು ಪರಾರಿ ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಬಳಿ ವಿಳಾಸ ಕೇಳುವ ನೆಪದಲ್ಲಿ ಕರೀಗೌಡ ಎಂಬುವರ ಮೊಬೈಲ್ ಕಸಿದು ಮೂವರು ಪರಾರಿಯಾಗಿದ್ದಾರೆ. ನೈಸ್ ರಸ್ತೆಯ ಬಳಿ ಮೂತ್ರ ವಿಸರ್ಜನೆಗೆಂದು ಬೈಕ್ ನಿಲ್ಲಿಸಿದ್ದ ವೇಳೆ, ಮೂವರು ದುಷ್ಕರ್ಮಿಗಳು ₹ 25 ಸಾವಿರ ಮೌಲ್ಯದ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಮಿಕರ ಕಿತ್ತಾಟ: ಚಾಕು ಇರಿತ ನೆಲಮಂಗಲದ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಮಿಕರ ಕಿತ್ತಾಟದಲ್ಲಿ ಚಾಕು ಇರಿತದಿಂದ ಇಬ್ಬರಿಗೆ ಗಾಯಗಳಾಗಿವೆ. ಈ ವೈದ್ಯಕೀಯ ಕಾಲೇಜು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಸೇರಿದ್ದು. ಮಂಜುನಾಥ್ (22), ಅಂಬರೀಶ್(18) ಚಾಕು ಇರಿತಕ್ಕೊಳಗಾದ ಗಾಯಳುಗಳು. ಹಳೇ ವೈಷಮ್ಯದ ಮೇಲೆ ಸ್ಟೋರ್ ಕೀಪರ್ ಅಂಬರೀಶ್ ಕಾರ್ಮಿಕರಿಗೆ ಇರಿದಿದ್ದಾರೆ ಎಂದು ದೂರಲಾಗಿದೆ. ಗಾಯಳುಗಳಿಗೆ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಟ್ಟಡ ಸಾಮಾಗ್ರಿಗಳನ್ನು ಕೊಡುವ ವಿಚಾರದಲ್ಲಿ 3 ದಿನಗಳ ಹಿಂದೆ ಗಲಾಟೆ ನಡೆದಿತ್ತು. ಸ್ಟೋರ್ ಕೀಪರ್ ಅಂಬರೀಶ್ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Crime Update: ರೌಡಿಶೀಟರ್ ಕೊಲೆ ಪ್ರಕರಣದ 9 ಆರೋಪಿಗಳ ಬಂಧನ, ಹೆತ್ತವರ ಕಣ್ಣೆದುರು ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಮಗ ಇದನ್ನೂ ಓದಿ: ನಿಂತಿದ್ದ ಕ್ಯಾಂಟರ್​ಗೆ ಲಾರಿ ಡಿಕ್ಕಿಯಾಗಿ ನಾಲ್ವರ ದುರ್ಮರಣ, ಹಾಯ್ದ ಚಿಂದಿ ಹಂಚಿಕೊಳ್ಳುವ ವಿಚಾರಕ್ಕೆ ಕೊಲೆ ಮಾಡಿದ ಆರೋಪಿಗಳು ಅರೆಸ್ಟ್

Published On - 9:44 pm, Sun, 5 December 21