AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime Update: ರೌಡಿಶೀಟರ್ ಕೊಲೆ ಪ್ರಕರಣದ 9 ಆರೋಪಿಗಳ ಬಂಧನ, ಹೆತ್ತವರ ಕಣ್ಣೆದುರು ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಮಗ

ಅಲಮೇಲ ಪಟ್ಟಣದಲ್ಲಿ ಯಲ್ಲಮ್ಮ ದೇವರ ಚೌಡಕಿ ಹಾಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರದೀಪನನ್ನು ಕಲ್ಲು ಹಾಗೂ ಬಡಿಗೆಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು

Crime Update: ರೌಡಿಶೀಟರ್ ಕೊಲೆ ಪ್ರಕರಣದ 9 ಆರೋಪಿಗಳ ಬಂಧನ, ಹೆತ್ತವರ ಕಣ್ಣೆದುರು ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಮಗ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Dec 04, 2021 | 7:59 PM

Share

ವಿಜಯಪುರ: ಆಲಮೇಲ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ, ರೌಡಿಶೀಟರ್ ಪ್ರದೀಪ ಎಂಟಮಾನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಒಂಬತ್ತು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಪಟ್ಟಿಯಲ್ಲಿ ಒಟ್ಟು 13 ಮಂದಿಯ ಹೆಸರುಗಳಿವೆ. ಭೀಮು, ಸಂಜು, ಗೌತಮ್, ಮುತ್ತು, ಪಿಂಟು, ಶಿವಪುತ್ರ, ವೀರೇಶ್​, ಸತೀಶ್​​ ಹಾಗೂ ದೇವು ಬಂಧಿತರು. ಡಿ.2ರಂದು ವಿಜಯಪುರ ಜಿಲ್ಲೆ ಆಲಮೇಲದಲ್ಲಿ ಹತ್ಯೆ ನಡೆದಿತ್ತು. ಅಲಮೇಲ ಪಟ್ಟಣದಲ್ಲಿ ಯಲ್ಲಮ್ಮ ದೇವರ ಚೌಡಕಿ ಹಾಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರದೀಪನನ್ನು ಕಲ್ಲು ಹಾಗೂ ಬಡಿಗೆಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು. ಮೇಲಿನಮನಿ ಕುಟುಂಬದವರು ರಾಜಕೀಯ ದ್ವೇಷದಿಂದ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬೈಕ್-ಕಾರ್ ಅಪಘಾತ: ವ್ಯಕ್ತಿ ಸಾವು ಮೈಸೂರು: ಕಾರು-ಬೈಕ್‌ ನಡುವೆ ಸರಣಿ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಹುಣಸೂರು ಮುಖ್ಯರಸ್ತೆ ಪಡುವಾರಹಳ್ಳಿ ಜಂಕ್ಷನ್ ಬಳಿ ನಡೆದಿದೆ. ಮೃತನನ್ನು ಅನಂತಶೆಟ್ಟಿ (58) ಎಂದು ಗುರುತಿಸಲಾಗಿದೆ. ಸಿದ್ದಪ್ಪ ಮತ್ತು ಇತರ ಇಬ್ಬರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಚಿಂದಿ ಆಯುವವನ ಕೊಲೆ: ಆರೋಪಿಗಳ ಬಂಧನ ಮೈಸೂರು: ನಗರದಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣದ ಆರೋಪಿಗಳನ್ನು ಕೆ.ಆರ್.ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಶಿಕುಮಾರ್, ರಾಮಲಿಂಗು ಬಂಧಿತರು. ಪರಾರಿಯಾಗಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆಯ್ದ ಚಿಂದಿ ಮಾರಾಟದ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಜಗಳವಾಗಿ, ಚಂದ್ರು ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿತ್ತು ಎಂದು ಆರೋಪಿಗಳು ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾರೆ.

