ಮಂಡ್ಯ, ಮೈಸೂರಿನ ದೇವಸ್ಥಾನಗಳಲ್ಲಿ ದೇವರ ವಿಗ್ರಹ ಧ್ವಂಸ; ಒಂದೇ ದಿನದಲ್ಲಿ ಆರೋಪಿಯ ಬಂಧನ
ಆರೋಪಿ ಮೈಸೂರಿನ ಸಾಲಿಗ್ರಾಮ ಪೊಲೀಸ್ ಠಾಣೆಯ ವ್ಯಾಪ್ತಿಯ ಎರಡು ದೇವಸ್ಥಾನ ಹಾಗೂ ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ದೇವಸ್ಥಾನಗಳ ವಿಗ್ರಹಗಳು ಹಾಗೂ ದೇಗುಲಕ್ಕೆ ಸಂಬಂಧಿಸಿದ ವಸ್ತುಗಳನ್ನು ಹಾಳು ಮಾಡಿದ್ದ.
ಮೈಸೂರು: ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಎರಡು ದೇವಸ್ಥಾನಗಳ ದೇವರ ವಿಗ್ರಹಗಳನ್ನು ಧ್ವಂಸ ಮಾಡಿದ ಆರೋಪದಲ್ಲಿ ಮೈಸೂರು ಜಿಲ್ಲಾ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಮಂಗಳವಾರ ರಾತ್ರಿ ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಎರಡು ದೇಗುಲಗಳ ವಸ್ತುಗಳು ಹಾಗೂ ಮತ್ತೆರಡು ದೇವಾಲಯಗಳ ವಿಗ್ರಹಗಳನ್ನು ಹಾಳು ಮಾಡಿದ ವಿಷಯ ಗೊತ್ತಾದ 24 ಗಂಟೆಗಳು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಕೆ.ಆರ್ ನಗರ ತಾಲೂಕಿನ ಚಿಕ್ಕಬೇರ್ಯ ಗ್ರಾಮದವನಾಗಿದ್ದು, ಆತನನ್ನು ಕೆಆರ್ ಪೇಟೆಯ ಬೀರವಳ್ಳಿ ಗ್ರಾಮದ ಬಳಿ ಬಂಧಿಸಲಾಗಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಆರೋಪಿ ಮೈಸೂರಿನ ಸಾಲಿಗ್ರಾಮ ಪೊಲೀಸ್ ಠಾಣೆಯ ವ್ಯಾಪ್ತಿಯ ಎರಡು ದೇವಸ್ಥಾನ ಹಾಗೂ ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ದೇವಸ್ಥಾನಗಳ ವಿಗ್ರಹಗಳು ಹಾಗೂ ದೇಗುಲಕ್ಕೆ ಸಂಬಂಧಿಸಿದ ವಸ್ತುಗಳನ್ನು ಹಾಳು ಮಾಡಿದ್ದ. ನಂತರ ಊರಿನಿಂದ ತಲೆ ಮರೆಸಿಕೊಂಡು ಪಾರಿಯಾಗಿದ್ದ. ದೇವರ ವಿಗ್ರಹಗಳನ್ನು ಹಾಳು ಮಾಡಿದ ಬಗ್ಗೆ ದೂರು ದಾಖಲಾಗಿತ್ತು.
ಇದು ಕೋಮುಗಲಭೆಯನ್ನು ಉಂಟುಮಾಡುವಂತಹ ಸೂಕ್ಷ್ಮ ವಿಷಯವಾದ್ದರಿಂದ ಈ ಘಟನೆಯ ತನಿಖೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ಆ ತಂಡ ಒಂದೇ ದಿನದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿ ಯಾವ ಕಾರಣಕ್ಕಾಗಿ ಹೀಗೆ 2 ಜಿಲ್ಲೆಗಳ ನಾಲ್ಕು ದೇವಸ್ಥಾನಗಳಲ್ಲಿ ಈ ಕೃತ್ಯ ಎಸಗಿದ್ದಾನೆ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: ಸುದೀಪ್ಗಾಗಿ ದೇವಸ್ಥಾನ: ಕಿಚ್ಚನ 4 ಅಡಿ ಮೂರ್ತಿ ಎದುರು ಪುನೀತ್ ರಾಜ್ಕುಮಾರ್ ಭಾವಚಿತ್ರ
ಚಿಕ್ಕಬಳ್ಳಾಪುರ: ದೇವಸ್ಥಾನದಲ್ಲಿ ನಿಗೂಢ ಸಾವು ಪ್ರಕರಣ; ಸಾಯುವುದಕ್ಕೂ ಮುನ್ನ ಮಾಡಿರುವ ವಿಡಿಯೋ ವೈರಲ್
Published On - 2:03 pm, Thu, 9 December 21