ತಂದೆ-ತಾಯಿ ಕಣ್ಣೆದುರೇ ಹಳ್ಳದಲ್ಲಿ ಕೊಚ್ಚಿಹೋದ ಉದಯ್ ಮಂಡ್ಯ: ತಂದೆ ತಾಯಿ ಎದುರಿನಲ್ಲೇ ಮಗ ಹಳ್ಳದಲ್ಲಿ ಕೊಚ್ಚಿ ಹೋದ ದುರ್ಘಟನೆ ಜಿಲ್ಲೆಯ ಕೈಗೋನಹಳ್ಳಿಯಲ್ಲಿ ನಡೆದಿದೆ. ಶಿವಲಿಂಗೇಗೌಡ ಮತ್ತು ಜಯಮ್ಮ ಅವರ ಒಬ್ಬನೇ ಮಗ ಉದಯ್ ಮೃತ ಯುವಕ. ಕಳೆದ 30 ವರ್ಷಗಳಿಂದ ಮುಂಬೈನಲ್ಲಿ ಎಂಜಿನಿಯರ್​ ಆಗಿದ್ದ ಉದಯ್ ಕೊರೊನಾ ಹೆಚ್ಚಳದಿಂದಾಗಿ ಕೆಲವು ತಿಂಗಳ ಹಿಂದೆ ಕುಟುಂಬ ಸಹಿತ ಬೆಂಗಳೂರಿಗೆ ಬಂದಿದ್ದರು. ಶ್ರವಣಬೊಳಗೋಳಕ್ಕೆ ಹೋಗಿದ್ದ ಉದಯ್ ರಾತ್ರಿ ಹತ್ತು ಗಂಟೆ ಸುಮಾರಿಗೆ ಮನೆಗೆ ಬರುತ್ತಿದ್ದೇನೆ ಎಂದಿದ್ದರು. ರಾತ್ರಿ 11 ಗಂಟೆ ಕಳೆದರೂ ಉದಯ್ ಮನೆಗೆ ಬಂದಿರಲಿಲ್ಲ.

ಅಪ್ಪ-ಅಮ್ಮ ಮಗನನ್ನು ಹುಡುಕಲು ಹೊರಟರು. ಈ ಸಂದರ್ಭ ಸಾರಂಗಿ ಬಳಿಯ ಹಳ್ಳದ ನೀರಿನಲ್ಲಿ ಉದಯ್ ಸಿಲುಕಿದ್ದು ಕಂಡುಬಂತು. ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಬೈಕ್ ಹಿಡಿದು ಕುಳಿತಿದ್ದ ಮಗನನ್ನು ಕಾಪಾಡಲು ಉದಯ್ ತಂದೆ ಶಿವಲಿಂಗೇಗೌಡ ಹಳ್ಳಕ್ಕೆ ಧುಮುಕಿದರು. ಆದರೆ ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ತಂದೆ ಶಿವಲಿಂಗೇಗೌಡ ಕಷ್ಟಪಟ್ಟು ಈಜಿ ದಡ ಸೇರಿದರಾದರೂ, ಈಜಲು ಸಾಧ್ಯವಾಗದ ಉದಯ್ ನೀರುಪಾಲಾದರು.

ಬೈಕ್ ಕಳ್ಳನ ಬಂಧನ ಬೆಂಗಳೂರು: ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಗಲಿನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನು ಗಮನಿಸುತ್ತಿದ್ದ ಕಳ್ಳ ರಾತ್ರಿ ವೇಳೆ ಬಂದು ಅವನ್ನು ಕದ್ದೊಯ್ಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಇಬ್ಬರು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಇದನ್ನೂ ಓದಿ: Crime News: ಎಸಿಬಿ ಬಲೆಗೆ ಗ್ರಾಮಲೆಕ್ಕಾಧಿಕಾರಿ, ತುಮಕೂರು ಜೈಲಿನ ಮೇಲೆ ಪೊಲೀಸರ ದಾಳಿ, ಸೇನೆಗೆ ಸೇರಲು ದಾಖಲೆ ತಿದ್ದುಪಡಿ

Follow Us
Web contact
Web contact

TV9 Kannada

Read More
ಹುಡುಗಿಗಾಗಿ ಟವರ್ ಏರಿದ್ದ ಯವಕನನ್ನ ಮನವೊಲಿಸಿ ಕೆಳಗಿಳಿಸಿದ್ಹೇಗೆ?
ಹುಡುಗಿಗಾಗಿ ಟವರ್ ಏರಿದ್ದ ಯವಕನನ್ನ ಮನವೊಲಿಸಿ ಕೆಳಗಿಳಿಸಿದ್ಹೇಗೆ?
ಬೆಂಗಳೂರು ಅಂತಾರಾಷ್ಟ್ರೀಯ ಸ್ಟೇಡಿಯಂ ಗುದ್ದಲಿ ಪೂಜೆಗೆ ಕ್ರಿಕೆಟ್ ದಿಗ್ಗಜರು
ಬೆಂಗಳೂರು ಅಂತಾರಾಷ್ಟ್ರೀಯ ಸ್ಟೇಡಿಯಂ ಗುದ್ದಲಿ ಪೂಜೆಗೆ ಕ್ರಿಕೆಟ್ ದಿಗ್ಗಜರು
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